This is the title of the web page
This is the title of the web page
Local News

ಭಾರತವು ವಿಶ್ವದಲ್ಲಿಯೇ ಅತ್ಯಂತ ಬಲಿಷ್ಟವಾದ ದೇಶವಾಗಿ ಬೆಳೆಯುತ್ತಿದೆ


ಮಾನ್ವಿ : ಸೈನಿಕ ತನ್ನ ಪ್ರಾಣವನ್ನು ದೇಶಕ್ಕಾಗಿ ಸಮರ್ಪಣೆಮಾಡುವ ಯೋಧರನ್ನು ಇಂದು ಮೋದಿಯವರು ಕಳೆದುಕೊಳ್ಳದಂತೆ ಭಾರತೀಯ ಸೈನಿಕರಿಗಾಗಿ ಅತ್ಯಂತ ಆಧುನಿಕವಾದ ಶಸ್ತಾçಸ್ತçಗಳನ್ನು ಆತ್ಯಧುನಿಕ ಯುಧ್ದವಿಮಾನಗಳನ್ನು ಒದಾಗಿಸುವ ಮೂಲಕ ದೇಶವನ್ನು ಬಲಿಷ್ಠವಾಗಿಸಿದ್ದಾರೆ ಎಂದು ಯುವಾ ಬ್ರಿಗೇಡ್ ಸಂಸ್ಥಾಪಕರಾದ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಪಟ್ಟಣದ ಟಿ.ಎ.ಪಿ.ಸಿ.ಎಂ.ಸಿ ಆವರಣದಲ್ಲಿ ಯುವಾ ಬ್ರಿಗೇಡ್ ತಾ.ಘಟಕವತಿಯಿಂದ ನಡೆದ ಪರಮ್ ವೀರ್ ನಮ್ಮನ್ನು ಕಾಯ್ದವನ ಕಥೆ ಕಾರ್ಯಕ್ರಮವನ್ನು, ಯುವಾ ಬ್ರಿಗೇಡ್ ಸಂಸ್ಥಾಪಕರಾದ ಚಕ್ರವರ್ತಿ ಸೂಲಿಬೆಲೆ, ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಭಾರತ ಮಾತೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದ ಒಂದು ವರ್ಷದ ನಂತರ ಕಲ್ಯಾಣ ಕರ್ನಾಟಕ ಭಾಗಕ್ಕೆ, ಸ್ವಾತಂತ್ರ್ಯ ಬಂದಿದ್ದು 75ನೇ ಸ್ವಾತಂತ್ರ್ಯ ಮಹೋತ್ಸವವನ್ನು ಯುವಾ ಬ್ರಿಗೇಡ್ ವತಿಯಿಂದ ಉಗೆ ಕಲ್ಯಾಣ ಕರ್ನಾಟಕ ಹೆಸರಿನಲ್ಲಿ ನಮ್ಮ ಊರು ನಮ್ಮ ಕನಸು ಎನ್ನುವ ಕಾರ್ಯಕ್ರಮದ ಮೂಲಕ, ಈ ಭಾಗದ ಅಭಿವೃದ್ದಿಗೆ ಪಣತೊಟ್ಟಿದ್ದು ತರುಣರು, ಈ ಕಾರ್ಯಕ್ರಮದಲ್ಲಿ ನಮ್ಮೊಂದಿಗೆ ಕೈಜೋಡಿಸಿ ನಿಮ್ಮ ಊರಿನ ಚಿತ್ರಣವನ್ನೇ ಬದಲಾಯಿಸಿ.

