K2 ಹೆಲ್ತ್ ಟಿಪ್: ತಾಮ್ರದ ನೀರನ್ನು ಶುದ್ಧೀಕರಿಸುತ್ತದೆ. ಇದ್ರಲ್ಲಿನ ನೀರು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ನಿಮ್ಮ ದೇಹಕ್ಕೆ ಯಾವುದೇ ಕಾಯಿಲೆಗಳ ಅಪಾಯ ಕಾಡುವುದಿಲ್ಲ ಅಂತ ಕೆಲವರು ತಾಮ್ರದ ಪಾತ್ರೆಯಲ್ಲಿ ನೀರನ್ನು ತುಂಬಿಟ್ಟು ಕುಡಿಯುತ್ತಾರೆ. ಆದರೆ ಇದನ್ನು ಅತಿಯಾಗಿ ಸೇವಿಸಿದರೆ ಆರೋಗ್ಯಕ್ಕೆ ಹಾನಿಕಾರಕವಂತೆ.
ತಾಮ್ರದ ನೀರು ಕುಡಿಯುವುದರಿಂದ ಆಮ್ಲೀಯತೆ ಸಮಸ್ಯೆ ಹೆಚ್ಚಾಗುತ್ತದೆ. ಹಾಗಾಗಿ ಆಯಸಿಡಿಟಿ ಸಮಸ್ಯೆ ಇರುವವರು ತಾಮ್ರದ ನೀರನ್ನು ಕುಡಿಯಬೇಡಿ. ತಾಮ್ರದ ನೀರನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಆದರೆ ಆಹಾರ ಸೇವಿಸಿದ ನಂತರ ತಾಮ್ರದ ನೀರು ಕುಡಿಯುವುದರಿಂದ ಹಾನಿಯಾಗುತ್ತದೆಯಂತೆ. ಇದನ್ನು ಆಹಾರ ಸೇವಿಸಿದ ಬಳಿಕ ಕುಡಿದರೆ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಕಾಡುತ್ತದೆಯಂತೆ.
ನೀವು ತಾಮ್ರದ ನೀರನ್ನು ಕುಡಿದು ಆರೋಗ್ಯ ಪ್ರಯೋಜನವನ್ನು ಪಡೆಯಲು ಬಯಸುವವರು ತಾಮ್ರದ ಪಾತ್ರೆಯಲ್ಲಿ ಕನಿಷ್ಠ 8 ಗಂಟೆಗಳ ಕಾಲ ನೀರನ್ನು ಇರಿಸಿ. 48 ಗಂಟೆಗಳ ಕಾಲ ನೀರನ್ನು ತುಂಬಿಡಬೇಡಿ.
![]() |
![]() |
![]() |
![]() |
![]() |
[ays_poll id=3]