This is the title of the web page
This is the title of the web page
National NewsPolitics News

ಕರ್ನಾಟಕದ 9 ಕ್ಷೇತ್ರಗಳಿಗೆ ಟಿಕೆಟ್ ಫೈನಲ್  : ರಾಯಚೂರಿಗೆ ಇವರೇ ಫೈನಲ್..?


K2kannadanews.in

Raichur MP Ticket final : ಲೋಕಸಭೆ ಚುನಾವಣೆಗೆ (Election) ಈಗಾಲೇ ಸಾಕಷ್ಟು ದೇಶದಲ್ಲಿ ಎನ್.ಡಿ.ಎ (NDA) ಮತ್ತು ಇಂಡಿಯಾ (I.N.D.I.A) ಸಾಕಷ್ಟು ತಯಾರಿ ನಡೆಸಿಕೊಂಡಿವೆ. ಬಿಜೆಪಿ (BJP) ಈಗಾಗಲೇ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು ಕಾಂಗ್ರೆಸ್ (Congress) ತನ್ನ ಮೊದಲ ಪಟ್ಟಿ (First list) ಸಿದ್ದತೆ ಮಾಡಿಕೊಂಡಿದ್ದು. ಕರ್ನಾಟಕದ 9 ಕ್ಷೇತ್ರಗಳಿಗೆ ಟಿಕೆಟ್ ಫೈನಲ್ (ticket final) ಮಾಡಿದ್ದು, ರಾಯಚೂರು ಲೋಕಸಭೆ ಕ್ಷೇತ್ರದ ಟಿಕೆಟ್ ಫೈನಲ್ ಆಗಿದೆ.

ಲೋಕಸಭಾ ಚುನಾವಣೆಗೆ ಬಿಜೆಪಿ ತನ್ನ 195 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಇದೀಗ ಕಾಂಗ್ರೆಸ್ ದೇಶದ 40 ಲೋಕಸಭಾ ಕ್ಷೇತ್ರಗಳಿಗೆ ಟಿಕೆಟ್ ಫೈನಲ್ ಮಾಡಿದೆ. ಈ ಪೈಕಿ ಕರ್ನಾಟಕದ 9 ಕ್ಷೇತ್ರಗಳಿಗೆ ಟಿಕೆಟ್ ಫೈನಲ್ ಮಾಡಲಾಗಿದೆ. ಪ್ರಮುಖವಾಗಿ ಬೆಂಗಳೂರು ಗ್ರಾಮಂತರದಿಂದ ಡಿಕೆ ಸುರೇಶ್‌ಗೆ ಟಿಕೆಟ್ ಅಂತಿಮಗೊಳಿಸಲಾಗಿದೆ ಎಂದು ಮೂಲಗಳು ಹೇಳುತ್ತಿವೆ.

ಕರ್ನಾಟಕ 9 ಲೋಕಸಭಾ ಕ್ಷೇತ್ರಗಳಿಗೆ ಟಿಕೆಟ್ ಬಹುತೇಕ ಫೈನಲ್(ಸಂಭಾವ್ಯ ಪಟ್ಟಿ)

* ಬೆಂಗಳೂರು ಗ್ರಾಮಾಂತರ; ಡಿಕೆ ಸುರೇಶ್
* ಮಂಡ್ಯ; ಸ್ಟಾರ್ ಚಂದ್ರು
* ವಿಜಯಪುರ; ರಾಜು ಹುಲುಗೂರು
* ಬೀದರ್; ರಾಜಶೇಕರ್ ಪಾಟೀಲ್
* ಹಾಸನ ಶ್ರೇಯಸ್ ಪಾಟಿಲ್
* ತುಮಕೂರು; ಮುದ್ದೆ ಹನುಮೇ ಗೌಡ
* ಚಿತ್ರದುರ್ಗ; ಬಿಎನ್ ಚಂದ್ರಪ್ಪ
* ಕಲಬುರಗಿ; ರಾಧಾ ಕೃಷ್ಣ(ಮ.ಖರ್ಗೆ ಅಳಿಯ)
9 ರಾಯಚೂರು; ಕುಮಾರ್ ನಾಯ್ಕ್(ನಿವೃತ್ತಿ ಕೆಎಎಸ್ ಅಧಿಕಾರಿ)

ಕಾಂಗ್ರೆಸ್ ಚುನಾವಣಾ ಸಮಿತಿ ಸಭೆ ಕುರಿತು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ರಾಜ್ಯ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯನ್ನು ಕೇಂದ್ರ ಕಾಂಗ್ರೆಸ್ ಚುನಾವಣಾ ಸಮಿತಿಗೆ ನೀಡಿದೆ. ಕೆಲ ಕ್ಷೇತ್ರಗಳ ಕುರಿತು ಚರ್ಚೆಯಾಗಿದೆ. ಯಾವ ಕ್ಷೇತ್ರ, ಯಾರು ಅನ್ನೋದು ಚುನಾವಣಾ ಸಮಿತಿ ನಿರ್ಧರಿಸಲಿದೆ. ಯಾರಿಗೆ ಫೈನಲ್ ಆಗಿದೆ ಅನ್ನೋ ಮಾಹಿತಿಯನ್ನು ಅವರೇ ಪ್ರಕಟಿಸಲಿದ್ದಾರೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.


[ays_poll id=3]