ಹೈದರಾಬಾದ್ ಬೆಳಗಾವಿ ರಾಷ್ಟ್ರೀಯ ಹೆದ್ದಾರಿ ಸರ್ವೆಕಾಮಗಾರಿ ಆರಂಭ
![]() |
![]() |
![]() |
![]() |
![]() |
ಸಿರವಾರ : ಹುನಗುಂದ ವಯಾ ಲಿಂಗಸ್ಗೂರು, ಸಿರವಾರ ರಾಯಚೂರು ರಸ್ತೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರವು 12500 ಕೊ. ಅನುದಾನ ಮಂಜೂರು ಆಗಿದ್ದೂ ಶೀಘ್ರ ಕಾಮಗಾರಿ ಪ್ರಾರಂಭವಾಗುತ್ತದೆ ಎಂದು ರಾಯಚೂರು ಸಂಸದರಾದ ರಾಜಾ ಅಮರೇಶ್ವರ ನಾಯಕ ಹೇಳಿದರು.
ತಾಲೂಕಿನ ಹೀರಾ ಗ್ರಾಮದಲ್ಲಿ ಆದರ್ಶ ಗ್ರಾಮ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸಿದ ಅವರನ್ನು “ಹೈದ್ರಬಾದ್- ಬೆಳಗಾವಿ (ರಾಯಚೂರು-ಹುನಗುಂದ) ರಸ್ತೆ ನಿರ್ಮಾಣ ಈಗಾಗಲೇ ಸರ್ವೆ ಕಾರ್ಯ ಮುಗಿದಿದೆ. ರೈತರ ಜಮೀನುಗಳಲ್ಲಿ ಬೆಳೆ ಇರುವ ಕಾರಣಕಾಮಗಾರಿ ಪ್ರಾರಂಭಕ್ಕೆ ವಿಳಂಭವಾಗಿದೆ.
ಹುನಗುಂದದಿಂದ ರಾಯಚೂರು ಚಿಕ್ಕಸೂಗುರು ಹತ್ತಿರ ಈ ಹೈವೆ ಬರುತ್ತದೆ. ಮುದುಗಲ್, ಲಿಂಗಸ್ಗೂರು, ಕವಿತಾಳ ಮತ್ತು ಸಿರವಾರ ಪಟ್ಟಣದ ಹೊರವಲಯದಲ್ಲಿ ಈರಸ್ತೆಯು ಹಾದುಹೊಗುತ್ತದೆ. ಪಟ್ಟಣದಲ್ಲಿ ಈ ರಸ್ತೆ ಬರುವುದಿಲ್ಲ ಸಾರ್ವಜನಿಕರು ಆತಂಕ ಪಡುವ ಅವಶ್ಯಕತೆಯಿಲ್ಲ.
ಈ ರಸ್ತೆ ನಿರ್ಮಾಣವಾದರೆ ಹೈದ್ರಾಬಾದ್- ಬೆಳಗಾವಿ, ಗೋವಾಕ್ಕೆ ಸುಲಭವಾಗಿ ಕಡಿಮೆ ಅವಧಿಯಲ್ಲಿ ತಲುಪಬಹುದು ಹಾಗೂ ಸರಕು ಸಾಗಾಣಿಕೆಗೆ ಅನುಕೂಲವಾಗುತ್ತದೆ. ಅದೇ ರೀತಿ ಅಕ್ಕಲಕೊಟೆ-ಯಾದಗಿರಿ- ರಾಯಚೂರು- ಕರ್ನೂಲ್ ರಸ್ತೆಯ ನಿರ್ಮಾಣ ಕಾರ್ಯವು ಸಹ ಪ್ರಗತಿಯಲ್ಲಿದೆ. ಈ ಎರಡು ರಸ್ತೆ ನಿರ್ಮಾಣವಾದರೆ ರಾಯಚೂರು ನಗರದಲ್ಲಿ ವಾಹನ ಸಂಚಾರ ಕಡುಮೆಯಾಗುತ್ತದೆ.
ರಸ್ತೆ ನಿರ್ಮಾಣಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ, ರಾಷ್ಟ್ರೀಯ ಹೆದ್ದಾರಿ ರಸ್ತೆ ಕಾಮಗಾರಿ ಸಚಿವರಾದ ನಿತೀನ್ ಗಡ್ಕರಿಯವರನ್ಮು ಏಷ್ಟು ಹೊಗಳಿದರು ಸಾಲದು. ಜಿಲ್ಲೆಯಲ್ಲಿ ಹಾದು ಹೋಗಿರುವ ಕೃಷ್ಣ ನದಿಯ ನೀರು ಬಳಕೆಗೆ ಸಹ ಅನುದಾನ ನೀಡಲಾಗಿದೆ ಎಂದರು.
![]() |
![]() |
![]() |
![]() |
![]() |