This is the title of the web page
This is the title of the web page
Crime News

ಬಿಸಿಲಿನ ಧಗೆಗೆ ಚಲಿಸುತ್ತಿದ್ದ ಕಾರಿಗೆ ಬೆಂಕಿ : ಅದೃಷ್ಟವಶಾತ್ ಪ್ರಾಣಾಪಾಯವಾಗಿಲ್ಲ..


K2kannadanews.in

Heat wave car fire ರಾಯಚೂರು : ಬಿಸಿಲಿನ ಧಗೆಗೆ ಚಲಿಸುತ್ತಿದ್ದ ಕಾರಿನಲ್ಲಿ (Running car) ಏಕಾಏಕಿ ಬೆಂಕಿ (fire) ಕಾಣಿಸಿಕೊಂಡ ಘಟನೆ ರಾಯಚೂರಿನಲ್ಲಿ ನಡೆದಿದ್ದು, ಅದೃಷ್ಟವಶಾತ್ (farchunatly) ಯಾವುದೇ ಪ್ರಾಣಪಾಯವಾಗಿಲ್ಲ.

ಹೌದು ರಾಯಚೂರು (Raichur) ತಾಲೂಕಿನ ವೈಟಿಪಿಎಸ್ (YTPS) ವಿದ್ಯುತ್ ಉತ್ಪಾದನಾ ಕೇಂದ್ರದ ಮುಖ್ಯ ದ್ವಾರದ (Main gate) ಮುಂದೆ ಘಟನೆ ನಡೆದಿದೆ. ಸಧ್ಯ ರಾಯಚೂರಿನಲ್ಲಿ 44 ಡಿಗ್ರಿ ಸೆಲ್ಸಿಯಸ್ ಗರಿಷ್ಟ ಬಿಸಿಲು ದಾಖಲಾಗುತ್ತಿದೆ. ಬಿಸಿಲಿನ ತಾಪಕ್ಕೆ ರಾಯಚೂರು ರಸ್ತೆಗಳು (Roads) ಕಾದ ಹೆಂಚಿನಂತಾಗುತ್ತಿವೆ. ರಾಯಚೂರು ಹೈದ್ರಾಬಾದ್ (Raichur – Hyderabad) ಹೆದ್ದಾರಿಯಲ್ಲಿ ಬರುವ ವೈಟಿಪಿಎಸ್ ಮೇನ್ ಗೇಟ್ ಬಳಿ ಕಾರೊಂದು ಚಲಿಸುತ್ತಿದ್ದ ವೇಳೆ, ಇಂಜಿನ್ (Engeen) ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೋಡಲೆ ಕಾರನ್ನು ರಸ್ತೆ ಬದಿಗೆ ತೆಗೆದುಕೊಂಡು ಕಾರಿನಲ್ಲಿದ್ದವರು ಇಳಿದಿದ್ದಾರೆ. ತದನಂತರ ಸಂಪೂರ್ಣ ಇಂಜಿನ್ ಭಾಗಕ್ಕೆ ಬೆಂಕಿ ಆವರಿಸಿಕೊಂಡು ಕಾರು ಹೊತ್ತಿ ಉರಿದಿದೆ.

ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆಯು ರಾಯಚೂರು ಗ್ರಾಮಾಂತರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.


[ays_poll id=3]