This is the title of the web page
This is the title of the web page

archive118 ಮಂದಿ ಗೈರು

Health & Fitness

ರುಚಿಗೂ ಒಳ್ಳೇದು ಆರೋಗ್ಯಕ್ಕೂ ಒಳ್ಳೆಯದು, ಈ ಮೆಂತೆ ಸೊಪ್ಪು ದೋಸೆ

ಮನೆಯಲ್ಲಿ ಮೆಂತೆಸೊಪ್ಪು ತಂದಿದ್ದು ಇದ್ದರೆ ಅದರಿಂದ ರುಚಿಕರವಾದ ದೋಸೆ ಮಾಡಿಕೊಂಡು ಸವಿಯಿರಿ. ಇದು ಆರೋಗ್ಯಕ್ಕೂ ತುಂಬಾ ಒಳ್ಳೆಯದು, ಹಾಗೇ ದೋಸೆ ಕೂಡ ರುಚಿಯಾಗಿರುತ್ತದೆ. ಬೇಕಾಗುವ ಸಾಮಗ್ರಿಗಳು: ಮೆಂತೆ...
Health & Fitness

ಮನೆ ಮದ್ದು ಬಳಸಿ, ಸೌಂದರ್ಯ ಆರೋಗ್ಯ ಎರಡೂ ಕಾಪಾಡಿಕೊಳ್ಳಿ

K2‌ ಹೆಲ್ತ್ ಟಿಪ್ : ಪ್ರಸ್ತುತ ದಿನಗಳಲ್ಲಿ ಬಾಹ್ಯ ಸೌಂದರ್ಯಕ್ಕೆ ಹೆಚ್ಚು ಹೊತ್ತು ಕೊಡುತ್ತಿದ್ದೇವೆ. ನಾವು ಉತ್ತಮ ಆಹಾರ , ಕೆಲವು ಮನೆ ಮದ್ದು ಬಳಸುವುದರಿಂದ, ನಮ್ಮ ಸೌಂದರ್ಯ ಆರೋಗ್ಯ ಎರಡೂ ಕೂಡ ಉತ್ತಮವಾಗಿರುತ್ತದೆ. ಹಾಗಾಗಿ ನಾವಿಂದು ಹೆಸರುಕಾಳನ್ನು ಬಳಸಿ ಹೇಗೆ ನಾವು ಸೌಂದರ್ಯ, ಆರೋಗ್ಯ ಹೆಚ್ಚಿಸಿಕೊಳ್ಳಬಹುದು. ಹೆಸರುಕಾಳನ್ನು ಪುಡಿ ಮಾಡಿ, ಒಂದು ಡಬ್ಬದಲ್ಲಿ ಹಾಕಿಟ್ಟುಕೊಳ್ಳಿ. ಪ್ರತಿದಿನ ಮುಖ ತೊಳೆಯುವಾಗ, ಸೋಪಿನ ಬದಲು ಈ ಪುಡಿಯನ್ನು ಬಳಸಿ. ಇದರಿಂದ ಮುಖ ಸಾಫ್ಟ್ ಆಗಿರುತ್ತದೆ. ಗುಳ್ಳೆ, ಮೊಡವೆ ಕಲೆಗಳಿದ್ದರೆ, ಅದು ಕೂಡ ಮಾಯವಾಗುತ್ತದೆ. ಒಂದು ವಾರಕ್ಕಾಗುವಷ್ಟು ಹೆಸರುಕಾಳನ್ನು ಪುಡಿ ಮಾಡಿ ಇಟ್ಟುಕೊಳ್ಳಬಹುದು. ರಾತ್ರಿ ಹೆಸರು ಕಾಳು ನೆನೆಹಾಕಿ, ಮರುದಿನ ಅದನ್ನ ಸ್ಮೂತ್ ಆಗಿ ಪೇಸ್ಟ್ ಮಾಡಿಕೊಳ್ಳಿ. ಅದಕ್ಕೆ ಕೊಂಚ ಜೇನುತುಪ್ಪ ಬೆರೆಸಿ, ಫೇಸ್‌ಪ್ಯಾಕ್ ಹಾಕಿ. 15 ನಿಮಿಷದ ಬಳಿಕ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆದುಕೊಳ್ಳಿ. ವಾರದಲ್ಲಿ ಒಮ್ಮೆ...
Health & Fitness

