ಮಾನ್ವಿ : ಪಟ್ಟಣದ ಬಾಷುಮಿಯಾ ಸಾಹುಕಾರ ಸರಕಾರಿ ಪ್ರಥಮದರ್ಜೆ ಕಾಲೇಜು ಸಭಾಂಗಣದಲ್ಲಿ ಕಾಲೇಜಿನ ಮಹಿಳಾ ಘಟಕ ಹಾಗೂ ಆಂತರಿಕಗುಣಮಟ್ಟ ಭರವಸೆ ಕೋಶ ವತಿಯಿಂದ ಲಿಂಗ ಸಮಾನತೆ ಕುರಿತು ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಸುರೇಶ ಶರಣಪ್ಪ ಪಾಟೀಲ್ ಮಾತನಾಡಿ ನಮ್ಮ ಸರಕಾರಿ ಕಾಲೇಜಿನಲ್ಲಿ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಸೇರಿದಂತೆ ತೃತೀಯ ಲಿಂಗಿಗಳಿಗು ಕೂಡ ಯಾವುದೇ ತಾರತಮ್ಯವಿಲ್ಲದೆ ಉತ್ತಮ ಕಲಿಕಾ ವಾತವರಣವನ್ನು, ಗುಣಮಟ್ಟದ ಶಿಕ್ಷಣವನ್ನು ನೀಡುವ ಸೇವಾ ಮನೋಭಾವವುಳ್ಳ ಶಿಕ್ಷಕರಿಂದ ಮಾತ್ರ ವಿದ್ಯಾರ್ಥಿಗಳ ಭವಿಷ್ಯ ಉಜ್ವಾಲ ಗೊಳ್ಳುವುದಕ್ಕೆ ಸಾಧ್ಯ ಎನ್ನುವುದಕ್ಕೆ ಸರಕಾರಿ ಕಾಲೇಜಿನಲ್ಲಿ ಶಿಕ್ಷಣ ಪಡೆದು ಅಶ್ವಥಾಮ ಪೂಜಾ ಶಿಕ್ಷಕಿಯಾಗಿ ಆಯ್ಕೆಯಾಗುವ ಮೂಲಕ ತಮ್ಮ ಜೀವನವನ್ನು ಭವಿಷ್ಯವನ್ನು ಉನ್ನತಗೊಳಿಸಿಕೊಳ್ಳುವುದರೊಂದಿಗೆ ರಾಜ್ಯದ ತೃತೀಯ ಲಿಂಗಿಗಳಿಗೂ ಸ್ಪೂರ್ತಿಯಾಗಿ ಸಮಾಜದಲ್ಲಿ ಲಿಂಗ ಸಮಾನತೆ ಮೂಡಲು ಕಾರಣರಾಗಿದ್ದು ವಿದ್ಯಾರ್ಥಿಗಳು ಇವರ ಜೀವನ ಹಾಗೂ ಸಾಧನೆಯನ್ನು ಸ್ಪೂರ್ತಿಯಾಗಿ ತೆಗೆದುಕೊಳ್ಳುವ ಮೂಲಕ ಜೀವನದಲ್ಲಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳುವಂತೆ ತಿಳಿಸಿದರು.
ಲಿಂಗ ಸಮಾನತೆ ವಿಷಯದ ಕುರಿತು ಅಶ್ವಥಾಮ ಪೂಜಾ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿ ಆಯ್ಕೆಯಾಗಿರುವ ಕಾಲೇಜಿನ ಹಳೇ ತೃತೀಯ ಲಿಂಗಿ ವಿದ್ಯಾರ್ಥಿ ಅಶ್ವಥಾಮ ಪೂಜಾರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರಾದ ಸುಮಿತ್ರಾ ಪ್ಯಾಟಿ, ಶೋಭಾ, ಸಿ.ಎಚ್.ಸುಧಾ. ಆರ್, ಡಾ. ರಾಘವೇಂದ್ರ ನಾಯಕ್, ಶಿವರಾಜ ಕೊಪ್ಪರ್, ಸಚಿನ್ ಕೇಣಿಕರ್, ಚಂದ್ರ .ಎನ್. ಹೊಸುರು, ಡಾ.ಚನ್ನಬಸವ ಮಾಡಿಗಿರಿ, ಸೇರಿದಂತೆ ವಿದ್ಯಾರ್ಥಿಗಳು ಇದ್ದರು.
![]() |
![]() |
![]() |
![]() |
![]() |
[ays_poll id=3]