
ಮಾನ್ವಿ : ನೀರಮಾನ್ವಿ ಗ್ರಾಮದ ಹೊರವಲಯದಲ್ಲಿನ ಬೆಟ್ಟದ ಭಗಧ್ವಜದ ಹತ್ತಿರ ಚಿರತೆಯೊಂದು ಪ್ರತ್ಯಕ್ಷವಾಗಿದ್ದು ಗ್ರಾಮಸ್ಥರಿಗೆ ಕಂಡಿದ್ದು, ಗ್ರಾಮಸ್ಥರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ನೀರಮಾನ್ವಿ ಗ್ರಾಮದ ಬಳ ಬೆಟ್ಟದೂರು ಗುಡ್ಡದಲ್ಲಿ ಚಿರತೆ ಕಾಣಿಸಿಕೊಂಡಿದೆ. ಕಳೆದ 15 ದಿನಗಳಿಂದ ಆಗಾಗ ಬೆಟ್ಟದಲ್ಲಿ ಪ್ರತಿಕ್ಷವಾಗುತ್ತಿದೆ. ಕುರಿಗಾಯಿಗಳ 10 ಕುರಿಗಳು ಮತ್ತು ನಾಯಿ ನಾಪತ್ತೆಯಾಗಿವೆ. ಇದೀಗ ಗ್ರಾಮದ ಸಿದ್ದರೂಡಮಠದ ಹತ್ತಿರ ಮೆತ್ತೆ ಚಿರತೆ ಕಾಣಿಸಿಕೊಂಡಿದೆ. ಅಗಾಗ ಗುಡ್ಡದ ಮೇಲಿನ ಭಗಧ್ವಜದ ಹತ್ತಿರ ಸಂಜೆ ವೇಳೆ ಚಿರತೆ ಪ್ರತ್ಯಕ್ಷವಾಗುತ್ತಿದ್ದು, ಜಮೀನುಗಳಲ್ಲಿ ಚಿರತೆ ಹೆಜ್ಜೆಗುರುತು ಕಂಡು ಜನರು ಭಯಭೀತರಾಗಿದ್ದಾರೆ.
ಕಳೆದ ವರ್ಷವೂ ನಾಲ್ಕು ಚಿರತೆಗಳು ಪ್ರತಿಕ್ಷವಾಗಿ ಭಯ ಹುಟ್ಟಿಸಿದ್ದವು. ನಾಲ್ಕು ಚಿರತೆಗಳಲ್ಲಿ ಒಂದು ಬೋನಿಗೆ ಬಿದ್ದಿದ್ದು, ಚಿರತೆ ಮರಿ ಬಲೆಗೆ ಬಿದ್ದಿತ್ತು. ಇನ್ನೆರಡು ಚಿರತೆಗಳು ನಾಪತ್ತೆಯಾಗಿದ್ದವು. ಈಗ ಪುನಃ ಬೆಟ್ಟದಲ್ಲಿ ಚಿರತೆ ಕಾಣಿಸಿಕೊಂಡು ಭಯ ಹುಟ್ಟಿಸಿದ್ದು, ಚಿರತೆ ನೋಡಿ ಜನರು ಭಯಭೀತರಾಗಿದ್ದಾರೆ. ಈ ಬಗ್ಗೆ ಇಲಾಖೆ ಅರಣ್ಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಚಿರತೆ ಹೆಜ್ಜೆ ಗುರುತು ನೊಡಿದ ಅವರು, ಇದನ್ನು ಚಿರತೆ ಎಂದು ಹೇಳಲಾಗುವುದಿಲ್ಲ ಎಂದು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂಬುದು ಗ್ರಾಮಸ್ಥರ ಅಸಮಾಧಾನವಾಗಿದೆ.
![]() |
![]() |
![]() |
![]() |
![]() |
[ays_poll id=3]