This is the title of the web page
This is the title of the web page

archivelocal

Local News

ಹೈದರಾಬಾದ್ ಬೆಳಗಾವಿ ರಾಷ್ಟ್ರೀಯ ಹೆದ್ದಾರಿ ಸರ್ವೆಕಾಮಗಾರಿ ಆರಂಭ

ಸಿರವಾರ : ಹುನಗುಂದ ವಯಾ ಲಿಂಗಸ್ಗೂರು, ಸಿರವಾರ ರಾಯಚೂರು ರಸ್ತೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರವು 12500 ಕೊ. ಅನುದಾನ ಮಂಜೂರು ಆಗಿದ್ದೂ ಶೀಘ್ರ ಕಾಮಗಾರಿ ಪ್ರಾರಂಭವಾಗುತ್ತದೆ ಎಂದು ರಾಯಚೂರು ಸಂಸದರಾದ ರಾಜಾ ಅಮರೇಶ್ವರ ನಾಯಕ ಹೇಳಿದರು. ತಾಲೂಕಿನ ಹೀರಾ ಗ್ರಾಮದಲ್ಲಿ ಆದರ್ಶ ಗ್ರಾಮ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸಿದ ಅವರನ್ನು “ಹೈದ್ರಬಾದ್- ಬೆಳಗಾವಿ (ರಾಯಚೂರು-ಹುನಗುಂದ) ರಸ್ತೆ ನಿರ್ಮಾಣ ಈಗಾಗಲೇ ಸರ್ವೆ ಕಾರ್ಯ ಮುಗಿದಿದೆ. ರೈತರ ಜಮೀನುಗಳಲ್ಲಿ ಬೆಳೆ ಇರುವ ಕಾರಣಕಾಮಗಾರಿ ಪ್ರಾರಂಭಕ್ಕೆ ವಿಳಂಭವಾಗಿದೆ. ಹುನಗುಂದದಿಂದ ರಾಯಚೂರು ಚಿಕ್ಕಸೂಗುರು ಹತ್ತಿರ ಈ ಹೈವೆ ಬರುತ್ತದೆ. ಮುದುಗಲ್, ಲಿಂಗಸ್ಗೂರು, ಕವಿತಾಳ ಮತ್ತು ಸಿರವಾರ ಪಟ್ಟಣದ ಹೊರವಲಯದಲ್ಲಿ ಈರಸ್ತೆಯು ಹಾದುಹೊಗುತ್ತದೆ. ಪಟ್ಟಣದಲ್ಲಿ ಈ ರಸ್ತೆ ಬರುವುದಿಲ್ಲ ಸಾರ್ವಜನಿಕರು ಆತಂಕ ಪಡುವ ಅವಶ್ಯಕತೆಯಿಲ್ಲ. ಈ ರಸ್ತೆ ನಿರ್ಮಾಣವಾದರೆ ಹೈದ್ರಾಬಾದ್- ಬೆಳಗಾವಿ, ಗೋವಾಕ್ಕೆ ಸುಲಭವಾಗಿ ಕಡಿಮೆ ಅವಧಿಯಲ್ಲಿ ತಲುಪಬಹುದು ಹಾಗೂ ಸರಕು ಸಾಗಾಣಿಕೆಗೆ ಅನುಕೂಲವಾಗುತ್ತದೆ. ಅದೇ...
Local News

ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶಿಶು ಅಭಿವೃದ್ಧಿ ಯೋಜನೆ ಜಾರಿ

ರಾಯಚೂರು : ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ೦7 ತಾಲೂಕುಗಳಲ್ಲಿ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಅಂಗನವಾಡಿ ಕೇಂದ್ರಗಳ ಮೂಲಕ ಶಿಶು ಅಭಿವೃದ್ಧಿ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಈ ಯೋಜನೆಯಲ್ಲಿ ಪ್ರಗತಿ ಸಾಧಿಸಲು ಅಂಗನವಾಡಿ ಕಾರ್ಯಕರ್ತೆಯರ ಪಾತ್ರ ಅತ್ಯಂತ ಮುಖ್ಯವಾಗಿರುತ್ತದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಅವರು ಹೇಳಿದರು. ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಇಲಾಖೆಯಿಂದ ಹಮ್ಮಿಕೊಳ್ಳಲಾದ ಕಾರ್ಯಕ್ರಮಗಳು ಹಾಗೂ ಯೋಜನೆಗಳನ್ನು ಅನುಷ್ಟಾನಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಹೆಚ್ಚಿನ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕಾಗಿದ್ದು, ಯಾವುದೇ ಯೋಜನೆಯನ್ನು ಅನುಷ್ಟಾನಗೊಳಿಸಲು ಇಚ್ಛಾಶಕ್ತಿ ಅತ್ಯವಶ್ಯಕವಾಗಿದೆ ಎಂದರು. ಇಲಾಖೆಯ ಪ್ರತಿಯೊಬ್ಬ ಅಧಿಕಾರಿ, ಸಿಬ್ಬಂದಿ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಇಲಾಖೆಯ ಯೋಜನೆಗಳನ್ನು ಅನುಷ್ಠಾನಗೊಳಿಸಲು ಹಾಗೂ ಕಾರ್ಯಕ್ರಮಗಳಲ್ಲಿ...
Local News

