This is the title of the web page
This is the title of the web page
Crime NewsVideo News

ರಸ್ತೆ ಬದಿ ನಿಂತಿದ್ದ ಲಾರಿಗೆ ಸಾರಿಗೆ ಬಸ್ ಡಿಕ್ಕಿ : ಇಬ್ಬರು ಸಾವು


ರಾಯಚೂರು : ಎದುರಿಗೆ ಬಂದ ಬೈಕ್‌ಗೆ ದಾರಿ ಬಿಡಲು ಹೋಗಿ, ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಗೆ ಸಾರಿಗೆ ಬಸ್ ಡಿಕ್ಕಿ ಹೊಡೆದು ಇಬ್ಬರು ಮೃತಪಟ್ಟು, ನಿರ್ವಾಹಕ ಸೇರಿ 5 ಜನರ ಸ್ಥಿತಿ ಗಂಭೀರವಾದ ಘಟನೆ ಜರುಗಿದೆ.

ರಾಯಚೂರು ಜಿಲ್ಲೆಯ ಸಿಂಧನೂರಿನ ತಾಲೂಕಿನ ಮಲ್ಲದಗುಡ್ಡ ಗ್ರಾಮದ ಬಳಿ ನಿನ್ನೆ ರಾತ್ರಿ ನಡೆದಿದ್ದು, ಸಿಂಧನೂರಿನಿಂದ ಅಂಕಲಿಮಠದ ಕಡೆಗೆ ಹೊರಟಿದ್ದ ಬಸ್ ಎದುರಿಗೆ ಬಂದ ಬೈಕಿಗೆ ಸೈಡು ಕೊಡಲು ಹೋದ ಸಂದರ್ಭದಲ್ಲಿ, ಇಂಡಿಕೇಟರ್ ಹಾಕದೆ ರಸ್ತೆ ಪಕ್ಕದಲ್ಲಿ ಲಾರಿ ನಿಲ್ಲಿಸಿದ್ದ ಹಿನ್ನೆಲೆ ಬಸ್ಸು ಲಾರಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಸುದೀಪ್ (18), ರಾಮಪ್ಪ (60) ಗಂಭೀರವಾಗಿ ಗಾಯಗೊಂಡಿದ್ದರು ಕೂಡಲೆ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಸಾಗಿಸಿದ್ದರು, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಬಸ್‌ನಲ್ಲಿದ್ದ 32 ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ನಿರ್ವಾಹಕ ಸೇರಿ 5 ಜನರ ಸ್ಥಿತಿ ಗಂಭೀರವಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಮಾಹಿತಿ ತಿಳಿಯುತ್ತದೆ ಸ್ಥಳಕ್ಕೆ ಆಗಮಿಸಿದ, ಸಿಂಧನೂರಿನ ಸಂಚಾರಿ ಪೊಲೀಸ್ ಠಾಣೆ ಸಿಬ್ಬಂದಿಗಳು ಪರಿಶೀಲನೆ ಮಾಡಿ ಬಸ್ ಚಾಲಕ ಅಮರೇಶ್ ,ಲಾರಿ ಚಾಲಕ ನಾಗೇಶ್ವರರಾವ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.


[ays_poll id=3]