This is the title of the web page
This is the title of the web page
Crime NewsLocal NewsVideo News

ಟಿಶ್ಯು ಪೇಪರ್ ವಿಚಾರಕ್ಕೆ ಯುವಕರ ಮೇಲೆ ಮಾರಣಾಂತಿಕ ಹಲ್ಲೆ..?


ರಾಯಚೂರು : ಟಿಶ್ಯೂ ಪೇಪರ್ ಕೇಳಿದ ವಿಚಾರಕ್ಕೆ ಕಸ್ಟಮರ್ ಮೇಲೆ ಚೂರಿ ಹಿಡಿದು ಹಲ್ಲೆ ಮಾಡಿದ ಘಟನೆ, ರಾಯಚೂರು ಜಿಲ್ಲೆಯ ‌ಮಾನ್ವಿ ಪಟ್ಟಣದಲ್ಲಿ ನಡೆದ ಅಪ್ಪು ದಾಬಾ ಬಳಿ ನಡೆದಿದೆ.

ಪಟ್ಟಣದ ಅಪ್ಪು ಧಾಬಾ ಮುಂಭಾಗದಲ್ಲಿ ಇರುವ ಪಾನ್ ಶಾಪ್ ಮಾಲೀಕನಿಂದ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ಜರುಗಿದೆ. ದಾಬಾಕ್ಕೆ ಊಟಕ್ಕೆ ಬಂದಿದ್ದ ರಮೇಶ್ & ಸತ್ತರ್ ಪಾನ್ ಷಾಪ್ ಮಾಲೀಕ ವಿರೇಶ್ ಗೆ ವ್ಹೇಟರ ಟಿಶ್ಯೂ ಪೇಪರ್ ತಾ ಎಂದಿದ್ದಾರೆ. ಇದೆ ವಿಚಾರಕ್ಕೆ ವಿರೇಶ್ & ಸತ್ತರ್ ಪ್ರೆಂಡ್ಸ್ ನಡುವೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಇದರಿಂದ ಕೋಪಗೊಂಡ ಪಾನ್ ಶಾಪ್ ಮಾಲೀಕ ವಿರೇಶ್ ಈರುಳ್ಳಿ ಎಚ್ಚಲು ಇಟ್ಟಿದ್ದ ಚಾಕುವಿನಿಂದ ರಮೇಶ್ ಮತ್ತು ಸತ್ತರ್ ಎಂಬುವ ಯುವಕರ ಮೇಲೆ ಚೂರಿಯಿಂದ ಹಲ್ಲೆ ಮಾಡಿದ್ದಾನೆ.

ವೀರೇಶ್ ಯುವಕರ ಮೇಲೆ ಹಲ್ಲೆ ಮಾಡಿರುವ ವಿಡಿಯೋವೊಂದು ಸಿಸಿ ಕ್ಯಾಮೆರಾದಲ್ಲಿ ಸರಿಯಾಗಿದೆ. ಗಂಭೀರವಾಗಿ ಗಾಯಗೊಂಡ ಇಬ್ಬರು ಗಾಯಾಳುಗಳನ್ನ ಮಾನ್ವಿ ಮತ್ತು ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಾನ್ ಶಾಪ್ ಮಾಲೀಕ ವೀರೇಶ್ ಅವರನ್ನು ಪೊಲೀಸರು ವಶಕ್ಕೆ ಪಡೆದು ತನಖೆ ಆರಂಭಿಸಿದ್ದಾರೆ.


[ays_poll id=3]