![]() |
![]() |
![]() |
![]() |
![]() |
ಮಾನ್ವಿ : ತಾಲೂಕಿನ ಕಂಬಳತ್ತಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಶಾಲಾ ಸುಧಾರಣ ಸಮಿತಿಗೆ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಹುಸೇನ್ ಭಾಷಾ, ಉಪಾಧ್ಯಕ್ಷರಾಗಿ ಆಯ್ಕೆಯಾದ ತರಸಾಲಪ್ಪರನ್ನು ರಾಯಚೂರು ಭಾ.ಜ.ಪಾ. ಮೈನಾರಿಟಿ ಮುಖಂಡರಾದ ಜಾವಿದ್ ಖಾನ್ ಸನ್ಮಾನಿಸಿ ಗೌರವಿಸಿ ಮಾತನಾಡಿ ನೂತನ ಪದಾಧಿಕಾರಿಗಳು ಸರಕಾರದ ಯೋಜನೆಗಳನ್ನು ಸದುಪಯೋಗಪಡಿಕೊಂಡು ಶಾಲೆಯ ಅಭಿವೃದ್ದಿ ಹಾಗೂ ಶಾಲಾ ಮಕ್ಕಳಿಗೆ ಅಗತ್ಯವಾದ ಕಲಿಕಾ ವಾತವರಣ ಅಗತ್ಯ ಮೂಲಭೂತಸೌಲಭ್ಯಗಳನ್ನು ಒದಗಿಸಲು ಶ್ರಮಿಸುವಂತೆ ಕರೆ ನೀಡಿದರು
ಗ್ರಾ.ಪಂ. ಸದಸ್ಯ ಗುರುಸ್ವಾಮಿ, ಮುಖಂಡರಾದ ಇಮಾಮ್ ಸಾಬ್, ವಿಶ್ವನಾಥ ಮತ್ತು ಶಾಲೆಯ ಪ್ರಧಾನಮುಖ್ಯಪಾಧ್ಯಾಯರು ಮತ್ತು ಶಿಕ್ಷಕರು, ಪಾಲಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
![]() |
![]() |
![]() |
![]() |
![]() |
[ays_poll id=3]