ಅಂಗನವಾಡಿ ಕಾರ್ಯಕರ್ತೆಯರನ್ನು ಶಿಕ್ಷಕಿರನ್ನಾಗಿ ಪರಿಗಣಿ

ರಾಯಚೂರು : ಅಂಗನವಾಡಿ ಕಾರ್ಯಕರ್ತೆಯರನ್ನು ಶಿಕ್ಷಕಿರನ್ನಾಗಿ ಪರಿಗಣಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ನಗರದ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಿದರು. ಗ್ರಾಚ್ಯುಟಿ ಪಾವತಿಸಲು ಕೂಡಲೇ ಸರ್ಕಾರ ನಿರ್ದೇಶನ ನೀಡಬೇಕು.ಅಂಗನವಾಡಿ ಕೇಂದ್ರಗಳಲ್ಲಿಯೇ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಪ್ರಾರಂಭಿಸಬೇಕು. ಏಪ್ರೀಲ್ 25 ರಂದು ಸುಪ್ರೀಂ ಕೋರ್ಟ್ 1972 ರ ಗ್ರಾಚ್ಯುಟಿ ಕಾಯ್ದೆಯ ಪ್ರಕಾರ ಅಂಗನವಾಡಿ ನೌಕರರು ಗ್ರಾಚ್ಯುಟಿ ಪಡೆಯಲು ಅರ್ಹರು ಎಂಬ ಐತಿಹಾಸಿಕ ತೀರ್ಪ ನೀಡಿದೆ.ಇದರ ಪ್ರಕಾರ ರಾಜ್ಯದಾದ್ಯಂತ ಸಾವಿರಾರು ನಿವೃತ್ತಿ ನೌಕರರು ಸಿಡಿಪಿಒ,ಡಿ.ಡಿ. ನಿರ್ದೇಶಕರು ಮತ್ತು ಪ್ರಧಾನ ಕಾರ್ಯದರ್ಶಿಗಳಿಗೆ ಅರ್ಜಿಯನ್ನು ಸ್ವತಃ ಹಾಗೂ ಅಂಚೆ ಮುಖಾಂತರ ಸಲ್ಲಿಸಿದ್ದಾರೆ.ಆದರೆ ಕೆಲವೆಡೆ ಸಿಡಿಪಿಒ,ಡಿ.ಡಿ.ನಿರ್ದೇಶಕರು ಮತ್ತು ಪ್ರಧಾನ ಕಾರ್ಯದರ್ಶಿಗಳು ಅರ್ಜಿಗಳನ್ನು ತೆಗೆದು ಕೊಳ್ಳಲು ಕೆಲವೆಡೆ ನಿರಾಕರಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ 48 ವರ್ಷಗಳ ಇತಿಹಾಸದಲ್ಲಿ ಬಂದಂತಹ ಒಂದು ಸವಲತ್ತನ್ನು ಪಡೆಯಲು ಬೇಕಾದ ದಾಖಲಾತಿಗಳನ್ನು...
Local News

ಕೃಷಿ ಕಾಯ್ದೆಗಳನ್ನು ಹಿಂಪಡೆಯಲು ಆಗ್ರಹಿಸಿ ಡಿ.5 ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ

