This is the title of the web page
This is the title of the web page
Crime News

ಶೆಡ್ಡಿಗೆ ಬೆಂಕಿ ಸಜೀವ ದಹನವಾದ ಆಕಳು ಕರು


ಲಿಂಗಸುಗೂರು : ಮನೆಯ ಪಕ್ಕದಲ್ಲಿ ಇದ್ದ ಶೆಡ್ಡಿಗೆ ಬೆಂಕಿ ತಗಲಿ ಆಕಳು ಕರು ಒಂದು ಸಜೀವ ದಹನವಾದ ಘಟನೆ ತಾಲೂಕಿನ ಚಿತ್ತಾಪೂರ ಗ್ರಾಮದಲ್ಲಿ ನಡೆದಿದೆ.

ಕಳೆದ ರಾತ್ರಿ ಒಂದು ಗಂಟೆಗೆ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿದ್ದು, ಮನೆಯವರ ಗಮನಕ್ಕೆ ಬಂದಿಲ್ಲ. ಈ ವೇಳೆ ಶೆಡ್ಡಿನಲ್ಲಿ ಇಟ್ಟಿದ್ದ ಬೆಳೆ, ಗೊಬ್ಬರ ಮತ್ತು ಹೊಸ ಮನೆಗಾಗಿ ತಂದಿಟ್ಟ ಬಾಗಿಲು ಸೇರಿ ಈ ಶಡ್ಡಿನಲ್ಲಿ ಕಟ್ಟಿ ಹಾಕಲಾಗಿದ್ದ, ಆಕಳುಕರು ಸುಟ್ಟು ಕರಕಲಾಗಿದೆ. ಲಿಂಗಸುಗೂರು ತಾಲೂಕಿನ ಚಿತ್ತಾಪುರ ಗ್ರಾಮದಲ್ಲಿನ ಹನೀಫ್ ಸಾಬ್ ಎಂಬುವರ ಮನೆಯಲ್ಲಿ ನಡೆದ ಘಟನೆಯಾಗಿದೆ. ಬಡ ಕೂಲಿ ಕಾರ್ಮಿಕನ ಮನೆಗೆ ಬೆಂಕಿ ತಗುಲಿ ಶೇಡ್ ನಲ್ಲಿ ಇದ್ದ ಸುಮಾರು ಒಂದು ಲಕ್ಷದ ಐವತ್ತು ಸಾವಿರದಷ್ಟು ಹಾನಿಯಾಗಿದೆ ಎಂದು ಹೇಳಲಾಗುತ್ತಿದೆ.


[ays_poll id=3]