ರಾಯಚೂರು : ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರರಿಗೆ ವೈಯಕ್ತಿಕ ಜಾಬ್ ಕಾರ್ಡ್ ನೀಡುವ ಕುರಿತು ನಗರದ ಜಿಲ್ಲಾ ಪಂಚಾಯತ ಜಲಶಕ್ತಿ ಕೇಂದ್ರದಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಮುಖಂಡರ ಪೂರ್ವಭಾವಿ ಸಭೆ ನಡೆಸಲಾಯಿತು.
ಈ ಸಭೆಯಲ್ಲಿ ಜಿಲ್ಲಾ ಐಇಸಿ ಸಂಯೋಜಕರು ವಿಶ್ವನಾಥ ಅವರು ಮಾತನಾಡಿ, ಮಂಗಳ ಮುಖಿಯರನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ವಿಶೇಷ ಜಾಬ್ ಕಾರ್ಡ್ ವಿತರಿಸಲಾಗುತ್ತದೆ. ಮಂಗಳಮುಖಿಯರು ತಮ್ಮದೇ ಆದ ವಿಭಿನ್ನ ವೃತ್ತಿಗಳಲ್ಲಿ ತೊಡಗಿಸಿಕೊಂಡಿದ್ದು,ಸಾಮಾನ್ಯ ರೊಂದಿಗೆ ದುಡಿವ ಪರಿಪಾಠ ಕಡಿಮೆ, ಅವರಲ್ಲೂ ದುಡಿಯುವ ಇಚ್ಚಾಶಕ್ತಿ ಇರುತ್ತದೆ .ಅದನ್ನು ಗುರುತಿಸಿ ಅವರನ್ನೂ ಆರ್ಥಿಕವಾಗಿ ಸಬಲಗೊಳಿಸಲು ನರೇಗಾದಡಿ ಅವಕಾಶ ಇದೆ. ತೃತೀಯ ಲಿಂಗಗಳನ್ನು ಗುರುತಿಸಿ ಅವರಿಗೆ ವಿಶೇಷ ಜಾಬ್ ಕಾರ್ಡ್ ನೀಡುವಂತೆ ಮತ್ತು ನರೇಗಾ ಕೆಲಸಗಳಲ್ಲಿ ಅವರನ್ನೂ ಸಕ್ರಿಯಗೊಳಿಸಿಕೊಳ್ಳಲಾಗುತ್ತದೆ.
ಈಗಾಗಲೇ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಇರುವ ಮಂಗಳಮುಖಿಯರು ನರೇಗಾ ಯೋಜನೆಯಡಿ ಜಾಬ್ ಕಾರ್ಡ್ ಪಡೆದುಕೊಂಡು ಕೆಲಸ ಮಾಡುತ್ತಿದ್ಧಾರೆ. ಇನ್ನೂ ಯಾರು ಯಾರು ನರೇಗಾದಡಿ ಜಾಬ್ ಕಾರ್ಡ್ ಪಡೆದುಕೊಂಡು ಈ ಯೋಜನೆಯಡಿ ಸಿಗುವ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಬೇಕಾದರೆ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್ ಪ್ರತಿಗಳನ್ನು ನೀಡುವಂತೆ ಮುಖಂಡರಿಗೆ ತಿಳಿಸಲಾಯಿತು.
ಜಿಲ್ಲೆಯ ರಾಯಚೂರು ೧೪೩೭, ಸಿಂಧನೂರು ೩೩೮, ಮಾನ್ವಿ ೫೨೯,ಲಿಂಗಸೂಗೂರು ೨೫೧ ಮತ್ತು ದೇವದುರ್ಗ ೩೧೪ ಈಗೇ ಒಟ್ಟು ಅಂದಾಜು ೨೮೬೯ ಲಿಂಗತ್ವ ಅಲ್ಪಸಂಖ್ಯಾತರು ಇದ್ದು, ಅವರು ತಮ್ಮ ತಮ್ಮ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಇನ್ನೂ ನರೇಗಾ ಯೋಜನೆಯಡಿ ಫಲಾನುಭವಿಯಾಗಬೇಕು ಎಂದು ತಿಳಿಸಿದರು.
![]() |
![]() |
![]() |
![]() |
![]() |
[ays_poll id=3]