ರಾಯಚೂರು : ರಾಜ್ಯ ಸರ್ಕಾರ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಡಿಸೆಂಬರ್ 5 ರಂದು ಜಿಲ್ಲಾಧಿಕಾರಿ ಕಾರ್ಯಾಲಯಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ನರಸಿಂಹ ನಾಯಕ ಹೇಳಿದರು. ಕೇಂದ್ರ ಸರಕಾರ ವಾಪಸ್ಸು ಪಡೆದ ರೀತಿಯಲ್ಲಿ ರಾಜ್ಯ ಸರಕಾರವು ಕೃಷಿ ಕಾಯ್ದೆಗಳನ್ನು ಕೂಡಲೇ ವಾಪಸ್ಸುಪಡೆಯಬೇಕು.ರೈತರ ಬೆಳೆದಂತ ಎಲ್ಲಾ ಬೆಳೆಗೆ ಕಾನೂನಾತ್ಮಕ ಬೆಳೆ ನಿಧಿಪಡಿಸಬೇಕು. ರೈತರ ಪಂಪ್‌ಸೇಟ್‌ಗಳಿಗೆ ವಿದ್ಯುತ್ ಮೀಟರ್ ಅಳವಡಿಸುವುದನ್ನು ರದ್ದುಪಡಿಸಬೇಕು. ಆಲಮಟ್ಟಿ ಡ್ಯಾಂ ಜಲಾಶಯ 512 ಮೀಟರ್ ನಿಂದ 526 ಮೀಟರ್ ನಿಂದ ಎತ್ತರಿಸಲು ಹೋರಾಟ ಮಾಡಬೇಕು ಎಂದು ಒತ್ತಾಯಿಸಿದರು. ರಾಜ್ಯದ್ಯಾಂತ ತೀವ್ರ ಮಳೆಯಿಂದ ರೈತರು ಬೆಳೆದ ಬೆಳೆ ಹಾನಿಯಾಗಿದ್ದು,2018- 2022 ರ ವರೆಗೆ ನಮ್ಮ ಸಂಘಟನೆ ಕೇಂದ್ರ ಮಾದರಿಯಲ್ಲಿ ಹೆಕ್ಟರ್‌ಗೆ ರೂ.೩೫ ಸಾವಿರ ಧನ ಸಹಾಯ ಬಿಡುಗಡೆ ಮಾಡಬೇಕು...
Local News

ಮತದಾರರ ಪಟ್ಟಿಗೆ ಪ್ರತಿಯೊಬ್ಬರು ಹೆಸರನ್ನು ಸೇರ್ಪಡೆ ಮಾಡಿಕೊಳ್ಳಿ: ಶಶಿಧರ ಕುರೇರ

ರಾಯಚೂರು : ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಸೇರ್ಪಡೆ ಮಾಡಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ಮತದಾನದ ಹಕ್ಕನು ಪಡೆಯಬೇಕು ಹಾಗೂ ಸುತ್ತಮುತ್ತಲಿನ ಜನರಿಗೂ ಮತದಾರರ ಪಟ್ಟಿಯಲ್ಲಿ ಹೆಸರನ್ನು ಸೇರ್ಪಡೆ ಮಾಡಿಕೊಳ್ಳುವ ಕುರಿತು ಜಾಗೃತಿ ಮೂಡಿಸಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕರೇರ ಅವರು ಹೇಳಿದರು. ಅವರು ಡಿ.01 ನಗರದ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸ್ವೀಪ್ ಸಮಿತಿಯ ವತಿಯಿಂದ ಹಮ್ಮಿಕೊಂಡಿದ್ದ ಮತದಾರರ ಪಟ್ಟಿಗೆ ಹೆಸರನ್ನು ಸೇರ್ಪಡೆ ಮಾಡಿಕೊಳ್ಳುವ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿದ್ದ ಅರಿವು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ವಿದ್ಯಾರ್ಥಿಗಳು ತಮ್ಮ ಮನೆಯಲ್ಲಿರುವವರಿಗೆ ಹಾಗೂ ಸುತ್ತಮುತ್ತಲಿನವರಿಗೆ ಮತದಾರರ ಪಟ್ಟಿಯಲ್ಲಿ ಹೆಸರನ್ನು ನೊಂದಾಯಿಸಿಕೊಳ್ಳುವಂತೆ ತಿಳಿಸಬೇಕು ಹಾಗೂ ಈಗಾಗಲೇ ಬಿಡುಗಡೆಯಾಗಿರುವ ಕರಡು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಪರಿಶೀಲಿಸಿ ಹೆಸರು ಇಲ್ಲದೇ ಇದ್ದಲ್ಲಿ ಮತದಾರರ ಪಟ್ಟಿಗೆ ಹೆಸರನ್ನು ಸೇರ್ಪಡೆ ಮಾಡಿಕೊಳ್ಳುವಂತೆ ಜನರಲ್ಲಿ...
Local News

