This is the title of the web page
This is the title of the web page
State News

ಪಾಲಕರೆ ಗಮನಿಸಿ : ನಾಳೆ ಸರ್ಕಾರಿ ರಜೆ ಘೋಷಣೆ ಮಾಡಲ್ಲ : ಸಿಎಂ ಸ್ಪಷ್ಟನೆ


K2kannadanews.in

No Holiday Ayodhya : ನಾಳೆ ರಜೆಯ ನಿರೀಕ್ಷೆಯಲ್ಲಿದ್ದ ಪಾಲಕರೇ ಈ ಸುದ್ದಿ ಓದಿ. ಅಯೋಧ್ಯೆಯಲ್ಲಿ ರಾಮಲ್ಲಾನ (Rama lalla) ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ಹಿನ್ನೆಲೆ ನಾಳೆ ರಾಜ್ಯದಲ್ಲಿ (Karnataka) ಯಾವುದೇ ಸರ್ಕಾರಿ ರಜೆ (Holiday) ಇರುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramayya) ಸ್ಪಷ್ಟಪಡಿಸಿದ್ದಾರೆ.

ನಾಳೆ ರಾಮಮಂದಿರ ಉದ್ಘಾಟನೆ (Opening) ಹಿನ್ನೆಲೆ ಎಲ್ಲಾ ಮುಜರಾಯಿ ಇಲಾಖೆ ದೇವಸ್ಥಾನದಲ್ಲಿ (Temple) ಪೂಜೆ ನಡೆಯಲಿದೆ. ಆದರೆ ಸರ್ಕಾರಿ ರಜೆ ಘೋಷಣೆ ಮಾಡುವುದಿಲ್ಲ ಎಂದು ಹೇಳಿದ್ದಾರೆ. ನಾನು ಮಹದೇಪುರದಲ್ಲಿ ನಿರ್ಮಾಣ ಆಗಿರುವ ರಾಮಮಂದಿರ ಉದ್ಘಾಟನೆಗೆ ಹೋಗುತ್ತೇನೆ. ಒಬ್ಬರಿಗೆ ರಾಜ್ಯ ಸರ್ಕಾರದಿಂದ 1,500 ರೂ. ಹೆಚ್ಚುವರಿಯಾಗಿ ಬೆಂಬಲ ಬೆಲೆ ಕೊಡುತ್ತೇವೆ.

ಅಯೋಧ್ಯೆಯಲ್ಲಿ ರಾಮಲ್ಲಾನ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ವೀಕ್ಷಿಸಲು ಅನುಕೂಲ ಆಗುವಂತೆ ನಾಳೆ ರಜೆ ಘೋಷಿಸುವಂತೆ ಬಿಜೆಪಿ (BJP) ನಾಯಕರು ಮುಖ್ಯಮಂತ್ರಿ (CM) ಸಿದ್ದರಾಮಯ್ಯರಿಗೆ ಒತ್ತಾಯಿಸಿದ್ದರು. ವಿರೋಧ ಪಕ್ಷದ ನಾಯಕ ಆರ್. ಅಶೋಕ್ (R.Ashok) ಅವರು ಸಿಎಂಗೆ ಪತ್ರ (Later to CM) ಬರೆದಿದ್ದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸಹ ರಜೆ ನೀಡುವಂತೆ ಒತ್ತಾಯಿಸಿದ್ದರು. ಆದರೆ, ಸಿಎಂ ಯಾರ ಒತ್ತಡಕ್ಕೂ ಮಣಿದಿಲ್ಲ ಮತ್ತು ರಜೆಯನ್ನು ಕೊಡುವುದಿಲ್ಲ ಅಂತ ಹೇಳಿದ್ದಾರೆ.


[ays_poll id=3]