
ಲಿಂಗಸುಗೂರು : ಸುಕ್ಷೇತ್ರ ಅಮರೇಶ್ವರ ದೇವರ ದರ್ಶನಕ್ಕೆ ತೆರಳುತ್ತಿದ್ದ ಮಹಿಳಾ ಪ್ರಯಾಣಿಕರನ್ನು ಕರೆದೊಯ್ಯಲು ಸಾರಿಗೆ ಸಂಸ್ಥೆ ಬಸ್‌ನ ನಿರ್ವಾಹಕ ತಪ್ಪು ಮಾಹಿತಿ ನೀಡಿ ಮಹಿಳಾ ಪ್ರಯಾಣಿಕರನ್ನ ನಿಲ್ದಾಣದಲ್ಲಿ ಬಿಟ್ಟು ಹೋದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಲಿಂಗಸುಗೂರು ಬಸ್ ನಿಲ್ದಾಣದಲ್ಲಿ ಗುಂತಗೋಳ ಮಾರ್ಗದ ಅಮರೇಶ್ವರ ಬಸ್ ಚಾಲಕ ಮತ್ತು ನಿರ್ವಾಹಕರು ಬಸ್ ಏರಿದ್ದ ಪ್ರಯಾಣಿಕರನ್ನು ಇಳಿಸಿ ಹೋಗಿದ್ದರಿಂದ ಕೆಲ ಸಮಯ ಬಸ್ ನಿಲ್ದಾಣದಲ್ಲಿ ಮಹಿಳೆಯರು ಆತಂಕಕ್ಕೆ ಒಳಗಿದ್ದರು. ಪ್ರಯಾಣಿಕರು ಇಳಿಯಲು ನಿರಾಕರಿಸಿದಾಗ ಬಸ್ ದುರಸ್ತಿ ಇದೆ. ಅಮರೇಶ್ವರಕ್ಕೆ ಹೋಗುವವರು ಬರಬೇಡಿ ಎಂದು ತಪ್ಪು ಮಾಹಿತಿ ನೀಡಿದ್ದಾರೆ. ಮಹಿಳೆಯರು ರಾತ್ರಿ ಎಲ್ಲಿ ಉಳಿಯಬೇಕು ಎಂದು ನಿಲ್ದಾಣದ ಸಂಚಾರ ನಿಯಂತ್ರಕಿಯೊಂದಿಗೆ ಮಹಿಳೆಯರು ವಾಗ್ವಾದ ನಡೆಸಿದರು. ಇನ್ನು ಮಾಹಿತಿ ತಿಳಿಯುತ್ತಿದ್ದಂತೆ ಸಾರಿಗೆ ಘಟಕ ವ್ಯವಸ್ಥಾಪಕ ರಾಹುಲ್ ವನಸೂರೆ, ಬಸ್ ನಿಲ್ದಾಣಕ್ಕೆ ಬಂದು ಪರ್ಯಾಯ ಬಸ್ ವ್ಯವಸ್ಥೆ ಕಲ್ಪಿಸಿ ಪ್ರಯಾಣಿಕರನ್ನು ಸಮಾಧಾನ ಗೊಳಿಸಿದ್ದಾರೆ.
![]() |
![]() |
![]() |
![]() |
![]() |
[ays_poll id=3]