ಮನೆಯಲ್ಲಿಯೇ ತಯಾರಿಸಿ ಆರೋಗ್ಯಕರ ಟುಟ್ಟಿ, ಪ್ರುಟ್ಟಿ ಕೇಕ್..

K2 ನ್ಯೂಸ್ ಡೆಸ್ಕ್ : ಕೇಕ್ ಅಂದ್ರೆ ಮಕ್ಕಳಿಗೆ ತುಂಬಾ ಇಷ್ಟ, ಕೆಲವೊಮ್ಮೆ ವಿಶೇಷವಾದುದನ್ನು ತಿನ್ನಲು ಮನಸ್ಸು ಬಯಸುತ್ತದೆ. ಅದ್ರಲ್ಲೂ ಚಳಿಗಾಲದಲ್ಲಿ ಸಿಹಿ ತಿನ್ನುವ ಹಂಬಲ ಹೆಚ್ಚಾಗುತ್ತದೆ. ಆದರೆ ಬೇಕರಿ ವಸ್ತುಗಳನ್ನು ಸೇವಿಸಿದರೆ ತೂಕ ಹೆಚ್ಚಾಗುತ್ತದೆ, ಆರೋಗ್ಯ ಕೆಡುತ್ತದೆ ಎಂಬ ಚಿಂತೆ ಕಾಡುತ್ತದೆ. ಹಾಗಾಗಿ ಬೇಕರಿಯಲ್ಲಿ ಮೈದಾದಿಂದ ತಯಾರಿಸಿದ ಕೇಕ್ ತಿನ್ನುವ ಬದಲು ಮನೆಯಲ್ಲಿಯೇ ರವಾದಿಂದ ತಯಾರಿಸಿದ ಕೇಕ್ ತಯಾರಿಸಿ ಸೇವಿಸಿ. ಬೇಕಾಗುವ ಸಾಮಾಗ್ರಿಗಳು : 1 ಕಪ್ ರವಾ, ½ ಕಪ್ ಪುಡಿ ಸಕ್ಕರೆ, ¼ ಕಪ್ ಆಲಿವ್ ಆಯಿಲ್, ವೆನಿಲ್ಲಾ ಎಸೆನ್ಸ್ 5 ಹನಿ, 1 ಚಮಚ ಬೇಕಿಂಗ್ ಪೌಡರ್, ½ ಚಮಚ ಅಡುಗೆ ಸೋಡಾ, ½ ಕಪ್ ಮಜ್ಜಿಗೆ, ½ ಕಪ್ ಟುಟ್ಟಿ ಫ್ರುಟ್ಟಿ. ಮಾಡುವ ವಿಧಾನ : ರವಾವನ್ನು ಫಿಲ್ಟರ್ ಮಾಡಿ ಮತ್ತು ಮಜ್ಜಿಗೆಯಲ್ಲಿ 30 ನಿಮಿಷಗಳ ಕಾಲ ನೆನೆಸಿಡಿ. ಪುಡಿ...
Health & Fitness

ಅತಿಯಾಗಿ ತಾಮ್ರದ ಪಾತ್ರೆಯಲ್ಲಿ ನೀರು ಕುಡಿಯುವುದು ಹಾನಿಕಾರಕ..

