This is the title of the web page
This is the title of the web page

archivelocal

Local News

2020ನೇ ಬ್ಯಾಚುನ ಫಲಿತಾಂಶ ಬಿಡುಗಡೆಗೆ ಒತ್ತಾಯ

ರಾಯಚೂರು : ಓಇಕೆ ಮೊದಲ ಬ್ಯಾಚನ 2020 ಪದವಿ ವಿದ್ಯಾರ್ಥಿಗಳ ಫಲಿತಾಂಶ ಬಿಡುಗಡೆಗೆ ಮತ್ತು ವಿತರಣೆ ಆಗದೇ ಇರುವ ವಿದ್ಯಾರ್ಥಿವೇತನವನ್ನು ಬಿಡುಗಡೆ ಮಾಡಬೇಕೆಂದು ಸರ್ಕಾರಿ ಪ್ರಥಮ ದರ್ಜೇ ಕಾಲೇಜಿನ ಮಹಿಳಾ ವಿದ್ಯಾರ್ಥಿಗಳು ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಪ್ರತಿಭಟನೆ ನಡೆಸಿದರು. ರಾಜ್ಯದ ಪದವಿ ಶಿಕ್ಷಣದಲ್ಲಿ ವಿದ್ಯಾರ್ಥಿಗಳು ಕೆಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಈಗಾಗಲೇ ರಾಜ್ಯದಲ್ಲಿ ಎನ್‌ಇಪಿ ಮೊದಲ ಬ್ಯಾಚ್‌ನ ವಿದ್ಯಾರ್ಥಿಗಳು ಮುಂದಿನ ಹಂತಕ್ಕೆ ತಲುಪಿದ್ದಾರೆ. ಆದರೂ ಸಹ ಮೊದಲ ವರ್ಷದ ಫಲಿತಾಂಶ ಬಿಡುಗಡೆಯಾಗಿಲ್ಲ ಮತ್ತು ವಿದ್ಯಾರ್ಥಿವೇತನ ವಿತರಣೆ ಆಗದಿರುವುದು ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿಸಿದೆ. ವಿದ್ಯಾರ್ಥಿಗಳು ತಮ್ಮ ಉನ್ನತ ಶಿಕ್ಷಣದ ಪೂರೈಕೆಗಾಗಿ ವಿದ್ಯಾರ್ಥಿ ವೇತನದ ಮೇಲೆ ಅವಲಂಬಿತರಾಗಿರುತ್ತಾರೆ. ವಿದ್ಯಾರ್ಥಿವೇತನ ಸಿಗದಿದ್ದರೆ, ಅವರಲ್ಲಿ ಬಹುಪಾಲು ಜನ ಶಿಕ್ಷಣವನ್ನು ಪೂರೈಸುವುದೆ ಕಷ್ಟಕರವಾಗುತ್ತದೆ. ರಾಜ್ಯದಲ್ಲಿ ಪದವಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಹಾಸ್ಟೆಲ್ ಇಲ್ಲ. ರಾಜ್ಯದಲ್ಲಿ ಪದವಿ ವಿದ್ಯಾರ್ಥಿಗಳಿಗೆ ಸಂಖ್ಯೆಗೆ ಅನುಗುಣವಾಗಿ ಹಾಸ್ಟೆಲ್ ಸಂಖ್ಯೆಗಳನ್ನು ಹೆಚ್ಚಿಸಬೇಕು ಎಂದು...
Local News

