This is the title of the web page
This is the title of the web page
Local NewsVideo News

ಸೇತುವೆ ಮುಳುಗಡೆ, ಗ್ರಾಮಸ್ಥರ ಪರದಾಟ


ಲಿಂಗಸುಗೂರು : ರಾಂಪುರ ಏತ ನೀರಾವರಿ ಯೋಜನೆ ಕಾಲುವೆಯ ಹೆಚ್ಚುವರಿ ನೀರು ಹಾಗೂ ರಾತ್ರಿ ಸುರಿದ ಮಳೆಯಿಂದಾಗಿ ರಾಯಚೂರು ಜಿಲ್ಲೆಯ ಲಿಂಗಸೂಗುರು ತಾಲೂಕಿನ ಜಾಗಿರನಂದಿಹಾಳ ಗ್ರಾಮದ ಹಳ್ಳ ಭರ್ತಿಯಾಗಿ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಸಂಚಾರಕ್ಕೆ ಹರಸಾಹಸ ಪಡುವಂತಾಗಿದೆ.

ಹೌದು ರಾಂಪುರ ಏತ ನೀರಾವರಿ ಯೋಜನೆ ಕಾಲುವೆಯ ಹೆಚ್ಚುವರಿ ನೀರನ್ನು ಜಾಗಿರನಂದಿಹಾಳ-ಆನಾಹೊಸೂರು ನಡುವಿನ ಹಳ್ಳಕ್ಕೆ ಹರಿಬಿಡಲಾಗುತ್ತಿದೆ. ಹಳ್ಳಕ್ಕೆ ಅನೇಕ ವರ್ಷಗಳ ಹಿಂದೆ ಚಿಕ್ಕದಾಗಿ ಸೇತುವೆ ನಿರ್ಮಾಣ ಮಾಡಲಾಗಿದೆ, ಸ್ವಲ್ಪ ಪ್ರಮಾಣದಲ್ಲಿ ನೀರು ಹರಿದರೂ ಸೇತುವೆ ಮುಳುಗಡೆಯಾಗುತ್ತಿದೆ. ಹರಿಯುವ ನೀರಲ್ಲಿಯೇ ಗ್ರಾಮಸ್ಥರು ನಡೆದುಕೊಂಡು ಅಥವಾ ಬೈಕ್‌ಗಳ ಮೂಲಕ ಆನಾಹೊಸೂರು ಗ್ರಾಮಕ್ಕೆ ತೆರಳುವುದು ಅನಿವಾರ್ಯವಾಗಿದೆ. ರಾಂಪುರ ಏತ ನೀರಾವರಿ ಕಾಲುವೆಯ ಹೆಚ್ಚುವರಿ ಹಾಗೂ ಮಳೆ ನೀರು ಹರಿದು ಬಂದಿದ್ದರಿಂದ ಎರಡ್ಮೂರು ದಿನಗಳಿಂದ ಹಳ್ಳದಲ್ಲಿ ನೀರಿನ ಮಟ್ಟ ಹೆಚ್ಚಾಗಿರುವುದರಿಂದ ಹಳ್ಳದಾಟಿ ಹೋಗುವುದೇ ಗ್ರಾಮಸ್ಥರಿಗೆ ದೊಡ್ಡ ಸವಾಲಾಗಿದೆ.

ಜಾಗಿರನಂದಿಹಾಳ ಗ್ರಾಮದ ಹಳ್ಳದ ಸೇತುವೆ ನಿರ್ಮಾಣಕ್ಕೆ ಹಿಂದಿನ ಶಾಸಕ ಡಿ.ಎಸ್.ಹೂಲಗೇರಿ ಅವರು 2.50 ಕೋಟಿ ರೂ ಅನುದಾನ ಕೆಬಿಜೆಎನ್‌ಎಲ್ ಮೂಲಕ ಬಿಡುಗಡೆಗೊಳಿಸಿದ್ದರು. ಆದರೆ ಅಧಿಕಾರಿಗಳ ವಿಳಂಬ ನೀತಿಯಿಂದ 11 ತಿಂಗಳ ನಂತರ ಟೆಂಡರ್ ಕರೆಯಲಾಗಿದೆ. ಆದ್ರೂ ಕಾಮಗಾರಿ ಆರಂಭವಾಗಿಲ್ಲ ಎಂದು ಗ್ರಾಮಸ್ಥರು ಆರೋಪ.


[ays_poll id=3]