ಲಿಂಗಸುಗೂರು : ಚುನಾವಣಾ ವರ್ಷ ಆರಂಭವಾಗಿದೆ. ಲಿಂಗಸುಗೂರು ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಬಲಾಬಲ ಪ್ರದರ್ಶನ ಆರಂಭವಾಗಿದೆ. ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾದ ಬಳಿಕ ನೂರಾರು ಕೋಟಿಯ ಆಗರ್ಭ...
ಲಿಂಗಸೂಗೂರು : ತಾಲೂಕಿನಲ್ಲಿ ಅದ್ಯಾಕೋ ಕೆಲ ಅಧಿಕಾರಿಗಳು ಕೆಲಸದ ಸಮಯದಲ್ಲಿಯೇ ಮಧ್ಯಪಾನ ಮಾಡುವ ಪ್ರವೃತ್ತಿ ಬೆಳೆಸಿಕೊಂಡಂತೆ ಕಾಣುತ್ತಿದೆ, ಇತ್ತೀಚಿಗಷ್ಟೇ ಹಟ್ಟಿ ವ್ಯಾಪ್ತಿಯಲ್ಲಿ ಶಾಲಾ ಶಿಕ್ಷಕರು ಶಾಲಾ ಸಮಯದಲ್ಲಿ...
ಲಿಂಗಸೂಗೂರು : ತಾಲೂಕಿನ ಹಟ್ಟಿ ಚಿನ್ನದಗಣಿ ಗಣಿಗಾರಿಕೆ, ಖನಿಜಾಂಶ ಅಧ್ಯಯನ, ಸಂಶೋಧನಾ ಕಾರ್ಯಗಳಿಗೆ ಮಾರ್ಗದರ್ಶಿಯಾಗಿರುವ ಹಾಗೂ ವಿವಿಧ ರೀತಿಯ ಕಲ್ಲುಗಳ ಸಂಗ್ರಹವಿರುವ 'ಕೋರ್ ಗ್ರಂಥಾಲಯ'(ಕಲ್ಲಿನ ಗ್ರಂಥಾಲಯ) ರಾಜ್ಯದ...
ಲಿಂಗಸುಗೂರು : ತಾಲೂಕಿನ ಮಾಜಿ ಶಾಸಕ ಮಾನಪ್ಪ ವಜ್ಜಲ್ ಇವರು ಕ್ಷೇತ್ರದ ಅಭಿವೃದ್ಧಿಗೆ ಚಿಂತನೆ ಮಾಡದೆ ಕೇವಲ ಅಭಿವೃದ್ಧಿ ಹೆಸರಿನಲ್ಲಿ ಲೂಟಿ ಮಾಡುವ ಮೂಲಕ ಗುತ್ತಿಗೆದಾರಿಕೆ ಉಳಿಸಿಕೊಳ್ಳಲು...
ಲಿಂಗಸುಗೂರು : ತಾಲೂಕಿನ ಗುಂತಗೋಳ ಗ್ರಾಮದಲ್ಲಿ ಡೆಂಗ್ಯೂ ಹಾಗೂ ಝಿಕಾ ವೈರಸ್ ಜ್ವರ ಕುರಿತು ಆರೋಗ್ಯೆ ಇಲಾಖೆಯು ಸಾರ್ವಜನಿಕರಿಗೆ ಮುಂಜಾಗ್ರತೆ ಮಾಹಿತಿ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು....
ಲಿಂಗಸುಗೂರು : ಒಂದು ಪಹಣಿ ತಿದ್ದುಪಡಿ ಮಾಡಬೇಕಂದ್ರೆ ಅಲ್ಲಿನ ಲೆಕ್ಕಾಧಿಕಾರಿಗಳಿಗೆ 5000 ಕೊಡಲೇಬೇಕು, ಕಡಿಮೆ ಏನಾದರೂ ಕೊಟ್ರೆ ನನಗೆ ಕುಡಿಯೋದಿಲ್ಲ ಇನ್ನ ಮೇಲಾಧಿಕಾರಿಗಳಿಗೆ ಏನು ಕೊಡಬೇಕು ಅಂತ...
ಲಿಂಗಸುಗೂರು: ವಾತಾವರಣದ ವೈಪರಿತ್ಯ ಇದೀಗ ಕಡಲೆ, ಶೇಂಗಾ ಬೆಳೆಗಾರರನ್ನು ಸಂಕಷ್ಟಕ್ಕೆ ಸಲುಕಿಸುತ್ತಿದೆ. ಕಡಲೆ ಬೆಳೆಗೆ ಹಸಿರು, ಕಂದು ಬಣ್ಣದ ಹುಳು ಕಾಟ ಹೆಚ್ಚಾಗಿದ್ದು, ರೈತರನ್ನು ಕಂಗಾಲಾಗಿಸಿದೆ. ರಾಯಚೂರು...