ಮೀಸಲಾತಿ ವರ್ಗೀಕರಣ ಆದೇಶ ವಿರೋಧಿಸಿ ಸುಪ್ರೀಂ ಕೋರ್ಟ್ ನಲ್ಲಿ ರಿಟ್ ಅರ್ಜಿ

ರಾಯಚೂರು : ಸುಪ್ರೀಂ ಕೋರ್ಟ್ ನ್ಯಾಯಾಧೀಶರಾದ ಅರುಣ ಮಿಶ್ರಾರವರ ನೇತೃತ್ವದ ಸಂವಿಧಾನ ಪೀಠವು ರಾಜ್ಯಗಳಿಗೆ ಪರಿಶಿಷ್ಟ ಜಾತಿಯವರಲ್ಲಿ ಮೀಸಲಾತಿಯ ವರ್ಗೀಕರಣವನ್ನು ಮಾಡಬಹುದು ಎಂದು ಮಾಡಿರುವ ಆದೇಶವನ್ನು ರದ್ದು ಮಾಡಬೇಕೆಂದು ರಿಟ್ ಅರ್ಜಿ ಸಲ್ಲಿಸಲಾಗುವುದೆಂದು ಡಾ.ಅಂಬೇಡ್ಕರ್ ಪೀಪಲ್ಸ್ ಪಾರ್ಟಿ ರಾಜ್ಯಾಧ್ಯಕ್ಷ ಮಹೇಂದ್ರಕುಮಾರ ಮಿತ್ರ ಹೇಳಿದರು. ನ್ಯಾಯಮೂರ್ತಿ ಅರುಣ್ ಮಿಶ್ರಾ ರವರ ನೇತೃತ್ವದ ಸಂವಿಧಾನ ಪೀಠದ ಆದೇಶದ ಪ್ರಕಾರ, ಸಂವಿಧಾನ ಅನುಚ್ಛೇದ(16(4)ರ ಪ್ರಕಾರ ಹಿಂದುಳಿದ ವರ್ಗಗಳ ವ್ಯಾಪ್ತಿಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ಜಾತಿಗಳು ಬರುತ್ತವೆ. ರಾಜ್ಯ ಸರ್ಕಾರವು ಶೈಕ್ಷಣಿಕ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡುವ ಅಧಿಕಾರ ಹೊಂದಿದೆ. ಮತ್ತು ಮೀಸಲಾತಿಯನ್ನು ಸರಿ ಸಮಾನವಾಗಿ ಹಂಚಿಕೆ ಮಾಡಬಹುದು ಈ ಕಾರಣದಿಂದ ನಾವು ಈ.ವಿ.ಚಿನ್ನಯ್ಯ ರವರ ಆದೇಶವನ್ನು ಒಪ್ಪಲು ಬರುವುದಿಲ್ಲ. ಕಾರಣ ನಾವು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ಈ ವಿಷಯವನ್ನು 7 ಅಥವಾ ಅದಕ್ಕೂ ಮೇಲ್ಪಟ್ಟ ನ್ಯಾಯಾಧೀಶರನ್ನೊಳಗೊಂಡ...
Local News

ಬಂಜೆತನ ನಿವಾರಣೆ ಕುರಿತು ಸಮಾವೇಶ

ರಾಯಚೂರು : ಬೆಟ್ಟದೂರು ಆಸ್ಪತ್ರೆಯಲ್ಲಿ ಎರಡು ದಿನಗಳ ಕಾಲ ಬಂಜೆತನ ನಿವಾರಣೆ ವಿಚಾರವಾಗಿ ಚರ್ಚಿಸಲು ಸಮಾವೇಶವನ್ನು ಆಯೋಜನೆ ಮಾಡಲಾಗಿದೆ ಎಂದು ಬೆಟ್ಟದೂರು ಆಸ್ಪತ್ರೆಯ ವೈದ್ಯರಾದ ಡಾಕಯ. ಜೈಪ್ರಕಾಶ್ ಪಾಟೀಲ್ ಅವರು ಹೇಳಿದರು. ಎರಡು ದಿನಗಳ ಸಮಾವೇಶದಲ್ಲಿ ವಿಶೇಷವಾಗಿ ಬೆಟ್ಟದೂರು ಆಸ್ಪತ್ರೆಯಲ್ಲಿ ಮೊದಲ ದಿನ ತ್ರೀಡಿ ಲ್ಯಾಪ್ರೋಸ್ಕೋಪಿ ಶಸ್ತ್ರ ಚಿಕಿತ್ಸೆಗಳನ್ನು ಆಯೋಜನೆ ಮಾಡಲಾಗಿದ್ದು, ಇದರ ವಿಶೇಷತೆ ಏನು ಎಂದರೆ ಈ ಒಂದು ಸಮಾವೇಶದಲ್ಲಿ ಭಾಗವಹಿಸುವ ಎಲ್ಲಾ ವೈದ್ಯರುಗಳು ಕೂಡ ಈ ಒಂದು ಶಸ್ತ್ರ ಚಿಕಿತ್ಸೆಯ ನೇರ ಪ್ರಸಾರವನ್ನು 3ಡಿಯಲ್ಲಿಯೇ ನೋಡುವಂತಹ ಒಂದು ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಹೇಳಿದರು. ಈ ಒಂದು ಸಮಾವೇಶ ರಾಯಚೂರಿನಲ್ಲಿ ಮೊಟ್ಟಮೊದಲ ಬಾರಿಗೆ ಆಗುತ್ತಿದ್ದು, ನೇರ ತ್ರೀಡಿ ವೀಕ್ಷಣೆ ವ್ಯವಸ್ಥೆ ಕೂಡ ಈ ಭಾಗದಲ್ಲಿ ಮೊದಲ ಬಾರಿಗೆ ಆಗುತ್ತಿದೆ ಎಂದು ಹೇಳಿದರು. ಈ ಒಂದು ಸಮಾವೇಶದ ಎರಡನೇ ದಿನ ಬಂಜೆತನ ನಿವಾರಣೆಗಾಗಿ ಯಾವ ರೀತಿಯಾದಂತಹ ಒಂದು...
Local News

