
K2 ನ್ಯೂಸ್ ಡೆಸ್ಕ್ : ಕೋ ವರ್ಕಿಂಗ್ ಸ್ಪೇಸ್ ಪರಿಕಲ್ಪನೆಯನ್ನು ಬೆಂಬಲಿಸಲು ಬಜೆಟ್ ನಲ್ಲಿ ದೊಡ್ಡ ಮಟ್ಟದ ಯೋಜನೆ ರೂಪಿಸುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ನಮ್ಮ ಸ್ಥಳೀಯ ಹುಡುಗರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಅವರು ಬಹಳ ದೊಡ್ಡ ಕೋ ವರ್ಕಿಂಗ್ ಸ್ಪೇಸ್ ಪ್ರಾರಂಭಿಸಿದ್ದಾರೆ. ಬಜೆಟ್ ಸಭೆಗಳ ಮಧ್ಯೆಯೂ ನಾನು ಇಲ್ಲಿಗೆ ಬಂದಿರುವುದು ಇವರನ್ನು ಪ್ರೋತ್ಸಾಹಿಸೋಕೆ. ಕೋ ವರ್ಕ್ ಸ್ಪೇಸ್ ಗಳಿಂದ ಯುವಕರು ಮತ್ತು ಸ್ಟಾರ್ಟ್ ಅಪ್ ಗಳು ಹೆಚ್ಚಿನ ಬಂಡವಾಳ ಇಲ್ಲದೇ ತಮ್ಮ ಕಂಪನಿಯನ್ನು ಪ್ರಾರಂಭಿಸಬಹುದು. ಇದರಿಂದ ಹೆಚ್ಚಿನ ಉದ್ಯೋಗಗಳೂ ಸೃಷ್ಟಿ ಆಗುತ್ತದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಜನರೇ ಆರ್ಥಿಕತೆ ಸೃಷ್ಟಿಸುತ್ತಾರೆ : ಹಣ ಆರ್ಥಿಕತೆ ಅಲ್ಲ. ಕಠಿಣ ಕೆಲಸ ಮಾಡುವ ಸಮಾಜದಿಂದ ಆರ್ಥಿಕತೆ ಸೃಷ್ಟಿಯಾಗುತ್ತದೆ. ನಾನು ಈಗಿನ ಯುವಕ ಯುವತಿಯರ ಬೆಳವಣಿಗೆಯನ್ನು ಬೆಂಬಲಿಸುತ್ತೇನೆ. ನಮ್ಮ ದೇಶದ 46% ಜನಸಂಖ್ಯೆ ಯುವಪಡೆ. ನಮ್ಮ ಪ್ರಧಾನಿಯವರ ಕನಸಿನಂತೆ ನಮ್ಮ ದೇಶ ಅಭಿವೃದ್ದಿಯಾಗುತ್ತಿದೆ. ಇಡಿ ವಿಶ್ವದ ಆರ್ಥಿಕ ಬೆಳವಣಿಗೆ ಶೇ 1-2 ಇದ್ದರೆ, ಭಾರತದ ಆರ್ಥಿಕತೆ ಶೇ 7% ರಷ್ಟಿದೆ. ಮುಂದಿನ 25 ವರ್ಷಗಳ ಅಮೃತ ಕಾಲದಲ್ಲಿ ಭಾರತ ವಿಶ್ವ ಮಟ್ಟದಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಕೋ ವರ್ಕಿಂಗ್ ಸ್ಪೇಸ್ ಗೆ ಬಿಹೈವ್ ಅನ್ನುವ ಹೆಸರು ಅತ್ಯಂತ ಸೂಕ್ತವಾಗಿದೆ. ಬೇರೆ ಬೇರೆ ಹೂಗಳಿಂದ ಸಂಗ್ರಹಿಸಿದ ಮಧುವನ್ನು ಒಂದೇ ಕಡೆ ಜೇನು ಉತ್ಪಾದಿಸುವ ಸ್ಥಳ. ಕಠಿಣ ಪರಿಶ್ರಮದಿಂದ ಜೇನು ತಯಾರಾಗುತ್ತದೆ. ಅದೇ ರೀತಿ ಇಲ್ಲಿ ಸ್ಥಳ ಪಡೆಯುವ ಪ್ರತಿಯೊಬ್ಬರೂ ದುಂಬಿಯಂತೆ ತಮ್ಮ ಜ್ಞಾನವೆಂಬ ಮಧುವನ್ನು ಸಂಗ್ರಹಿಸಿ ಇಲ್ಲಿ ಜೇನನ್ನು ಉತ್ಪಾದಿಸಬೇಕು ಎನ್ನುವುದು ನನ್ನ ಆಸೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
![]() |
![]() |
![]() |
![]() |
![]() |
[ays_poll id=3]