ಲಿಗಸುಗೂರು: 371 (ಜೆ ) ಸಂಪೂರ್ಣ ಫಲ ಸಿಗುತ್ತಿಲ್ಲ. ಸರ್ಕಾರ ಮೀನಾಮೇಷಗಳನ್ನು ಎಣಿಸದೆ ಜನರ ಜೀವನ ಮಟ್ಟವನ್ನು ಹೆಚ್ಚಿಸುವ ಕ್ರಿಯಾಶೀಲತೆಯನ್ನು ತೋರಿಸಬೇಕಾಗಿದೆ. ಜಿಲ್ಲೆಗಳಲ್ಲಿ ಅನೇಕ ಸಮಸ್ಯೆಗಳಿವೆ. ಸಾಕಷ್ಟು ಸಂಪನ್ಮೂಲಗಳಿದ್ದರೂ ಅವುಗಳ ಲಾಭ ಬೇರೆ ಜನ ಪಡೆದುಕೊಳ್ಳುತ್ತಿದ್ದಾರೆ. ಈ ಭಾಗದ ಎಲ್ಲ ಹೋರಾಟಗಳ ಬದುಕಿಗೆ ಮಾಧ್ಯಮಗಳು ಧ್ವನಿಯಾಗಿ ನಿಲ್ಲುತ್ತಿರುವುದು ನಮಗೆ ಸ್ಫೂರ್ತಿಯಾಗಿದೆ ಎಂದು ಸಾಹಿತಿ ವೀರಹನುಮಾನ ಹೇಳಿದರು. ಜಿಲ್ಲೆಯಲ್ಲಿ ಸಮೃದ್ಧ ಸಂಪನ್ಮೂಲಗಳಿವೆ. ಎರಡು ನದಿಗಳು ಹರಿಯುತ್ತಿವೆ. ಆದರೂ ನೀರಿನ ದಾಹ ತೀರಿಸಲಾಗುತ್ತಿಲ್ಲ. ಏರುತ್ತಿರುವ ಬಿಸಿಲಿನ ತಾಪವಿದೆ, ಬತ್ತಿದ ಕೆರೆಗಳು , ಬಡತನ , ದಾರಿದ್ರ್ಯ ನಮ್ಮ ಜೊತೆಯಲ್ಲಿಯೇ ನೆಲೆಯಾಗಿವೆ. ಕೃಷಿಗೆ ಅದರಲ್ಲೂ ಹತ್ತಿ , ಭತ್ತಕ್ಕೆ ಹೆಸರಾದ ನಮ್ಮ ಜಿಲ್ಲೆ ಆ ಹೆಸರನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿಲ್ಲ. ರೈತರ ಬಾಳನ್ನು ಹಸನು ಮಾಡುವ , ಆತ ಹೆಮ್ಮೆಯಿಂದ ಬಾಳುವ ಪರಿಸ್ಥಿತಿ ನಿರ್ಮಾಣವಾಗಿಲ್ಲ' ಎಂದು ಕಳವಳ ವ್ಯಕ್ತಪಡಿಸಿದರು. ಜಿಲ್ಲೆಯ...
ಲಿಂಗಸುಗೂರು : ಸಂವಿದಾನದ 371(ಜೆ), ಕಲಂನಡಿ ಐಐಟಿ ನೀಡಬೇಕಿತ್ತು, ಹಿಂದುಳಿದ ರಾಯಚೂರು ಜಿಲ್ಲೆಗೆ ಐಐಟಿ ಕೈತಪ್ಪಲು ಜಿಲ್ಲೆಯ ನಪುಂಸಕ ರಾಜಕಾರಣವೇ ಕಾರಣ ಎಂದು ಇಲ್ಲಿನ ರಾಜಕಾರಣಿಗಳ ವೈಫಲ್ಯವನ್ನು ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ ಬಹಿರಂಗವಾಗಿ ಒಪ್ಪಿಕೊಂಡರು. 11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಐಐಟಿ ನೀಡುವಂತೆ ಸರ್ಕಾರದ ಮೇಲೆ ಒತ್ತಡ ಹೇರಲಾಗಿತ್ತು. ಇದರ ಜೊತೆಗೆ ಸಂವಿದಾನದ 371(ಜೆ), ಕಲಂನಡಿ ಐಐಟಿ ನೀಡಬೇಕಿತ್ತು. ಆದರೆ, ರಾಜಕೀಯ ಇಚ್ಛಾಶಕ್ತಿ, ಜಿಲ್ಲೆಯ ನಾಯಕತ್ವದ ವೈಫಲ್ಯದಿಂದ ಐಐಟಿ ಸಿಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ಏಮ್ಸ್ ನೀಡಬೇಕೆಂದು ಈಗಾಗಲೆ ಹಲವು ಬಗೆ ಹೋರಾಟಗಳು ನಡೆದಿವೆ. ಆದರೂ ಸರ್ಕಾರ ಗಮನಿಸುತ್ತಿಲ್ಲ. ಆದರೆ ಏಮ್ಸ್ ನೀಡದೇ ಹೋದರೆ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದು, ಜಿಲ್ಲೆಗೆ ಏಮ್ಸ್ ನೀಡಬೇಕೆಂಬ ಒತ್ತಡ ಹಿನ್ನೆಲೆಯಲ್ಲಿ ಸರ್ಕಾರ ಏಮ್ಸ್ ಬೇರೆ ಕಡೆ ನೀಡಿಲ್ಲ....