ಹಾರುಬೋದಿಯಿಂದ ರೈತರ ಬೆಳೆ ನಷ್ಟ

ರಾಯಚೂರು : ರೈಸ್ ಮಿಲ್ ದಿಂದ ಹೊರ ಸೂಸುವ ಹಾದುಬೂದಿಯಿಂದ ಅಕ್ಕ ಪಕ್ಕದ ಜಮೀನುಗಳಲ್ಲಿ ಬೆಳೆ ನಷ್ಟವಾಗುತ್ತಿದ್ದು ರೈತರಿಗೆ ಪರಿಹಾರ ಒದಗಿಸಲು ಮತ್ತು ಸಂಬಂಧಿಸಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು. ನಗರದ ಇಂಡಸ್ಟ್ರಿಯಲ್ ಏರಿಯಾ ಪ್ಲಾಟ್ ನಂಬರ್ 212 ಪಿ6, 212ಪಿ7, 211/5 ರಲ್ಲಿರುವ ಮಂಚಿಕೊಂಡ ರೈಸ್ಸ್ ಮಿಲ್ ಇಂದ ದಿನನಿತ್ಯ ಭಾರಿ ಪ್ರಮಾಣದಲ್ಲಿ ಹಾರು ಬೂದಿ ಹೊರ ಸೂಸುತ್ತಿದ್ದು ಇದರಿಂದ ಗಾಳಿಗೆ ಅಕ್ಕಪಕ್ಕದ ರೈತರ ಜಮೀನುಗಳಿಗೆ ನುಗ್ಗಿ ಬೆಳೆ ನಷ್ಟವಾಗುತ್ತಿದೆ. ಇದರಿಂದ ರೈತರು ತೊಂದರೆಯನ್ನು ಅನುಭವಿಸ ಬೇಕಾಗುತ್ತಿದೆ. ರೈತರು ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿ, ತಮ್ಮ ಜಮೀನುಗಳಲ್ಲಿ ಸಾಲ ಮಾಡಿಕೊಂಡು ಬೆಳೆಯನ್ನು ಬೆಳೆದಿದ್ದಾರೆ. ಹಾರುವುದಿಂದ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಾಲ್ ಗೆ 10 ಸಾವಿರ ದರ ನಿಗದಿ ಇದ್ದು,...
Local News