ವಿಶ್ವ ಏಡ್ಸ್ ದಿನದಂಗವಾಗಿ ಜಾಗೃತಿ ಜಾಥಾ ಕಾರ್ಯಕ್ರಮ

ರಾಯಚೂರು : ವಿಶ್ವ ಏಡ್ಸ್ ದಿನದ ಅಂಗವಾಗಿ ನಗರದ ಬಿ.ಆರ್.ಬಿ ವೃತ್ತದಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿವರೆಗೆ “ಸಮನ್ವಯಗೊಳಿಸು ನಮ್ಮೆಲ್ಲರ ಪ್ರಾಮಾಣಿಕ ಪ್ರಯತ್ನದಿಂದ ಅಸಮಾನತೆಯನ್ನು ಪರಿಹರಿಸೋಣ ಮತ್ತು ಏಡ್ಸ್ ಅನ್ನು ಕೊನೆಗೊಳಿಸೋಣ” ಎಂಬ ಘೋಷವಾಕ್ಯದಡಿ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಯಿತು. ಜಿಲ್ಲಾ ಕಾನೂನು ಸೆವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಪೋಲಿಸ್ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಏಡ್ಸ್ ತಡೆ ಮತ್ತು ನಿಯಂತ್ರಣ ಘಟಕ, ರಿಮ್ಸ್ ಆಸ್ಪತ್ರೆ, ನವೋದಯ ಆಸ್ಪತ್ರೆ, ಜಿಲ್ಲೆಯ ರಕ್ತ ನಿಧಿ ಕೇಂದ್ರಗಳು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಗರದ ಬಿ.ಆರ್.ಬಿ ವೃತ್ತದಲ್ಲಿ ವಿಶ್ವ ಏಡ್ಸ್ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ದಯಾನಂದ. ಎಮ್. ಬೇಲೂರೆ, ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ,...
Crime NewsLocal News

ಜಿಲ್ಲೆಯಲ್ಲಿ ಮತ್ತೊಂದು ಲವ್ ಜಿಹಾದ್ ಪ್ರಕರಣ

ರಾಯಚೂರು: ಇತ್ತೀಚೆಗೆ ಲವ್ ಜಿಹಾದ್ ಪ್ರಕರಣಗಳು ಒಂದರ ಮೇಲೊಂದರಂತೆ ಬೆಳಕಿಗೆ ಬರುತ್ತಿವೆ. ಇದೀಗ ಮತ್ತೊಂದು ಲವ್ ಜಿಹಾದ್ ಪ್ರಕರಣ ಬೆಳಕಿಗೆ ಬಂದಿದ್ದು, ನಿಶ್ಚಿತಾರ್ಥವಾಗಿ ಮೂರು ತಿಂಗಳಲ್ಲಿ ಮದುವೆ ಇದ್ದ ಯುವತಿಯನ್ನು ಅನ್ಯಕೋಮಿನ ವ್ಯಕ್ತಿ ವಿರುದ್ಧ ಲವ್ ಜಿಹಾದ್ ಆರೋಪ ಮಾಡಿದ ಪೋಷಕರು. ಹೌದು ರಾಯಚೂರಿನಲ್ಲಿ ಕೆಲವೇ ದಿನಗಳ ಹಿಂದೆ ಹಿಂದು ಶಿಕ್ಷಕಿಯೊಬ್ಬಳು ತಮ್ಮ 7 ವರ್ಷದ ಮಗುವನ್ನೂ ಬಿಟ್ಟು ಸಲೀಂ ಮುಸ್ಲಿಂ ವ್ಯಕ್ತಿಯೊಬ್ಬನೊಂದಿಗೆ ಪರಾರಿಯಾಗಿದ್ದಳು. ಇದು ಲವ್ ಜಿಹಾದ್ ಎಂಬ ಆರೋಪವನ್ನು ಆ ಶಿಕ್ಷಕಿಯ ಮನೆಯವರೇ ಮಾಡಿದ್ದರು. ಅದರ ಬೆನ್ನಲ್ಲೇ ರಾಯಚೂರಿನಿಂದ ಮತ್ತೊಂದು ಲವ್ ಜಿಹಾದ್ ಪ್ರಕರಣ ಬೆಳಕಿಗೆ ಬಂದಿದೆ. ಹಿಂದು ಯುವತಿ ಭಾರತಿ ಎಂಬಾಕೆಯನ್ನು ಮುಸ್ಲಿಂ ಯುವಕ ರೆಹಾನ್ ಎಂಬಾತ ಲವ್ ಜಿಹಾದ್ ಬಲೆಗೆ ಬೀಳಿಸಿದ್ದಾನೆ ಎಂಬ ಆರೋಪವನ್ನು ಭಾರತಿ ಪಾಲಕರು ಮಾಡಿದ್ದಾರೆ. ಈ ರೆಹಾನ್ ನಗರದಲ್ಲಿ ಪ್ಲವರ್ ಶೋ ವ್ಯಾಪಾರಿಯಾಗಿದ್ದ. ಆತ ಕೆಲಸ ಮಾಡುವ...
Local News

