This is the title of the web page
This is the title of the web page
Crime NewsState News

ಅರೆನಗ್ನ ಸ್ಥಿತಿಯಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆ ಕೊಲೆ ಶಂಕೆ


ರಾಯಚೂರು : ನಿರ್ಜನ ಪ್ರದೇಶದಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆಯಾದ ಘಟನೆ ರಾಯಚೂರು ನಗರದ ಹೊರವಲಯದ ಯರಮರಸ್ ಬೈಪಾಸ್ ಸೇತುವೆ ಬಳಿ ನಡೆದಿದೆ.

ಯರಮರಸ್ ಬೈಪಾಸ್ ರೈಲ್ವೆ ಮೇಲ್ ಸೇತುವೆ ಬಳಿ ಘಟನೆ ಜರುಗಿದ್ದು, ಸುಮಾರು 28 ವರ್ಷದ ಅಪರಿಚಿತ ಮಹಿಳೆ ಶವ ಪತ್ತೆಯಾಗಿದ್ದು, ಅರೆಬೆತ್ತಲೆ ಸ್ಥಿತಿಯಲ್ಲಿ ಪತ್ತೆಯಾಗಿರೋ ಮಹಿಳೆಯ ಶವ, ಕೊಲೆ ಮಾಡಿ ಬಳಿಕ ಸುಟ್ಟು ಹಾಕಿರುವ ಶಂಕೆ ವ್ಯಕ್ತವಾಗಿದೆ. 3-4 ದಿನಗಳ ಹಿಂದೆಯೇ ಘಟನೆ ನಡೆದಿರುವ ಅನುಮಾನ ವ್ಯಕ್ತವಾಗಿದೆ.

ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸ್, ಎಫ್ ಎಸ್ ಎಲ್ ತಂಡ, ಡಾಗ್ ಸ್ಕ್ವಾಡ್ ಭೇಟಿ ಪರಿಶೀಲನೆ ಮಾಡುತ್ತಿದ್ದಾರೆ. ರಾಯಚೂರು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.


[ays_poll id=3]