ಕಡಿಮೆ ಖರ್ಚಿನಲ್ಲಿ ಎರೆಹುಳು ಹಾಗೂ ದನದ ಗೊಬ್ಬರ ಬಳಸಿದರ

ದೇವದುರ್ಗ : ಬೆಳೆಗಳಿಗೆ ರಾಸಾಯನಿಕ ಗೊಬ್ಬರ ಹಾಕುವುರಿಂದ ನಾನಾ ರೋಗ ಆವರಿಸುವ ಜತೆಗೆ ಆರ್ಥಿಕ ಹೊರೆ ಬೀಳಲಿದೆ. ರೋಗ ರಹಿತ ಹಾಗೂ ಕಡಿಮೆ ಖರ್ಚಿನಲ್ಲಿ ಎರೆಹುಳು ಹಾಗೂ ದನದ ಗೊಬ್ಬರ ಬಳಸಿದರ ಉತ್ತಮ ಇಳುವರಿ ಬರಲಿದೆ ಎಂದು ರಾಯಚೂರು ಕೃಷಿ ವಿಜ್ಞಾನಗಳ ವಿವಿ ನಿವೃತ್ತ ಡೀನ್ ಡಾ.ಎಂ.ಭೀಮಣ್ಣ ತಿಳಿದರು. ಪಟ್ಟಣದ ಬಿಎಚ್ ಕಲ್ಯಾಣ ಮಂಟಪದಲ್ಲಿ ತಾಲೂಕು ಕೃಷಿಕ ಸಮಾಜ, ಕೃಷಿ ಇಲಾಖೆ, ರಾಯಚರು ಕೃಷಿ ವಿಜ್ಞಾನಗಳ ವಿವಿ, ಕೃಷಿ ತಂತ್ರಜ್ಞಾನರ ಸಂಸ್ಥೆಯಿಂದ ಆಯೋಜಿಸಿದ್ದ ವಿಶ್ವ ಮಣ್ಣು ಆರೋಗ್ಯ ದಿನಾಚರಣೆ, ಕಿಸಾನ್‌ಗೋಷ್ಠಿ ಹಾಗೂ ಮೆಣಸಿನಕಾಯಿ ಬೇಸಾಯ ತರಬೇತಿ ಕಾರ್ಯಕ್ರಮದಲ್ಲಿ ಸೋಮವಾರ ಉಪನ್ಯಾಸ ನೀಡಿದರು. ರೈತರು ಮಿಶ್ರಬೆಳೆ ಪದ್ಧತಿ ಅನುಸರಿಸಬೇಕು. ಅದರ ಜತೆ ಕುರಿಸಾಕಣೆ, ಕೋಳಿ ಹಾಗೂ ಜಾನುವಾರುಗಳ ಸಾಕಣೆ ಮಾಡಬೇಕು. ಇವುಗಳಿಂದ ಪರ್ಯಾಯ ಆದಾಯದ ಜತೆ ಗೊಬ್ಬರ ಸಿಗಲಿದೆ ಎಂದರು. ಕೀಟಶಾಸ್ತ್ರಜ್ಞ ಡಾ.ಅರುಣ್‌ಕುಮಾರ ಹೊಸಮನಿ ಮಾತನಾಡಿ, ಮೆಣಸಿನಕಾಯಿ ಬೆಳೆಯಲ್ಲಿ...
Local News

