
K2 ನ್ಯೂಸ್ ಡೆಸ್ಕ್ : ಪ್ರತಿನಿತ್ಯ ನಾವು ಎಲ್ಲಿಗಾದರೂ ಹೋಗುವ ಸಂದರ್ಭದಲ್ಲಿ ಅಥವಾ ಸ್ನೇಹಿತರೊಂದಿಗೆ ಹೊರಗೆ ಹೋದಂತಹ ಸಂದರ್ಭದಲ್ಲಿ ಸಾಮಾನ್ಯವಾಗಿ 20 ರೂಪಾಯಿ ಕೊಟ್ಟು 1 ಲೀಟರ್ ನೀರಿನ ಬಾಟಲ್ ಅನ್ನ ಖರೀದಿಸುತ್ತೇವೆ. ಆದರೆ ಆ ಬಾಟಲ್ ನಿಜವಾಗಲೂ ಎಷ್ಟು ಖರ್ಚಾಗುತ್ತೆ ಗೊತ್ತಾ..
ದಿ ಅಟ್ಲಾಂಟಿಕ್ ನಲ್ಲಿ ಅರ್ಥಶಾಸ್ತ್ರಜ್ಞ ಡೆರೆಕ್ ಥಾಂಪ್ಸನ್ ಪ್ಯಾಕೇಜ್ಡ್ ಕುಡಿಯುವ ನೀರಿನ ವೆಚ್ಚದ ವ್ಯವಹಾರವನ್ನು ವಿಶ್ಲೇಷಿಸಿದ್ದಾರೆ. ಡೆರೆಕ್ ಥಾಂಪ್ಸನ್ ಪ್ರಕಾರ, ಬೃಹತ್ ಪ್ರಮಾಣದಲ್ಲಿ ತಯಾರಿಸುವುದರಿಂದ ಕಂಪನಿಗಳು ಒಂದು ಲೀಟರ್ ಪ್ಲಾಸ್ಟಿಕ್ ಬಾಟಲಿಗೆ 80 ಪೈಸೆ ಪಾವತಿಸಬೇಕಾಗುತ್ತದೆ. ಒಂದು ಲೀಟರ್ ನೀರಿನ ಬೆಲೆ 1 ರೂಪಾಯಿ 20 ಪೈಸೆ ಬರುತ್ತದೆ.
ನೀರನ್ನು ಶುದ್ಧೀಕರಿಸಲು ತಗಲುವ ವೆಚ್ಚ 3 ರೂಪಾಯಿ 40 ಪೈಸೆ. ಹೆಚ್ಚುವರಿ ವೆಚ್ಚವಾಗಿ ಕಂಪನಿಯು 1 ರೂಪಾಯಿ ಖರ್ಷು ಮಾಡುತ್ತದೆ. ಹೀಗೆ ಎಲ್ಲ ಖರ್ಚು ಭರಿಸಿ ಕಂಪನಿಗಳು 6 ರೂಪಾಯಿ 40 ಪೈಸೆಗೆ ನೀರಿನ ಬಾಟಲಿ ಪಡೆಯುತ್ತಿವೆ. ಅದನ್ನು 20 ರೂಪಾಯಿಗೆ ಮಾರಾಟ ಮಾಡಿ 3 ಪಟ್ಟು ಹೆಚ್ಚು ಲಾಭ ಗಳಿಸುತ್ತಿದ್ದಾರೆ.
ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್ ಅನ್ನು ಇಷ್ಟು ದುಬಾರಿ ಬೆಲೆಗೆ ಖರೀದಿಸಿದ ನಂತರವೂ ಆ ನೀರು ಸುರಕ್ಷಿತವೇ ಎಂಬುದು ಪ್ರಶ್ನೆ. ದುಬಾರಿ ಬ್ರಾಂಡ್ ನೀರು ಶುದ್ಧತೆಯ ಸಂಕೇತವಲ್ಲ. ಭಾರತ ಸರ್ಕಾರವು 2014-15ನೇ ಸಾಲಿನಲ್ಲಿ ಬಾಟಲಿ ನೀರಿನ ಗುಣಮಟ್ಟವನ್ನು ಪರೀಕ್ಷೆಗೆ ಒಳಪಡಿಸಿತ್ತು. ಅದರ ಫಲಿತಾಂಶಗಳಲ್ಲಿ ಅರ್ಧಕ್ಕಿಂತ ಹೆಚ್ಚು ಬ್ರಾಂಡ್‌ಗಳ ಗುಣಮಟ್ಟ ಕಳಪೆಯಾಗಿದೆ ಎಂಬುದು ಬಹಿರಂಗವಾಗಿತ್ತು. ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದ ನೀರಿನ ಗುಣಮಟ್ಟ ಕಳಪೆಯಾಗಿತ್ತು.
ಕಳೆದ 20 ವರ್ಷಗಳಿಂದ ಭಾರತದಲ್ಲಿ ಪ್ಯಾಕೇಜ್ಡ್ ಕುಡಿಯುವ ನೀರಿನ ವ್ಯವಹಾರವು ವೇಗವಾಗಿ ಬೆಳೆಯುತ್ತಿದೆ. ಇದು ಮೊದಲು ಪ್ರಾರಂಭವಾಗಿದ್ದು ಪಾಶ್ಚಿಮಾತ್ಯ ದೇಶಗಳಲ್ಲಿ. ಈಗ ಸಂಪೂರ್ಣವಾಗಿ ತನ್ನ ಬೇರುಗಳನ್ನು ಭಾರತದಲ್ಲೂ ಸ್ಥಾಪಿಸಿದೆ. ದೇಶದಲ್ಲಿ ಪ್ರವಾಸೋದ್ಯಮದ ಬೆಳವಣಿಗೆಯ ಜೊತೆಗೆ ಕುಡಿಯುವ ನೀರಿನ ಬಾಟಲಿಗಳ ಮಾರಾಟವೂ ಜೋರಾಗಿದೆ. ಪ್ರಸ್ತುತ ಭಾರತದಲ್ಲಿ 5 ಸಾವಿರಕ್ಕೂ ಹೆಚ್ಚು ತಯಾರಕರು ಬಾಟಲಿ ನೀರಿನ ವ್ಯಾಪಾರದಲ್ಲಿ ತೊಡಗಿದ್ದಾರೆ. ಅವರು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ಪರವಾನಗಿಯನ್ನು ಹೊಂದಿದ್ದಾರೆ.
![]() |
![]() |
![]() |
![]() |
![]() |
[ays_poll id=3]