K2 ಹೆಲ್ತ್ ಟಿಪ್: ತಾಮ್ರದ ನೀರನ್ನು ಶುದ್ಧೀಕರಿಸುತ್ತದೆ. ಇದ್ರಲ್ಲಿನ ನೀರು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ನಿಮ್ಮ ದೇಹಕ್ಕೆ ಯಾವುದೇ ಕಾಯಿಲೆಗಳ ಅಪಾಯ ಕಾಡುವುದಿಲ್ಲ ಅಂತ ಕೆಲವರು ತಾಮ್ರದ ಪಾತ್ರೆಯಲ್ಲಿ ನೀರನ್ನು ತುಂಬಿಟ್ಟು ಕುಡಿಯುತ್ತಾರೆ. ಆದರೆ ಇದನ್ನು ಅತಿಯಾಗಿ ಸೇವಿಸಿದರೆ ಆರೋಗ್ಯಕ್ಕೆ ಹಾನಿಕಾರಕವಂತೆ. ತಾಮ್ರದ ನೀರು ಕುಡಿಯುವುದರಿಂದ ಆಮ್ಲೀಯತೆ ಸಮಸ್ಯೆ ಹೆಚ್ಚಾಗುತ್ತದೆ. ಹಾಗಾಗಿ ಆಯಸಿಡಿಟಿ ಸಮಸ್ಯೆ ಇರುವವರು ತಾಮ್ರದ ನೀರನ್ನು ಕುಡಿಯಬೇಡಿ. ತಾಮ್ರದ ನೀರನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಆದರೆ ಆಹಾರ ಸೇವಿಸಿದ ನಂತರ ತಾಮ್ರದ ನೀರು ಕುಡಿಯುವುದರಿಂದ ಹಾನಿಯಾಗುತ್ತದೆಯಂತೆ. ಇದನ್ನು ಆಹಾರ ಸೇವಿಸಿದ ಬಳಿಕ ಕುಡಿದರೆ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಕಾಡುತ್ತದೆಯಂತೆ. ನೀವು ತಾಮ್ರದ ನೀರನ್ನು ಕುಡಿದು ಆರೋಗ್ಯ ಪ್ರಯೋಜನವನ್ನು ಪಡೆಯಲು ಬಯಸುವವರು ತಾಮ್ರದ ಪಾತ್ರೆಯಲ್ಲಿ ಕನಿಷ್ಠ 8 ಗಂಟೆಗಳ ಕಾಲ ನೀರನ್ನು ಇರಿಸಿ. 48 ಗಂಟೆಗಳ ಕಾಲ ನೀರನ್ನು ತುಂಬಿಡಬೇಡಿ....
Health & Fitness

ಮಕ್ಕಳಿಗೆ ಮಾಡಿಕೊಡಿ ರುಚಿಕರವಾದ ಲೆಮನ್ ಬಟರ್ ಕುಕ್ಕೀಸ್..