ಇತಿಹಾಸದಲ್ಲಿ ಕಂಡತೆ ಭಾರತ ದೇಶದ ಮೇಲೆ ಹಾಗೂ ನಮ್ಮ ಹಿಂದೂ ಧರ್ಮದ ಮೇಲೆ ಅತಿಹೆಚ್ಚು ಆಕ್ರಮಣಗಳು ನಡೆದಿವೇ. ಆಕ್ರಮಣ ನಡೆದ ಪ್ರತಿಬಾರಿಯು ದೇಶಭಕ್ತರ ಕೆಚ್ಚೆದೆಯ ಹೋರಾಟದಿಂದ ದೇಶವನ್ನು ಕಟ್ಟಿಕೊಳ್ಳುತ್ತ ಬಂದಿದೇವೆ. ಇಂದು ಭಾರತವು ವಿಶ್ವದಲ್ಲಿಯೇ ಅತ್ಯಂತ ಬಲಿಷ್ಟವಾದ, ನಂತರವು ನಮ್ಮ ಯೋಧರು ನೇರೆಯ ಎರಡು ರಾಷ್ಟದ ಜೋತೆಗೆ ಶತ್ರುರಾಷ್ಟದ ಗಡಿಯಲ್ಲಿ ನುಗಿ ಭಯತ್ಪೋದಕರನ್ನು ನಾಶ ಪಡಿಸುತ್ತಿದ್ದಾರೆ. ನಮ್ಮ ದೇಶದಲ್ಲಿ ಮುಂದಿನ ದಿನಗಳಲ್ಲಿ ಅಧಿಕಾರದ ಆಸೆಗೆ ನಮ್ಮ ಕೇಲವು ರಾಜಕೀಯ ನಾಯಕರು ಜಾತಿ ಜಾತಿಗಳ ನಡುವೆ, ಧರ್ಮಗಳ ನಡುವೆ,ಪ್ರಾಂತಗಳ ನಡುವೆ ಹಚ್ಚುವ ಸಂಘರ್ಷವನ್ನು ಸ್ವಯಂ ಯೋಧರಂತೆ ದೇಶದ ಆಂತರಿಕ ಶಾಂತಿಯನ್ನು ಕಾಪಾಡುವುದು ಮುಖ್ಯವಾಗಿರುತ್ತದೆ.

ಪ್ರತಿಯೊಬ್ಬರಲ್ಲಿ ನಮ್ಮ ಒಳಗೆ ಸೈನಿಕನಾಗುವ ದೃಢತೆ ಬೆಳೆಸಿಕೊಳ್ಳಬೇಕು. ಸೈನಿಕ ತನ್ನ ಪ್ರಾಣವನ್ನು ದೇಶಕ್ಕಾಗಿ ಸಮರ್ಪಣೆಮಾಡುವ ಯೋಧರನ್ನು ಇಂದು ಮೋದಿಯವರು ಕಳೆದುಕೊಳ್ಳದಂತೆ ಭಾರತೀಯ ಸೈನಿಕರಿಗಾಗಿ ಅತ್ಯಂತ ಆಧುನಿಕವಾದ ಶಸ್ತ್ರಾಸ್ತ್ರಗಳನ್ನು ಆತ್ಯಧುನಿಕ ಯುಧ್ದವಿಮಾನಗಳನ್ನು ಒದಾಗಿಸುವ ಮೂಲಕ ದೇಶವನ್ನು ಬಲಿಷ್ಠವಾಗಿಸಿದ್ದಾರೆ. ಮಾಜಿಯೋಧರು ಹಾಗೂ ಭಾರತೀಯ ಸೈನ್ಯದಲ್ಲಿ ಹವಲ್ದಾರ್‌ರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಚನ್ನರೆಡ್ಡಿ ಮಾತನಾಡಿ ದೇಶಕ್ಕಾಗಿ ತಮ್ಮ ಪ್ರಾಣವನ್ನು ಮುಡಿಪಗಿಟ್ಟು ದೇಶವನ್ನು ರಕ್ಷಿಸಿದ 21 ಭಾರತೀಯ ಯೋಧರಿಗೆ ದೇಶದ ಅತ್ಯುನ್ನತವಾದ ಶೌರ್ಯ ಪ್ರಶಸ್ತಿಯಾದ ಪರವೀರ ಚಕ್ರ ದೊರೆತಿರುವುದು ನಮ್ಮೆಲ್ಲರ ಹೆಮ್ಮೆಯ ಸಂಗತಿಯಾಗಿದೆ.

ಜಿಲ್ಲೆಯಲ್ಲಿನ ನಿವೃತ್ತ ಯೋಧರು ಭಾರತೀಯ ಸೈನ್ಯವನ್ನು ಅಗ್ನಿಪಾತ್ ಯೋಜನೆಯ ಮೂಲಕ ಸೇರಲು ದೇವದುರ್ಗ ದಲ್ಲಿ ತರಬೇತಿಯನ್ನು ನೀಡುತ್ತಿದ್ದು ಮಾನ್ವಿಯಲ್ಲಿಯು ತರಬೇತಿಯನ್ನು ನೀಡಲಾಗುವುದು ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಭಾರತೀಯ ಸೈನ್ಯದಲ್ಲಿ ಸೇವೆಸಲ್ಲಿಸಿ ನಿವೃತ್ತಿಹೊಂದಿದ ಹಾಗೂ ಸೇವೆ ಸಲ್ಲಿಸುತ್ತಿರುವ ಯೋಧರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು. ನಂತರ ನಿವೃತ್ತ ಯೋಧರಿಂದ ಚಕ್ರವರ್ತಿ ಸೂಲಿಬೆಲೆಯನ್ನು ಸನ್ಮಾನಿಸಲಾಯಿತು.


[ays_poll id=3]