This is the title of the web page
This is the title of the web page
National NewsPolitics News

ಆ ನಾಯಕರು ಮೂರು ಮಂಗಗಳಿದ್ದಂತೆ : PM ವಾಗ್ದಾಳಿ.. ವೀಡಿಯೋ ಒಳಗೊಂಡಿದೆ..


K2kannadanews.in

Political News Desk : ಲೋಕಸಭಾ ಚುನಾವಣೆ (MP Election) ತಯಾರಿ ನಡೆಸಿರುವ ಪಕ್ಷಗಳು (Partys), ಭರ್ಜರಿ ಪ್ರಚಾರದಲ್ಲಿ ತೊಡಗಿವೆ. ಅಂತೆಯೇ ಪರಸ್ಪರ ವಾಗ್ದಾಳಿಯನ್ನು ನಡೆಸಿದ್ದಾರೆ. ಇಂಡಿಯಾ (I.N.D.I.A) ಕೂಟದ ನಾಯಕರು ಗಾಂಧೀಜಿಯ ಮೂರು ಮಂಗಗಳಿದ್ದಂತೆ (three monkeys) ಎಂದು ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದ್ದಾರೆ.

ಪಶ್ಚಿಮ ಬಂಗಾಳದ (Pashim bangla) ಹೂಗ್ಲಿ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ (Election promotions) ಸಮಾವೇಶದಲ್ಲಿ ಪ್ರಧಾನಿ ಮೊದಿ (Nrendr modi) ಅವರು ಮಾತನಾಡುತ್ತ ಕಿಡಿಕಾರಿದ್ದಾರೆ‌. ಸಂದೇಶ್‌ ಖಾಲಿಯಲ್ಲಿ (Sandesh khali) ಮಹಿಳೆಯರು ಹಾಗೂ ಜನಸಾಮಾನ್ಯರ ಮೇಲೆ ನಡೆದ ದೌರ್ಜನ್ಯ ನಡೆಯುತ್ತಿದ್ದರು ಇಂಡಿಯಾ ಕೂಟದ ನಾಯಕರು (Leader’s) ಮೌನವಾಗಿದ್ದಾರೆ (Silent) ಎಂದು ಇಂಡಿಯಾ ಮೈತ್ರಿಕೂಟದ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿ ಅವರು ಗಾಂಧೀಜಿಯ ಮೂರು ಮಂಗಗಳಿದ್ದಂತೆ ಎಂದಿದ್ದಾರೆ.

ಸಂದೇಶ್‌ಖಾಲಿಯ ಬಗ್ಗೆ ಕೇಳಿದಾಗ ಕಾಂಗ್ರೆಸ್‌ (Congress) ಅಧ್ಯಕ್ಷರು ಬಂಗಾಳದಲ್ಲಿ ಇದೆಲ್ಲ ಆಗುತ್ತಿರುತ್ತದೆ ಬಿಟ್ಹಾಕಿ ಎಂದು ಹೇಳಿದರಂತೆ ಎಂದು ಮೋದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಡೀ ದೇಶ ಇಂದು ಸಾಧನೆಯ ಹಾದಿಯಲ್ಲಿ ಸಾಗುತ್ತಿದ್ದರೆ ಬಂಗಾಳ ಸರ್ಕಾರ (Bangal government) ಮಾತ್ರ ಮಹಿಳೆಯರ ಮೇಲಿನ ದೌರ್ಜನ್ಯವನ್ನು ನೋಡಿಕೊಂಡು ಸುಮ್ಮನೆ ಕುಳಿತಿದೆ. ತೃಣಮೂಲ ಕಾಂಗ್ರೆಸ್‌ನ ಕೃತ್ಯಗಳನ್ನು ನೋಡಿ ಇಡೀ ದೇಶದ ಜನರು ಕ್ರುದ್ಧರಾಗಿದ್ದಾರೆ. ಅಲ್ಲದೆ ಇದು ನಾಚಿಕೆಗೇಡಿನ ಸಂಗತಿ ಎಂದು ವಾಗ್ದಾಳಿ ನಡೆಸಿದರು.


[ays_poll id=3]