
ರಾಯಚೂರು : ಸಾರಿಗೆ ಬಸ್ಸಿನಲ್ಲಿ ಸೀಟಿಗಾಗಿ ಇಬ್ಬರು ಮಹಿಳಾ ಪ್ರಯಾಣಿಕರು ಕೈ ಕುಸ್ತಿ ಮಾಡಿ ಬಡದಾಡಿಕೊಂಡ ಘಟನೆ ರಾಯಚೂರಿನಲ್ಲಿ ಜರುಗಿದೆ.
ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಹಿನ್ನೆಲೆ, ಪ್ರತಿನಿತ್ಯ ಒಂದಲ್ಲ ಒಂದು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಇಂದು ಅಂತಹದ್ದೆ ಒಂದು ವಿಚಿತ್ರ ಪ್ರಕರಣ ನಡೆದ ವಿಡಿಯೋ ಒಂದು ವೈರಲ್ ಆಗಿದ್ದು. ಬಸ್ ನಲ್ಲಿ ಹೊಡೆದಾಡಿಕೊಂಡು ಮಹಿಳೆಯರು ಶಕ್ತಿ ಪ್ರದರ್ಶನ ಮಾಡಿದ್ದಾರೆ. ಸಿರವಾರದಿಂದ ರಾಯಚೂರಿಗೆ ಹೊರಟಿದ್ದ ಬಸ್ಸಿನಲ್ಲಿ ಈ ಒಂದು ಘಟನೆ ನಡೆದಿದೆ.
ಸೀಟಿನ ವಿಚಾರಕ್ಕೆ ಆರಂಭವಾದ ಜಗಳ ಕೈ ಮಿಲಾಯಿಸಿ ಪರಸ್ಪರ ಬಡ್ದಾಡಿಕೊಂಡ ಘಟನೆ ನಡೆದಿದ್ದು, ಇದನ್ನು ನೋಡಿ ಸಹ ಪ್ರಯಾಣಿಕರು, ಈ ಒಂದು ಜಗಳವನ್ನು ಬಿಡಿಸಿದ್ದಾರೆ. ಆದರೆ ಆ ಒಂದು ಜಗಳದ ತುಣುಕು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಇನ್ನು ಕೆಲವರು ಇದನ್ನು ಶಕ್ತಿ ಯೋಜನೆಯ ಎಫೆಕ್ಟ್ ಅಂತಲೂ ಕಮೆಂಟ್ ಮಾಡಿದ್ದಾರೆ.
![]() |
![]() |
![]() |
![]() |
![]() |
[ays_poll id=3]