NPS ರದ್ದತಿಗಾಗಿ ಬೆಳಗಾವಿ ಅಧಿವೇಷನದಲ್ಲಿ ಸರಕಾರದ ಮೇಲೆ ಒತ್ತಡ ಹಾಕುವೆ

ರಾಯಚೂರು : ಎನ್ಪಿಎಸ್ ರದ್ದುಗೊಳಿಸಿ ಓ ಪಿ ಎಸ್ ಜಾರಿಗೆ ತರುವಂತೆ ಬೆಳಗಾವಿ ಅಧಿವೇಶನದಲ್ಲಿ ನೌಕರರ ಧ್ವನಿಯಾಗಿ ಸರಕಾರದ ಮೇಲೆ ಒತ್ತಡ ಹೇರುವಂತೆ ರಾಯಚೂರು ನಗರ ಶಾಸಕರಾದ ಡಾ. ಶಿವರಾಜ್ ಪಾಟೀಲ್ ಅವರಿಗೆ ಕರ್ನಾಟಕ ರಾಜ್ಯ ಸರಕಾರಿ ಎನ್‌ಪಿಎಸ್ ನೌಕರರ ಸಂಘ ಜಿಲ್ಲಾ ಘಟಕ ರಾಯಚೂರು ವತಿಯಿಂದ ಮನವಿ ಸಲ್ಲಿಸಿದರು. ಎನ್ಪಿಎಸ್ ಯೋಜನೆ ಜಾರಿ ಯಾದಗಿನಿಂದ ನೌಕರರು ಸಾಕಷ್ಟು ಸಮಸ್ಯೆಗೆ ಈ ಹಿನ್ನೆಲೆಯಲ್ಲಿ ನೌಕರರ ಪರವಾಗಿ ಧ್ವನಿ ಎತ್ತಬೇಕು ಎಂದು ಮನವಿ ಸಲ್ಲಿಸಿದರು. ಈ ವೇಳೆ ಮನವಿ ಸ್ವೀಕರಿಸಿದ ನಗರ ಶಾಸಕರಾದ ಡಾ ಶಿವರಾಜ ಪಾಟೀಲ ರವರು ಈಗಾಗಲೇ ಈ ವಿಚಾರ ನನ್ನ ಗಮನದಲ್ಲಿದೆ, ಅಲ್ಲದೇ ಮುಪ್ಪಿನ ಭದ್ರತೆ ನೌಕರರರಲ್ಲಿ ಕಾಡುತ್ತಿದೆ ನಿಶ್ಚಿತ ಪಿಂಚಣಿ ನೌಕರರ ಬಾಳಿಗೆ ಆಶಾಕಿರಣ, ಸರಕಾರಿ ನೌಕರರಿಗೆ ಬರುವವರು ಪಿಂಚಣಿ ಇದೆ ಎಂಬ ಕಾರಣಕ್ಕೆ ಬರುತ್ತಾರೆ. ಇತ್ತೀಚಿನ ಬದಲಾವಣೆಯಿಂದ ನೌಕರರು ಸಂಕಷ್ಟದಲ್ಲಿದ್ದಾರೆ. ಹಾಗಾಗಿ...
Local News