K2 ಹೆಲ್ತ್ ಟಿಪ್ : ಯಾವ ಮಕ್ಕಳಿಗೆ ಕುಕ್ಕೀಸ್ ಅಂದ್ರೆ ಇಷ್ಟ ಇಲ್ಲ ಹೇಳಿ. ಶಾಲೆಗೆ ಪ್ರತಿನಿತ್ಯ ಒಂದೇ ರೀತಿ ಸ್ನ್ಯಾಕ್ಸ್ ಕೊಟ್ಟರೆ ಮಕ್ಕಳು ತಿನ್ನುವುದಕ್ಕೆ ಕೇಳುವುದಿಲ್ಲ. ರುಚಿಕರವಾದ ಲೆಮನ್ ಬಟರ್ ಕುಕ್ಕೀಸ್ ಅನ್ನು ಒಮ್ಮೆ ಅವರಿಗೆ ಮಾಡಿಕೊಡಿ. ಬೇಕಾಗುವ ಸಾಮಗ್ರಿಗಳು: 2 ಕಪ್- ಮೈದಾ, 1 ಟೀ ಸ್ಪೂನ್- ಬೇಕಿಂಗ್ ಪೌಡರ್, ¼ ಟೀ ಸ್ಪೂನ್- ಬೇಕಿಂಗ್ ಸೋಡಾ, 8 ಟೇಬಲ್ ಸ್ಪೂನ್- ಬೆಣ್ಣೆ, 1 ಕಪ್-ಸಕ್ಕರೆ ಪುಡಿ, ಕ್ರೀಂ ಚೀಸ್-5 ಪೀಸ್, 1 ಮೊಟ್ಟೆ, 2 ಟೇಬಲ್ ಸ್ಪೂನ್-ಲಿಂಬೆಹಣ್ಣಿನ ರಸ, ¼ ಟೀ ಸ್ಪೂನ್- ವೆನಿಲ್ಲಾ ಎಸೆನ್ಸ್, 5 ಹನಿ-ಹಳದಿ ಫುಡ್ ಕಲರ್, ಮಾಡುವ ವಿಧಾನ : ಒಂದು ಬೌಲ್ ಗೆ ಮೈದಾ, ಬೇಕಿಂಗ್ ಪೌಡರ್ ಬೇಕಿಂಗ್ ಸೋಡಾ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇನ್ನೊಂದು ಬೌಲ್ ಗೆ ಬೆಣ್ಣೆ, ಕ್ರೀಂ ಚೀಸ್, ಸಕ್ಕರೆ...
Health & Fitness

ಈ ವಸ್ತುಗಳೊಂದಿಗೆ ಯಾವುದೇ ಕಾರಣಕ್ಕೂ ನೇರಳೆ ಹಣ್ಣು ತಿನ್ನಬೇಡಿ..!

K2 ಹೆಲ್ತ್ ಟಿಪ್ : ಹೆಚ್ಚು ಪೋಷಕಾಂಶಗಳನ್ನು ಮತ್ತು ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಹಣ್ಣು ನೇರಳೆ ಹಣ್ಣು. ಆದರೆ ಈ ಹಣ್ಣಿನೊಂದಿಗೆ ಯಾವುದೇ ಕಾರಣಕ್ಕೂ ಕೆಲವು ವಸ್ತುಗಳನ್ನು ತಿನ್ನಬಾರದು ಅದರಿಂದ ಅನಾರೋಗ್ಯಕ್ಕೂ ಈಡಾಗಬಹುದು. ನೇರಳೆ ಹಣ್ಣಿನಲ್ಲಿ ಅಡಗಿವೆ ಪೋಷಕಾಂಶಗಳು : ನೇರಳೆ ಹಣ್ಣು ನೋಡುವುದಕ್ಕೆ ಸಣ್ಣದಾಗಿರಬಹುದು. ಆದರೆ ಇದರಲ್ಲಿ  ಪೋಷಕಾಂಶಗಳ ಕೊರತೆಯಿರುವುದಿಲ್ಲ. ಇದನ್ನು ತಿಂದರೆ ದೇಹಕ್ಕೆ ಕಬ್ಬಿಣ, ಕ್ಯಾಲ್ಸಿಯಂ, ರಂಜಕ, ಸೋಡಿಯಂ, ಮೆಗ್ನೀಷಿಯಂ, ವಿಟಮಿನ್ ಬಿ ಮತ್ತು ವಿಟಮಿನ್ ಸಿ ಯಥೇಚ್ಛವಾಗಿ ದೊರೆಯುತ್ತದೆ. ನೇರಳೆ ಹಣ್ಣಿನ ಪ್ರಯೋಜನಗಳು : ಮೊದಲೇ ಹೇಳಿದಂತೆ ನೇರಳೆ ಹಣ್ಣು ಆರೋಗ್ಯದ ಗಣಿ. ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು, ರಕ್ತದೊತ್ತಡವನ್ನು ನಿಯಂತ್ರಿಸಲು, ಹಲ್ಲುಗಳನ್ನು ಸ್ವಚ್ಛಗೊಳಿಸಲು, ಒಸಡುಗಳಲ್ಲಿ ರಕ್ತಸ್ರಾವವನ್ನು  ತಡೆಯಲು, ತೂಕ ನಷ್ಟಕ್ಕೆ  ನೇರಳೆ ಹಣ್ಣು ಸಹಕಾರಿ. ಆದರೆ ಈ ಹಣ್ಣಿನೊಂದಿಗೆ 3 ವಸ್ತುಗಳನ್ನು ತಿನ್ನಬಾರದು. ಉಪ್ಪಿನಕಾಯಿ ಉಪ್ಪಿನಕಾಯಿ ತಿನ್ನುವುದರಿಂದ ಆಹಾರದ ರುಚಿ ಹೆಚ್ಚುತ್ತದೆ.  ನೇರಳೆ...
State News