ಗಾಂಜಾ ಬೆಳೆದ ರೈತರ ಮೇಲೆ ನಿಗಾ ಇಡಿ

ರಾಯಚೂರು : ಜಿಲ್ಲೆಯಲ್ಲಿ ರೈತರ ಹೊಲಗಳಲ್ಲಿ ಗಾಂಜಾ ಬೆಳೆಯುವ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬಂದ ಹಿನ್ನೆಲೆ ಇಂದು ಮೂರು ಇಲಾಖೆಗಳ ಜಂಟಿ ಸಭೆಯನ್ನ ಜಿಲ್ಲಾಧಿಕಾರಿ ಎಲ್ ಚಂದ್ರಶೇಖರ್ ನಾಯಕ್ ಮಾಡಿ ಸಮನ್ವಯತೆಯಿಂದ ಗಾಂಜಾ ಬೆಳೆ ನಿಯಂತ್ರಿಸಲು ಸೂಚನೆ ನೀಡಿದರು. ರಾಯಚೂರು ಜಿಲ್ಲೆಯಲ್ಲಿ ರೈತರು ತಮ್ಮ ಬೆಳೆಗಳ ಮಧ್ಯದಲ್ಲಿ ಗಾಂಜಾ ಬೆಳೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಹಲವು ಕಡೆ ದಾಳಿ ಮಾಡಿ ಗಾಂಜಾ ವಶಪಡಿಸಿಕೊಂಡಿದೆ. ಈ ಹಿನ್ನಲೆಯಲ್ಲಿ ಈ ಒಂದು ಗಾಂಜಾ ಬೆಳೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಇಂದು ಜಿಲ್ಲಾಧಿಕಾರಿಗಳು ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಕೃಷಿ ಇಲಾಖೆ ಮತ್ತು ಅಬಕಾರಿ ಇಲಾಖೆಯ ಸಭೆಯನ್ನು ಕರೆದು, ಈ ಒಂದು ಸಭೆಯಲ್ಲಿ ಮೂರು ಇಲಾಖೆಗಳು ಸಮನ್ವತೆಯಿಂದ ಕೆಲಸ ಮಾಡಬೇಕು ಎಂದು ಸೂಚಿಸಿದರು. ಕೃಷಿ ಇಲಾಖೆ ಬೆಳೆಗಳ ಸಮೀಕ್ಷೆ ಮಾಡುವಂತಹ ಸಂದರ್ಭದಲ್ಲಿ ರೈತರ ಹೊಲಗಳಲ್ಲಿ ಯಾವ ಬೆಳೆ ಹಾಲಾಗಿದೆ, ಎಂಬ ಬಗ್ಗೆ...
Local News

ಪ್ರತಿಯೊಬ್ಬ ವಿದ್ಯಾರ್ಥಿಯು ಮತದಾನದ ಮಹತ್ವ ತಿಳಿಯಬೇಕು

ರಾಯಚೂರು : ದೇಶದಲ್ಲಿ ಮತದಾನಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಯು ಮತದಾನದ ಮಹತ್ವವನ್ನು ತಿಳಿದುಕೊಂಡು ಮತದಾನದ ಕುರಿತು ಪ್ರತಿಯೊಬ್ಬರಲ್ಲಿ ಅರಿವು ಮೂಡಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಅವರು ಹೇಳಿದರು. 18ವರ್ಷ ಮೇಲ್ಪಟ್ಟ ಪ್ರತಿಯೋಬ್ಬರು ಮತದಾನ ಮಾಡುವ ಹಕ್ಕನ್ನು ಹೊಂದಿರುತ್ತಾರೆ. ಮತದಾರರ ಪಟ್ಟಿಯಲ್ಲಿ ಹೆಸರನ್ನು ನೊಂದಾಯಿಸಿಕೊಳ್ಳಲು ಅರ್ಹರಾಗಿರುತ್ತಾರೆ. ಈ ಭಾರಿ ವರ್ಷಕ್ಕೆ ನಾಲ್ಕು ಬಾರಿ ಮತದಾರರ ಪಟ್ಟಿಗೆ ಹೆಸರನ್ನು ನೊಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಮತದಾನದ ಕುರಿತು ತಮ್ಮ ಸುತ್ತಮುತ್ತಲಿನ ಜನರಿಗೆ ಅರಿವು ಮೂಡಿಸಬೇಕಾಗಿದೆ. ಪ್ರಸ್ತುತ ದಿನಮಾನಗಳಲ್ಲಿ ನಗರ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರ ಪಟ್ಟಿಗೆ ಹೆಸರನ್ನು ನೊಂದಾಯಿಸಿಕೊಳ್ಳು ಮುಂದೆ ಬರುತ್ತಿದ್ದಾರೆ. ಆದ್ದರಿಂದ ಮತದಾರರ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿರುವ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಸಕ್ರೀಯವಾಗಿ ಭಾಗವಹಿಸಿ, ಮತದಾನದ ಮಹತ್ವ ಹಾಗೂ ಸಂವಿಧಾನದ ಆಶಗಳನ್ನು ತಿಳಿದುಕೊಂಡು. ಸ್ಫರ್ಧಾತ್ಮಕ...
Local News

