This is the title of the web page
This is the title of the web page
Local NewsState News

ಹಾಸ್ಟೆಲ್ ವಾರ್ಡನ್ ಗಿರಿಜಾ ಪಾಟೀಲ್ : ನಿನ್ನೆ ವರ್ಗಾವಣೆ ಇಂದು ಅಮಾನತ್ತು


K2kannadanews.in

ರಾಯಚೂರು : ಕಳೆದ ಒಂದು ತಿಂಗಳಿಂದ ನೀರಿಲ್ಲದೆ ಪರದಾಡುತ್ತಿರುವ ಹಾಸ್ಟೆಲ್ (water problem in hostel) ವಿದ್ಯಾರ್ಥಿನಿಯರ ಸುದ್ದಿ ಮಾಧ್ಯಮದಲ್ಲಿ ಬಿತ್ತರವಾಗುತ್ತಿದ್ದಂತೆ (news telecast), ಎಚ್ಚೆತ್ತ ಇಲಾಖೆ ಅಧಿಕಾರಿಗಳು ವಾರ್ಡನ್(transfer) ಗಿರಿಜಾ ಅವರನ್ನು ವರ್ಗಾವಣೆ ಮಾಡಿದ್ದರು. ಆದರೇ ಇಂದು ಆಯುಕ್ತರು(commissioner) ಅಮಾನತ್ತು(suspend) ಮಾಡಿ ಆದೇಶ ಹೊರಡಿಸಿದ್ದಾರೆ.

ನಗರದ ಹೊರ ವಲಯದ ಡಿ.ದೇವರಾಜ ಅರಸು ಮೆಟ್ರಿಕ್(D.devaraj arasu hostel) ನಂತರದ ವೃತ್ತಿಪರ ಬಾಲಕಿಯರ ಹಾಸ್ಟೆಲ್ ವಿದ್ಯಾರ್ಥಿನಿಯರು, ವಸತಿನಿಲಯದಲ್ಲಿ ಸಮಸ್ಯೆಗಳ ಸರಮಾಲೆ ಎದುರಿಸುತ್ತಿದ್ದರು, ಈ ಬಗ್ಗೆ ಮಾಧ್ಯಮದಲ್ಲಿ ಬಿತ್ತರಿಸಿದ್ದ ವರದಿ ಆಧಾರಿಸಿ ಜಿಲ್ಲಾಮಟ್ಟದ ಅಧಿಕಾರಿಗಳು ವಸತಿನಿಲಯದಿಂದ ವರ್ಗಾವಣೆ ಮಾಡಿದ್ದರು.

ಆದರೆ ವಾರ್ಡನ್ ಅವರ ವರ್ತನೆ ಮತ್ತು ಅಸಂಬದ್ಧ ಪದ(Attitude and nonsense word) ಬಳಕೆಯನ್ನು ವೀಕ್ಷಿಸಿದ ಹಿಂದುಳಿದ ವರ್ಗಗಳ ಇಲಾಖೆ ಬೆಂಗಳೂರು ಆಯುಕ್ತರು, ಅಸಮರ್ಪಕ ಕಾರ್ಯನಿರ್ವಹಣೆ (Malfunctioning) ಮತ್ತು ಕರ್ತವಲೋಪದ ಹಿನ್ನೆಲೆ ಅಮಾನತ್ತು ಮಾಡಿ ಆದೇಶಿಸಿದ್ದು, ಜೊತೆಗ ಮಾಧ್ಯಮದವರನ್ನು ಹಾಸ್ಟೆಲ್ ಗೆ ಕರೆದು ಮೇಲ್ವಿಚಾರಕರ ಬಗ್ಗೆ ದೂರು ನೀಡಿದ್ದೀರಿ, ಎಂದು ಕೆಲವೊಂದು ವಿದ್ಯಾರ್ಥಿಗಳಿಗೆ ಕೇಳಿ, ವಸತಿನಿಲಯಗಳ ನಿಯಮಗಳನ್ನು ಪಾಲಿಸದೇ, ಕೆಲವೊಂದು ಅವಾಚ್ಯ ಶಬ್ದಗಳಿಂದ ವಿದ್ಯಾರ್ಥಿಗಳನ್ನು ನಿಂದಿಸಿ, ವಸತಿ ನಿಲಯದಿಂದ ಹೊರಹಾಕುವುದಾಗಿ ಬೆದರಿಕೆ ಹಾಕಿರುತ್ತಾರೆ ಎಂದು ವರದಿ ಸಲ್ಲಿಸಿದ ಹಿನ್ನಲೆ ಅಮಾನತ್ತು ಆದೇಶ ಹೊರಡಿಸಿದ್ದಾರೆ.


[ays_poll id=3]