ನಾನು ಪ್ರತಿದಿನ ಜನತಾ ದರ್ಶನ ಮಾಡುವ ಮುಖ್ಯಮಂತ್ರಿ – ಸಿಎಂ

K2 ನ್ಯೂಸ್ ಡೆಸ್ಕ್ : ನನ್ನ ಕ್ಷೇತ್ರದ ಜನ ನನ್ನನ್ನ ಬಹಳ ಪ್ರೀತಿ ಮಾಡ್ತಾರೆ. ನನ್ನ ಕ್ಷೇತ್ರಕ್ಕೆ ಬಂದಾಗ ಅವರಿಗೆ ವಿಶೇಷವಾದ ಸಮಯ ಕೊಡುವ ಅವಶ್ಯಕತೆ ಇದೆ. ಅವರಿಗೆ ತಮ್ಮ ಅವಹಾಲುಗಳನ್ನು ಹೇಳಲು ಅವಕಾಶ ಮಾಡಿಕೊಟ್ಟಿದ್ದೆ. ನಾನು ಪ್ರತಿದಿನ ಜನತಾ ದರ್ಶನ ಮಾಡುವ ಮುಖ್ಯಮಂತ್ರಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಅವರು ಇಂದು ಶಿಗ್ಗಾಂವಿಯಲ್ಲಿ ಜನತಾ ದರ್ಶನ ನಡೆಸಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಕುಂದುಕೊರತೆಗಳನ್ನು ಆಲಿಸಿ ಮಾತನಾಡಿದರು. ನಮ್ಮ ಕ್ಷೇತ್ರದ ಜನತೆ ಮಾತ್ರವಲ್ಲದೇ ಬೆಳಗಾವಿ, ಬಳ್ಳಾರಿ, ಕುಂದಗೋಳ, ಹಾನಗಲ್ ಜನತೆ ಸಹ ಬಂದು ಅವಹಾಲು ಸಲ್ಲಿಸಿದ್ದಾರೆ. ಹೆಚ್ಚಿನವರು ಕೆಲಸ ಮತ್ತು ತಮ್ಮ ಮನೆಗಳ ಬಗ್ಗೆ ಹೇಳಿಕೊಂಡಿದ್ದಾರೆ. ಜತೆಗೆ ತಮ್ಮ ಊರಿನ ಅಭಿವೃದ್ಧಿಯ ಬಗ್ಗೆಯೂ ಕೆಲವರು ಮಾತನಾಡಿದ್ದಾರೆ. ಇದಕ್ಕೆ ಹೆಚ್ಚಿನ ಪ್ರಾಶಸ್ತ್ಯ ಕೊಟ್ಟು ಕೆಲಸ ಮಾಡುತ್ತಿದ್ದೇನೆ. ಜನರ ಅವಹಾಲುಗಳಿಗೆ ಸಂಬಂಧಪಟ್ಟ ಅಧಿಕಾರಿಗಳಿಂದ ಕೆಲಸ ಆಗುತ್ತದೆ ಎಂದು ಮುಖ್ಯಮಂತ್ರಿ...