ರೈತರು ಸಾಲಕಟ್ಟೆದಿದ್ದರೆ ಕಾನೂನು ಕ್ರಮ

ರಾಯಚೂರು : ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ ನಲ್ಲಿ 1 ಸಾವಿರಕ್ಕೂ ಹೆಚ್ಚು ರೈತರಿಗೆ ಸಾಲವನ್ನು ನೀಡಲಾಗಿದೆ. ರೈತರು ನಿಗದಿತ ಸಮಯದಲ್ಲಿ ಸಾಲ ಮರು ಪಾವತಿಸಬೇಕು ಇಲ್ಲವಾದಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಸ್.ಎಲ್.ಡಿ. ಬ್ಯಾಂಕ್‌ನ ಜಿಲ್ಲಾ ವ್ಯವಸ್ಥಾಪಕ ವಿಜಯಕುಮಾರ ಹೇಳಿದರು. ರೈತರಿಗೆ ವಾರ್ಷಿಕ ಶೇ.3 ರ ಅತಿ ಕಡಿಮೆ ಬಡ್ಡಿದರದಲ್ಲಿ ಷರತ್ತುಗಳಿಗೆ ಒಪ್ಪಿ ಸಾಲ ಪಡೆದ ರೈತರು ನಿಗದಿತ ಕಾಲಕ್ಕೆ ಮರುಪಾವತಿ ಮಾಡದೇ ಹೋದರೆ ಅದು 24 ಪ್ರತಿಶತವಾಗಿ ಇದರಿಂದ ರೈತರು ಅನಾವಶ್ಯವಾಗಿ ಆರ್ಥಿಕ ತೊಂದರೆಗಳಿಗೆ ಸಿಲುಕಿಕೊಳ್ಳುವುದಲ್ಲದೆ ಇತರ ರೈತರಿಗೂ ಶೇ.3 ರ ಬಡ್ಡಿದರದಲ್ಲಿ ಸಾಲ ಸಿಗದಂತೆ ಮಾಡುತ್ತಾರೆ. ರಾಯಚೂರು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ನಲ್ಲಿ ಮಾ.31.2022 ರ ವೇಳೆಗೆ 1179 ಸದಸ್ಯರಿಗೆ ಸಾಲ ವಿತರಿಸಿದ್ದು, 259 ಲಕ್ಷ ರೂ. ಬಾಕಿ ಬರುವುದಿದೆ ಎಂದು ಸಾಲ ವಸೂಲಾತಿ ಶೇ.10.53 ಆಗಿದೆ...
Local News

