This is the title of the web page
This is the title of the web page
Local NewsVideo News

ಬಿಸಿಲಿನ ತಾಪಕ್ಕೆ ಕೆರೆ ನೀರು ಆವಿ : ಬದುಕಲು ಮೀನುಗಳು ವಿಲವಿಲ ಒದ್ದಾಟ..


K2kannadanews.in

Heat Wave ರಾಯಚೂರು : ಬಿರು ಬೇಸಿಗೆಯ (Heat wave) ಬಿಸಿಲಿಗೆ ಜನರು ತತ್ತರಿಸಿ ಹೋಗಿದ್ದಾರೆ. ಜನ-ಜಾನುವಾರುಗಳು (Animal) ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದೀಗ ಕೆರೆಯಲ್ಲಿ (Lake) ನೀರು ಸಂಪೂರ್ಣವಾಗಿ ಆವಿಯಾಗಿ ತಲಸ್ಪರ್ಶಿಯಾದ ಹಿನ್ನಲೆ ಸಾವಿರಾರು ಮೀನುಗಳು (Fish) ಸತ್ತು ಬಿದ್ದಿವೆ. ಜೀವ ಉಳಿಸಿಕೊಳ್ಳಲು ಕೆರೆಯ ಕೆಸರಲ್ಲಿ ಬದುಕುಳಿದ ಮೀನುಗಳು (struggling to survive) ವಿಲವಿಲ ಒದ್ದಾಡುತ್ತಿವೆ.

ರಾಯಚೂರು (Raichur) ತಾಲ್ಲೂಕಿನ ಮರ್ಚೆಡ್ (Marched) ಗ್ರಾಮದ ಕರೆಯಲ್ಲಿ ಘಟನೆ ಜರುಗಿದೆ. ಸದಾ ನೀರು ತುಂಬಿರುತ್ತಿದ್ದ ಈ ಕೆರೆ ಬಿರು ಬೇಸಿಗೆ ಹಿನ್ನೆಲೆ ಸಂಪೂರ್ಣ ನೀರು ಬತ್ತಿ ಹೋಗಿವೆ. ಮೀನುಗಳ ಮಾರಣ ಹೋಮವೇ ನಡೆದಿದೆ. ಮೀನುಗಾರರು ಕೆಸರಿನ ಮಡುವಿನಲ್ಲಿ ಬಿದ್ದಿರುವ ಮೀನುಗಳನ್ನು ಹಿಡಿಯುತ್ತಿದ್ದಾರೆ. ಸತ್ತು ಬಿದ್ದ ಮೀನುಗಳನ್ನು ತಿನ್ನಲು ಸಾವಿರಾರು ಪಕ್ಷಿಗಳು (Birds) ಕೆರೆ ಹತ್ತಿರ ಬರುತ್ತಿವೆ. ಕೆರೆಯಲ್ಲಿ ನೀರು ಪೂರ್ತಿಯಾಗಿದ್ದಾಗ ವಿವಿಧ ಭಾಗಗಳಿಂದ ಪಕ್ಷಿಗಳು ವಲಸೆ ಬರುತ್ತಿದ್ದವು. ಆದರೆ ಈಗ ಸತ್ತ ಮೀನುಗಳನ್ನು ತಿನ್ನಲು ಬರುವಂತಾಗಿದೆ.


[ays_poll id=3]