This is the title of the web page
This is the title of the web page
Health & Fitness

ಈ ವಸ್ತುಗಳೊಂದಿಗೆ ಯಾವುದೇ ಕಾರಣಕ್ಕೂ ನೇರಳೆ ಹಣ್ಣು ತಿನ್ನಬೇಡಿ..!


K2 ಹೆಲ್ತ್ ಟಿಪ್ : ಹೆಚ್ಚು ಪೋಷಕಾಂಶಗಳನ್ನು ಮತ್ತು ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಹಣ್ಣು ನೇರಳೆ ಹಣ್ಣು. ಆದರೆ ಈ ಹಣ್ಣಿನೊಂದಿಗೆ ಯಾವುದೇ ಕಾರಣಕ್ಕೂ ಕೆಲವು ವಸ್ತುಗಳನ್ನು ತಿನ್ನಬಾರದು ಅದರಿಂದ ಅನಾರೋಗ್ಯಕ್ಕೂ ಈಡಾಗಬಹುದು.

ನೇರಳೆ ಹಣ್ಣಿನಲ್ಲಿ ಅಡಗಿವೆ ಪೋಷಕಾಂಶಗಳು : ನೇರಳೆ ಹಣ್ಣು ನೋಡುವುದಕ್ಕೆ ಸಣ್ಣದಾಗಿರಬಹುದು. ಆದರೆ ಇದರಲ್ಲಿ  ಪೋಷಕಾಂಶಗಳ ಕೊರತೆಯಿರುವುದಿಲ್ಲ. ಇದನ್ನು ತಿಂದರೆ ದೇಹಕ್ಕೆ ಕಬ್ಬಿಣ, ಕ್ಯಾಲ್ಸಿಯಂ, ರಂಜಕ, ಸೋಡಿಯಂ, ಮೆಗ್ನೀಷಿಯಂ, ವಿಟಮಿನ್ ಬಿ ಮತ್ತು ವಿಟಮಿನ್ ಸಿ ಯಥೇಚ್ಛವಾಗಿ ದೊರೆಯುತ್ತದೆ.

ನೇರಳೆ ಹಣ್ಣಿನ ಪ್ರಯೋಜನಗಳು :
ಮೊದಲೇ ಹೇಳಿದಂತೆ ನೇರಳೆ ಹಣ್ಣು ಆರೋಗ್ಯದ ಗಣಿ. ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು, ರಕ್ತದೊತ್ತಡವನ್ನು ನಿಯಂತ್ರಿಸಲು, ಹಲ್ಲುಗಳನ್ನು ಸ್ವಚ್ಛಗೊಳಿಸಲು, ಒಸಡುಗಳಲ್ಲಿ ರಕ್ತಸ್ರಾವವನ್ನು  ತಡೆಯಲು, ತೂಕ ನಷ್ಟಕ್ಕೆ  ನೇರಳೆ ಹಣ್ಣು ಸಹಕಾರಿ. ಆದರೆ ಈ ಹಣ್ಣಿನೊಂದಿಗೆ 3 ವಸ್ತುಗಳನ್ನು ತಿನ್ನಬಾರದು.

ಉಪ್ಪಿನಕಾಯಿ
ಉಪ್ಪಿನಕಾಯಿ ತಿನ್ನುವುದರಿಂದ ಆಹಾರದ ರುಚಿ ಹೆಚ್ಚುತ್ತದೆ.  ನೇರಳೆ ಹಣ್ಣು   ತಿನ್ನುವ ಮೊದಲು ಅಥವಾ ನಂತರ ಉಪ್ಪಿನಕಾಯಿ ಸೇವಿಸಿದರೆ, ವಾಂತಿ,  ಗ್ಯಾಸ್ ಮತ್ತು ಎದೆಯುರಿ  ಸಮಸ್ಯೆಗಳು ಎದುರಾಗಬಹುದು.

ಹಾಲು :
ನೇರಳೆ ಹಣ್ಣನ್ನು ಹಾಲು ಅಥವಾ ಹಾಲಿನ ಉತ್ಪನ್ನಗಳೊಂದಿಗೆ ತಿನ್ನಬಾರದು.  ಹಾಲು ಮತ್ತು ನೇರಳೆ ಹಣ್ಣನ್ನು ಒಟ್ಟಿಗೆ ತಿಂದರೆ ಅಜೀರ್ಣ, ಗ್ಯಾಸ್, ಹೊಟ್ಟೆ ನೋವಿನ  ಸಮಸ್ಯೆ ಕಾಣಿಸಿಕೊಳ್ಳಬಹುದು. ಈ ಕಾರಣದಿಂದಾಗಿ ನೇರಳೆ ಹಣ್ಣು ತಿನ್ನುವ ಮೊದಲು ಅಥವಾ ತಿಂದ ನಂತರ ತಕ್ಷಣ ಹಾಲು ಕುಡಿಯಬಾರದು.

ಅರಿಶಿನ :
ಅರಿಶಿನ ಕೂಡಾ ನಮ್ಮ ಆರೋಗ್ಯಕ್ಕೆ ಬಹಳಷ್ಟು ಲಾಭ ನೀಡುತ್ತದೆ. ಇದರಲ್ಲಿ ಅನೇಕ ಔಷಧೀಯ ಗುಣಗಳು ಅಡಗಿವೆ. ಆದರೆ ಇದನ್ನು ಎಂದಿಗೂ ನೇರಳೆ  ಹಣ್ಣಿನೊಂದಿಗೆ ತಿನ್ನಬಾರದು. ಈ ಎರಡು ವಸ್ತುಗಳು ಪರಸ್ಪರ ಪ್ರತಿಕ್ರಿಯಿಸುತ್ತವೆ. ಇದರಿಂದ ಹೊಟ್ಟೆ ನೋವು, ಅಲರ್ಜಿಗಳು ಸಂಭವಿಸುವ ಅಪಾಯ ಎದುರಾಗುತ್ತದೆ.

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಬೇಕು. K2 NEWS ಅದನ್ನು ಖಚಿತಪಡಿಸುವುದಿಲ್ಲ.)


[ays_poll id=3]