
ರಾಯಚೂರು : ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ 1,35,840 ಕ್ಯೂಸೆಕ್ ನೀರು ನರಿಗೆ ಬಿಡಲಾಗಿದ್ದು, ಪ್ರವಾಹ ಭೀತಿ ಎದುರಾಗಿದೆ ಈಗಾಗಲೇ ಶೀಲಹಳ್ಳಿ ಸೇತುವೆ ಮುಳುಗಡೆ ಹಂತಕ್ಕೆ ತಲುಪಿದ ಹಿನ್ನೆಲೆ ಲಿಂಗಸ್ಗೂರು ಸಹಾಯಕ ಆಯುಕ್ತರು ಸೇರಿ ಅಧಿಕಾರಿಗಳ ದಂಡು ಪ್ರವಾಹ ಭೀತಿ ಹಳ್ಳಿಗಳಿಗೆ ಭೇಟಿ ನೀಡಿ ಎಚ್ಚರಿಕೆ ನೀಡುತ್ತಿದೆ.
ನಾರಾಯಣಪುರ ಜಲಾಶಯದ 24 ಗೇಟುಗಳ ಮುಖಾಂತರ 1,35,840 ಕ್ಯೂಸೆಕ್ ನೀರು ಬಿಟ್ಟಿರುವ ಹಿನ್ನೆಲೆಯಲ್ಲಿ ಲಿಂಗಸುಗೂರು ತಾಲೂಕಿನ ಶೀಲಹಳ್ಳಿ ಸೇತುವೆ ಮುಳುಗಡೆ ಆಗುತ್ತಿರುವುದರಿಂದ ಸಂಬಂಧಿಸಿದ ಅಧಿಕಾರಿ, ಸಿಬ್ಬಂಧಿಗಳು ಗ್ರಾಮ ಪಂಚಾಯತ್ ವಿಪತ್ತು ನಿರ್ವಹಣಾ ಸಮಿತಿಗಳು ಶೀಲಹಳ್ಳಿ ಸೇತುವೆ ಹತ್ತಿರ ಸೂಕ್ತ ಭದ್ರತೆ ನೀಡಲಾಗಿದೆ.
ಅಲ್ಲದೆ ಜನ-ಜಾನುವಾರುಗಳು ಕೃಷ್ಣ ನದಿಗೆ ತೆರಳದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ, ಪ್ರವಾಹದ ಮುನ್ನೆಚ್ಚರಿಕೆ ಕುರಿತು ಗ್ರಾಮಗಳಲ್ಲಿ, ಟಾಮ್-ಟಾಮ್, ಮೈಕ್ ಡಂಗೂರ ಸಾರಲಾಗುತ್ತಿದೆ. ಲಿಂಗಸುಗೂರು ಸಹಾಯಕ ಆಯುಕ್ತರು ಸೀಲಹಳ್ಳಿ ಸೇತುವೆಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಯಾರನ್ನು ಕೂಡ ಸೇತುವೆ ಮೇಲೆ ಪ್ರಯಾಣಿಸಿದಂತೆ ಪೊಲೀಸ್ ನಿಯೋಜನೆ ಮಾಡಿಸಿದ್ದಾರೆ.
![]() |
![]() |
![]() |
![]() |
![]() |
[ays_poll id=3]