ರಾಯಚೂರು : ಶಿವರಾಜ್ ಕುಮಾರ್ ಜೊತೆ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದ ವೇದ ಸಿನೆಮಾ ತಂಡ.
ರಾಯಚೂರು ನಗರದಲ್ಲಿ ಇಂದು ವೇದ ಚಿತ್ರದ ಪ್ರಿ ರಿಲೀಸ್ ಇವೆಂಟ್ ಕಾರ್ಯಕ್ರಮದ ಅಂಗವಾಗಿ ರಾಯಚೂರಿಗೆ ಆಗಮಿಸಿದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ವೇದ ಸಿನಿಮಾದ ತಂಡದ ಜೊತೆಯಲ್ಲಿ ಶ್ರೀಮಠಕ್ಕೆ ಭೇಟಿ ನೀಡಿದರು. ಶಿವರಾಜ್ ಕುಮಾರ್ ಜೊತೆ ಗೀತಾ ಶಿವರಾಜ್, ಅರ್ಜುನ ಜನ್ಯ, ಅನುಶ್ರೀ, ಹರ್ಷ ಅವರು ಮಂಚಾಲಮ್ಮ ದೇವಿ ದರ್ಶನ ಪಡೆದ ಬಳಿಕ ಶ್ರೀ ರಾಘವೇಂದ್ರ ಸ್ವಾಮಿಗಳ ಮೂಲ ಬೃಂದಾವನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ರಾಯರ ದರ್ಶನದ ಬಳಿಕ ಪೀಠಾಧಿಪತಿ ಶ್ರೀ ಸುಭುದೇಂದ್ರ ತೀರ್ಥರಿಂದ ಚಿತ್ರತಂಡ ಆಶೀರ್ವಾದ ಪಡೆದರು. ಈ ವೇಳೆ ಶ್ರೀಗಳು ರಾಜ್ ಕುಟುಂಬ ಹಾಗೂ ರಾಯರ ಮಠದ ಅವಿನಭಾವ ಸಂಬಂಧದ ಬಗ್ಗೆ ಶಿವರಾಜ್ ಕುಮಾರ್ ಅವರಿಗೆ ತಿಳಿಸಿಕೊಟ್ಟರು. ವಿಲನ್ ಚಿತ್ರ ತಂಡಕ್ಕೆ ಫೆಬ್ರವರಿಯಲ್ಲಿ ನಡೆಯುವ ಗುರು ವೈಭವೋತ್ಸವಕ್ಕೆ ಆಹ್ವಾನ ನೀಡಿದರು.
![]() |
![]() |
![]() |
![]() |
![]() |
[ays_poll id=3]