ಡಿ.2ರಂದು ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ

ಮಾನ್ವಿ : ತಾಲೂಕಿನ ಆಲ್ದಾಳ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷ ಗ್ರಾಮದ ಆರಾಧ್ಯ ದೈವ ಶ್ರೀ ವೀರಭದ್ರೇಶ್ವರ ರಥೋತ್ಸವ ಡಿ.2ರಂದು ಅದ್ದೂರಿಯಾಗಿ ಜರುಗಲಿದೆ. ಶ್ರೀ ವೀರಭದ್ರೇಶ್ವರ ಜಾತ್ರೆಯ ಬೆಳ್ಳಿಗೆ 5 ಗಂಟೆಗೆ ಶ್ರೀ ಭದ್ರಕಾಳಿ ಶ್ರೀ ವೀರಭದ್ರೇಶ್ವರನಿಗೆ ಮಹಾರುದ್ರಭಿಷೇಕ ಪೂಜೆ , ಹಾಗೂ ಸಹಸ್ರ ಬಿಲ್ವಾರ್ಚನೆ ,ರುದ್ರಭಿಷೇಕ ಪೂಜೆ , ಮಹಾಮಂಗಳರತಿ ಜರುಗಲಿವೆ. ಬೆಳ್ಳಿಗೆ 9 ಗಂಟೆಗೆ ಗೋಪುರಕ್ಕೆ ಮತ್ತು ರಥೋತ್ಸವಕ್ಕೆ ಕಳಸರೋಹಣ ಹಾಗೂ ಹೂವಿನ ಅಲಂಕಾರ ಜರುಗಲಿವೆ. ಸಾಯಂಕಾಲ 3 ಗಂಟೆಗೆ ಶ್ರೀ ಭದ್ರಕಾಳಿ ವೀರಭದ್ರೇಶ್ವರ ಸ್ವಾಮಿಯ ಉತ್ಸವ ಮೂರ್ತಿಯೊಂದಿಗೆ ನಂದಿ ದ್ವಜದೂಡನೆ ಕಳಸ ಸಮೂಹದೂಂದಿಗೆ ಹೊರಡಿಸುವುದರ ಮೂಲಕ ಸಾಯಂಕಾಲ 5 ಗಂಟೆಗೆ ವೀರಭದ್ರರೇಶ್ವರ ಮಹಾರಥೋತ್ಸವ ವಿಜೃಂಭಣೆಯಿಂದ ಜರುಗಲಿದೆ. ನಂತರ ಸಾಯಂಕಾಲ 7ಗಂಟೆಗೆ ಅಗ್ನಿಕುಂಡ ಪ್ರವೇಶ ಮಹೋತ್ಸವ ಜರುಗಲಿದೆ. ಯಮನೂರು ಗ್ರಾಮದ ಶ್ರೀ ರುದ್ರಮುನಿ‌ಸ್ವಾಮಿ ಹಾಗೂ ಗುರು ಶಾಂತಯ್ಯ ಸ್ವಾಮಿ ಇವರಿಂದ ಪುರವಂತಿಕೆ ಮತ್ತು...
Local News

ಫೇ.13 ಸಾಮೂಹಿಕ ವಿವಾಹಗಳಿಗೆ ನೊಂದಾಯಿಸಿ ಕೊಳ್ಳಿ : ಮಂಜುನಾಥ್ ನಾಯಕ

ಮಾನ್ವಿ : ಕವಿ ಹಾಗೂ ಸಾಹಿತಿ ಸುರೇಶ್ ಗೌಡ ಮುಂದಿನ ಮನಿಯವರ 41 ಹುಟ್ಟು ಹಬ್ಬದ ಅಂಗವಾಗಿ ಪಟ್ಟಣದ ವಿರಕ್ತಮಠದಲ್ಲಿ ಫೆ.14 ರಂದು ಸಾಮೂಹಿಕ ವಿವಾಹ ಹಮ್ಮಿಕೊಳ್ಳಲಾಗಿದೆ ಎಂದು ಮಂಜುನಾಥ್ ನಾಯಕ ಹೇಳಿದರು. ಅಂದು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಕವಿ ಗೋಷ್ಠಿ, ಸಾಹಿತಿಗಳಿಗೆ ಸನ್ಮಾನ, ಪುಸ್ತಕ ಬಿಡುಗಡೆ, ತಾಲೂಕಿನ ಆರ್ಥಿಕವಾಗಿ ದುರ್ಬಲರಾಗಿರುವ ಬಡ ಕುಟುಂಬಗಳ ವಧುವರರಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ 101 ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಆಯೊಜಿಸಲಾಗಿದ್ದು. ಆಸಕ್ತರು ಸುರೇಶ್ ಗೌಡ ಮುಂದಿನ ಮನಿ ದೂ. 8050900133, ಸೈಯದ್ ಆರಿಫ್ 8095385018 ಇವರಲ್ಲಿ ತಮ್ಮ ಹೆಸರುಗಳನ್ನು ನೊಂದಾಯಿಸಿ ಕೊಳ್ಳಬೇಕು ಎಂದು ತಿಳಿಸಿದರು....
1 47 48 49 50
Page 49 of 50