ಕೆರೆಯಲ್ಲಿ ನವಜಾತ ಶಿಶುವಿನ ಶವ ಪತ್ತೆ

ಲಿಂಗಸಗೂರು : ನಗರದ ಕರಡಕಲ್ ಕೆರೆಯಲ್ಲಿ ನವಜಾತ ಶಿಶುವಿನ ಶವ ಪತ್ತೆಯಾಗಿದ್ದು, ಹೆಣ್ಣು ಎಂಬ ಕಾರಣಕ್ಕೆ ನೀರಿಗೆ ಎಸೆದಿರಬಹುದು ಎಂದು ಸಾರ್ವಜನಿಕ ವಲಯದಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ. ಪುರಸಭೆ ವ್ಯಾಪ್ತಿಯ ಕರಡಕಲ್ ಕೆರೆಯಲ್ಲಿ ನವಜಾತ ಶಿಶುವೊಂದು ಶವವಾಗಿ ಪತ್ತೆಯಾಗಿದ್ದು ಸಾರ್ವಜನಿಕರು ತನಿಖೆಗೆ ಒತ್ತಾಯಿಸಿದ ಘಟನೆ ಜರುಗಿದೆ. ಪುರಸಭೆ ವ್ಯಾಪ್ತಿಯ ಕರಡಕಲ್ ಗ್ರಾಮದ ಹೊರವಲಯದ ಅತ್ತೆ-ಸೊಸೆ ಗುಡ್ಡದ ಹತ್ತಿರವಿರುವ ಬ್ರಿಜ್ ಹತ್ತಿರದಲ್ಲಿ ನವಜಾತ ಹೆಣ್ಣುಶಿಶುವೊಂದು ಶವವಾಗಿ ಪತ್ತೆಯಾಗಿದೆ. ಶಿಶುನೀರಿಗೆ ಬಿದ್ದು ಎರಡು ಮೂರು ದಿನಗಳಾಗಿರಬಹುದು ಎಂದು ಹೇಳಲಾಗುತ್ತಿದ್ದು ಮಗುವಿನ ದೇಹದ ಭಾಗವನ್ನು ಜಲಚರಗಳು ತಿಂದಿವೆ. ನವಜಾತ ಹೆಣ್ಣು ಶಿಶುವಾಗಿದೆ. ಆಸ್ಪತ್ರೆಯಲ್ಲಿ ಜನಿಸಿದ ಈ ಶಿಶುವನ್ನು ಹೆಣ್ಣು ಎಂಬ ಕಾರಣಕ್ಕೆ ನೀರಿಗೆ ಎಸೆದು ಹೋಗಿದ್ದಾರೆಯೋ ಅಥವಾ ಬೇರೆ ಕಾರಣವಿದೆಯೋ ಎಂಬುದು ಪೊಲೀಸ್ ತನಿಖೆಯಿಂದಲೇ ತಿಳಿಯಬೇಕಿದೆ....
Local News

ಸದಾಶಿವ ಆಯೋಗ ವರದಿ ಆಗ್ರಹಿಸಿ ಡಿ.11 ಬೃಹತ್ ಸಮಾವೇಶ

ರಾಯಚೂರು : ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗ ವರದಿಯನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕೆಂದು ಆಗ್ರಹಿಸಿ ಡಿಸೆಂಬರ್ 11 ರಂದು ಬೆಂಗಳೂರಿನಲ್ಲಿ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಹೋರಾಟ ಸಮಿತಿ ಮುಖಂಡ ಎಂ.ವಿರುಪಾಕ್ಷಿ ಹೇಳಿದರು. ಎಸ್.ಸಿ/ಎಸ್.ಟಿ ಮೀಸಲಾತಿ ಹೆಚ್ಚಳ ವಿಷಯದಲ್ಲಿ ರಾಜ್ಯ ಬಿಜೆಪಿ ಸರಕಾರ ಮೂಗಿಗೆ ತುಪ್ಪ ಸವರಿದಿದೆ.ಒಳಮೀಸಲಾತಿ ವಿಚಾರವಾಗಿ ಮಾದಿಗ ದಂಡೋರ ಹಾಗೂ ಮೀಸಲಾತಿ ಹೋರಾಟ ಸಮಿತಿ ಸೇರಿದಂತೆ ಹಲವು ಮಾದಿಗ ಸಂಘಟನೆಗಳು ಹಲವಾರು ದಶಕಗಳಿಂದ ಹೋರಾಟ ಮಾಡುತ್ತಲೇ ಬಂದಿದೆ. ಈಗಾಗಲೇ ಮೀಸಲಾತಿಗೆ ಸಂಬಂಧಪಟ್ಟಂತೆ ಸರಕಾರಗಳು ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದು, ಈಗ ನಾವು ಅಂತಿಮ ಹಂತದ ಹೋರಾಟವನ್ನು ಹಮ್ಮಿಕೊಳ್ಳಲಾಗುತ್ತಿದ್ದು ಬೆಂಗಳೂರಿನ ಡಿ. 11 ರಂದು 4 ರಿಂದ 5 ಲಕ್ಷ ಜನ ಸೇರಿ ದೊಡ್ಡ ಸಮಾವೇಶ ಮಾಡುವ ಮೂಲಕ ಸರಕಾರದ ಗಮನ ಸೆಳೆಯಲಿದ್ದೇವೆ. ಡಿ. 11 ರಿಂದ ಡಿ.31 ರವರೆಗೆ...
1 45 46 47 48 49 51
Page 47 of 51