ರಾಯಚೂರು : ಎಟಿಎಂ ಸರ್ಕಲ್ ಹತ್ತಿರ ನಿಜಲಿಂಗಪ್ಪ ಕಾಲೋನಿ , ರಾಯಚೂರು ನಲ್ಲಿ ,ಮೋನಿಕಾ ನೃತ್ಯ ಕಲಾ ಸಂಸ್ಥೆ ರಾಯಚೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರಾಯಚೂರು ,ಇವರ ಸಂಯುಕ್ತ ಆಶ್ರಯದಲ್ಲಿ ,ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು, ಬಸವರಾಜ್ ಎಂ. ದೊರೆ ಅಧ್ಯಕ್ಷರು ಮಂದಾರ ಪತ್ತಿನ ಸಹಕಾರ ಬ್ಯಾಂಕ್ ನಿಜಲಿಂಗಪ್ಪ ಕಾಲೋನಿ ಇವರು ಉದ್ಘಾಟಿಸಿದರು ಇವರು ಮಾತನಾಡಿ ಮೋನಿಕ ನೃತ್ಯ ಕಲಾ ಸಂಸ್ಥೆ ಯವರು ಅನೇಕ ವೈವಿಧ್ಯಮಯ ನೃತ್ಯವನ್ನು ಪ್ರದರ್ಶನ ಮಾಡುತ್ತಾ ಬಂದಿದ್ದಾರೆ. ಅದರ ಜೊತೆಗೆ ಇಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ಸಂಗೀತ ಕಾರ್ಯಕ್ರಮ ಹಮ್ಮಿಕೊಂಡಿರುವುದು ತುಂಬಾ ಸಂತೋಷ .ಶಾಲಾ ಕಲಿಕೆಯ ಮಕ್ಕಳು ವಿದ್ಯಾಭ್ಯಾಸದ ಜೊತೆಗೆ ರಂಗಕಲೆಯನ್ನು ಸಹ ಹವ್ಯಾಸ ಬೆಳೆಸಿಕೊಳ್ಳಬೇಕು. ಅಂದಾಗ ಮಾತ್ರ ಮಕ್ಕಳಿಗೆ ಉಲ್ಲಾಸ ಉತ್ತೇಜನಕ್ಕೆ ಸಹಕಾರಿಯಾಗುತ್ತದೆ ಎಂದು ಹೇಳಿದರು.
![]() |
![]() |
![]() |
![]() |
![]() |
[ays_poll id=3]