ಮಾನ್ವಿ : 15 ನೇ ಹಣಕಾಸು ಯೋಜನೆಯ ಅನುದಾನ ಹಣದುರ್ಬಳಕೆ ಮಾಡಿರುವ ಉಟಕನೂರು ಗ್ರಾ.ಪಂ ಪಿಡಿಓ ರಾಮಪ್ಪ ನಡಗೇರಿ ಇವರನ್ನು ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ.
ಹೈದ್ರಾಬಾದ್ -ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ಎಂ.ಬಿ.ನಾಯಕ ಮಾನ್ವಿ ತಾಲೂಕಿನ ಉಟ ಕನೂರು ಗ್ರಾಮ ಪಂಚಾಯತಿಯಲ್ಲಿ ಪ್ರಸಕ್ತ ಸಾಲಿನ 15 ಪಂಚವಾರ್ಷಿಕ ಹಣಕಾಸು ಯೋಜನೆಯಲ್ಲಿ ಅಂದಾಜು 40 ಲಕ್ಷ ರೂ.ಹಣ ದುರ್ಬಳಕೆಯಾಗಲು ಗ್ರಾ.ಪಂ ಪಿಡಿಓ ರಾಮಪ್ಪ ನಡಗೇರಿ ಕಾರಣೀಕರ್ತನಾಗಿದ್ದಾನೆ.
15 ನೇ ಹಣಕಾಸು ಯೋಜನೆಗೆ ಸಂಬಂಧಪಟ್ಟಂತೆ ಪಿಡಿಓ ರಾಮಪ್ಪ, ಗ್ರಾ.ಪಂ.ಅಧ್ಯಕ್ಷರು, ಉಪಾಧ್ಯಕ್ಷ ರಾಗಿ ಹಾಗೂ ಸದಸ್ಯರು ಯಾವುದೇ ಕ್ರಿಯಾ ಯೋಜನೆ ರೂಪಿಸದೇ ಅಂದಾಜು 40 ಲಕ್ಷ ರೂ.ಹಣ ವಿವಿಧ ಏಜೇನ್ಸಿ ಹಾಗೂ ವೆಂಡರುಗಳ ಹೆಸರಿಗೆ ವರ್ಗಾವಣೆ ಮಾಡಿರುವ ದಾಖಲೆಗಳನ್ನು ಮಾಹಿತಿ ಹಕ್ಕು ಮೂಲಕ ಪಡೆದು ಪರಿಶೀಲಿಸಿದಾಗ ಯಾವುದೇ ಕಾಮಗಾರಿ ಮಾಡದೇ ಹಣ ಕ೦ಡುಬಂದಿದೆ.
ದುರ್ಬಳಕೆ ಮಾಡಿರುವುದು
ಈ ಅಕ್ರಮದಲ್ಲಿ ಪಿಡಿಓ ಸೇರಿದಂತೆ ಗ್ರಾ.ಪಂ, ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಕೂಡಾ ಭಾಗಿಯಾಗಿರುವುದರ ಬಗ್ಗೆ ಹಾಗೂ ಕೆಲವು ಸದಸ್ಯರ ಸಂಬಂಧಿಕರ ಹೆಸರಿನ ಬ್ಯಾಂಕ್ ಖಾತೆಗೂ ಅನುದಾನದ ಹಣ ಅಕ್ರಮವಾಗಿ ಜಮಾ ಆಗಿರುವುದರ ಬಗ್ಗೆ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು
ಗ್ರಾ.ಪಂ.ಕಾರ್ಯಾಲಯದ ಮುಂದೆ ನಮ್ಮ ಸಂಘಟನೆ ಹಾಗೂ ಉಟಕನೂರು ಭಾಗದ ಗ್ರಾಮಸ್ಥರ ವತಿಯಿಂದ ಅನಿರ್ಧಿಷ್ಟ ಧರಣಿ ಮಾಡಲಾಗಿತ್ತು.
ಈ ಹೋರಾಟಕ್ಕೆ ಮಣಿದ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು ತನಿಖಾ ತಂಡ ರಚನೆ ಮಾಡಿ ಅಕ್ರಮ ನಡೆದಿರುವ ಬಗ್ಗೆ ತನಿಖಾ ವರದಿ ಜಿ.ಪಂ.ಕಾರ್ಯಾಲಯಕ್ಕೆ ಸಲ್ಲಿಸಿರುವುದರಿಂದ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಪಿಡಿಓ ರಾಮಪ್ಪ ನಡಗೇರಿ ವಿರುದ್ಧ ಶಿಸ್ತು ಕ್ರಮ ಕೈಗೊಂಡು ಸೇವೆಯಿಂದ ಅಮಾನತ್ತು ಮಾಡಿ ನವೆಂಬರ್ 28 ರಂದು ಸೋಮವಾರ ಆದೇಶ ಹೊರಡಿಸಿದ್ದಾರೆಂದು ಎಂ.ಬಿ.ನಾಯಕ ತಿಳಿಸಿದರು. ಪಿಡಿಓ ರಾಮಪ್ಪ ನಡಗೇರಿ ಅಮಾನತು ಆಗಿರುವುದು ನಮ್ಮ ಸಂಘಟನೆಯ ಹೋರಾಟಕ್ಕೆ ಸಂದ ಪ್ರತಿಫಲವಾಗಿದೆ. ಆದರೂ ಹಣ ದುರ್ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಡಿಓ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಬೇಕು, ಹಣ ದುರ್ಬಳಕೆಯಲ್ಲಿ ಭಾಗಿಯಾಗಿರುವ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರ ಸದಸ್ಯತ್ವ ರದ್ದುಗೊಳಿಸಬೇಕೆಂದು ಒತ್ತಾಯಿಸಿ ನಿರಂತರ ಹೋರಾಟ ಮಾಡುವುದಾಗಿ ಹೇಳಿದರು.
![]() |
![]() |
![]() |
![]() |
![]() |
[ays_poll id=3]