This is the title of the web page
This is the title of the web page
Local NewsState News

ಟಿಪ್ಪು ಭಾವಚಿತ್ರಕ್ಕೆ ಅಪಮಾನ ಪ್ರಕರಣ : ಪೊಲೀಸ್ ಪೇದೆಗಳು ಅಮಾನತ್ತು..?


K2kannadanews.in

constables suspended ಸಿರವಾರ : ಟಿಪ್ಪು ಸುಲ್ತಾನ್ (Tippu sulthan) ಭಾವಚಿತ್ರಕ್ಕೆ ಅಪಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಕರ್ತವ್ಯ ಲೋಪದಡಿ (dereliction of duty) ಇಬ್ಬರು ಪೊಲೀಸ್ ಪೇದೆಗಳನ್ನು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ (Sp) ನಿಖಿಲ್ ಬಿ ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ.

ಹೌದು ರಾಯಚೂರು (Raichur) ಜಿಲ್ಲೆಯ ಸಿರವಾರ (Sirawar) ಪಟ್ಟಣದ ಮಟನ್ ಮಾರ್ಕೆಟ್ ಬಳಿಯ ಟಿಪ್ಪು ವೃತ್ತದ (Tippu cercal) ಬಳಿ ಇರುವ ಭಾವಚಿತ್ರಕ್ಕೆ ಚಪ್ಪಲಿಹಾರ ಹಾಕಿ ಕಿಡಿಗೇಡಿಯೊಬ್ಬ ಕೋಮು ಸೌಹಾರ್ಧತೆ ಹಾಳು‌ಮಾಡಲು ಯತ್ನಿಸಿದ್ದ. ಘಟನೆಯಿಂದ ಉದ್ವಿಗ್ನ ಪರಿಸ್ಥಿತಿ ಉಂಟಾಗಿ ಮತ್ತು ಮುಸ್ಲಿಂ ಸಮುದಾಯದಿಂದ ಭಾರಿ ಪ್ರತಿಭಟನೆಗೆ ಕಾರಣವಾಗಿತ್ತು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು (Police) ಎರಡು ತಂಡಗಳಾಗಿ ಆರೋಪಿ ಹುಡುಕಾಟಕ್ಕೆ ಮುಂದಾಗಿ 24 ಗಂಟೆಯಲ್ಲಿ ಆರೋಪಿಯನ್ನು (Accused) ಬಂಧಿಸಿ ಪ್ರಕರಣಕ್ಕೆ ಸುಖಾಂತ್ಯ ಹಾಡಿದರು.

ಆದರೆ ಘಟನೆ ದಿನದಂದು ರಾತ್ರಿ ಪಾಳಿಯಲ್ಲಿದ್ದ (Night Duty) ಸಿರವಾರ ಠಾಣೆಯ ಇಬ್ಬರು ಪೇದೆಗಳನ್ನು (constables) ಕರ್ತವ್ಯ ಲೋಪದ ಹಿನ್ನಲೆ ಇಬ್ಬರು ಪೊಲೀಸ್ ಪೇದೆಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ ಅವರ ಅಮಾನತ್ತು (Suspended) ಮಾಡಿ ಆದೇಶ ಹೊರಡಿಸಿದ್ದಾರೆ.


[ays_poll id=3]