
ಸಿಂಧನೂರು : ತಾಲೂಕಿಗೆ ರೈಲು ಬರುವ ಸಾರ್ವಜನಿಕರ ಕನಸು ಇದೀಗ ನನಸಾಗುವ ಕಾಲ ಹತ್ತಿರ ಬಂದಾಗಿದೆ. ಗಂಗಾವತಿಯಿಂದ ಗೊರೇಬಾಳ ಕ್ಯಾಂಪಿನ ವರೆಗೆ ಇಂದು ಗೂಡ್ಸ್ ಟ್ರೈನ್ ಆಗಮಿಸಿದ್ದು, ಸಾರ್ವಜನಿಕರು ರೈಲ್ವೆ ಇಂಜಿನ್ ಗೆ ಪೂಜೆ ಮಾಡಿ ಸ್ವಾಗತಿಸಿದರು.
ಹೌದು ದಶಕಗಳಿಂದ ಮೆಹಬೂಬ ನಗರ ಗಾಣಿಗೇರ ರೈಲ್ವೆ ಕಾಮಗಾರಿ ನಡೆಯುತ್ತಿದೆ. ಕಳೆದ 8 ವರ್ಷಗಳ ಹಿಂದೆಯೇ ಸಿಂಧನೂರಿನ ವರೆಗೆ ರೈಲು ಬರುವ ಕನಸು ಇತ್ತು, ಆದರೆ 10 ವರ್ಷ ಕಳೆದರೂ ಕೂಡ ರೈಲು ಬಂದಿರಲಿಲ್ಲ.ಇದೀಗ ಸಿಂಧನೂರು ತಾಲೂಕಿನ ಗೋರೆಬಾಳ ಗ್ರಾಮದವರಿಗೆ ಪರೀಕ್ಷಾರ್ಥ ಗೂಡ್ಸ್ ರೈಲನ್ನು ಓಡಿಸಲಾಯಿತು. ಈ ವೇಳೆ ಗ್ರಾಮಕ್ಕೆ ಬಂದ ರೈಲಿನ ಇಂಜಿನ್ ಗೆ ಸಾರ್ವಜನಿಕರು ಪೂಜೆ ಮಾಡಿ ಸ್ವಾಗತಿಸಿದರು.
![]() |
![]() |
![]() |
![]() |
![]() |
[ays_poll id=3]