ರಾಯಚೂರು: ಇತ್ತೀಚೆಗೆ ಲವ್ ಜಿಹಾದ್ ಪ್ರಕರಣಗಳು ಒಂದರ ಮೇಲೊಂದರಂತೆ ಬೆಳಕಿಗೆ ಬರುತ್ತಿವೆ. ಇದೀಗ ಮತ್ತೊಂದು ಲವ್ ಜಿಹಾದ್ ಪ್ರಕರಣ ಬೆಳಕಿಗೆ ಬಂದಿದ್ದು, ನಿಶ್ಚಿತಾರ್ಥವಾಗಿ ಮೂರು ತಿಂಗಳಲ್ಲಿ ಮದುವೆ ಇದ್ದ ಯುವತಿಯನ್ನು ಅನ್ಯಕೋಮಿನ ವ್ಯಕ್ತಿ ವಿರುದ್ಧ ಲವ್ ಜಿಹಾದ್ ಆರೋಪ ಮಾಡಿದ ಪೋಷಕರು.
ಹೌದು ರಾಯಚೂರಿನಲ್ಲಿ ಕೆಲವೇ ದಿನಗಳ ಹಿಂದೆ ಹಿಂದು ಶಿಕ್ಷಕಿಯೊಬ್ಬಳು ತಮ್ಮ 7 ವರ್ಷದ ಮಗುವನ್ನೂ ಬಿಟ್ಟು ಸಲೀಂ ಮುಸ್ಲಿಂ ವ್ಯಕ್ತಿಯೊಬ್ಬನೊಂದಿಗೆ ಪರಾರಿಯಾಗಿದ್ದಳು. ಇದು ಲವ್ ಜಿಹಾದ್ ಎಂಬ ಆರೋಪವನ್ನು ಆ ಶಿಕ್ಷಕಿಯ ಮನೆಯವರೇ ಮಾಡಿದ್ದರು. ಅದರ ಬೆನ್ನಲ್ಲೇ ರಾಯಚೂರಿನಿಂದ ಮತ್ತೊಂದು ಲವ್ ಜಿಹಾದ್ ಪ್ರಕರಣ ಬೆಳಕಿಗೆ ಬಂದಿದೆ. ಹಿಂದು ಯುವತಿ ಭಾರತಿ ಎಂಬಾಕೆಯನ್ನು ಮುಸ್ಲಿಂ ಯುವಕ ರೆಹಾನ್ ಎಂಬಾತ ಲವ್ ಜಿಹಾದ್ ಬಲೆಗೆ ಬೀಳಿಸಿದ್ದಾನೆ ಎಂಬ ಆರೋಪವನ್ನು ಭಾರತಿ ಪಾಲಕರು ಮಾಡಿದ್ದಾರೆ.
ಈ ರೆಹಾನ್ ನಗರದಲ್ಲಿ ಪ್ಲವರ್ ಶೋ ವ್ಯಾಪಾರಿಯಾಗಿದ್ದ. ಆತ ಕೆಲಸ ಮಾಡುವ ಸ್ಥಳಕ್ಕೆ ಕೆಲಸಕ್ಕೆ ಬರುತ್ತಿದ್ದ ಯುವತಿ ಭಾರತಿಯನ್ನು ಪುಸಲಾಯಿಸಿ ಪ್ರೀತಿ ಬಲೆಯಲ್ಲಿ ಕೆಡವಿದ್ದ. ಭಾರತಿಗೆ ಅದಾಗಲೇ ಹೂವಿನಹಡಗಲಿ ಹುಡುಗನೊಬ್ಬನೊಂದಿಗೆ ನಿಶ್ಚಿತಾರ್ಥವಾಗಿತ್ತು. ಆದರೂ ಈತ ಆಕೆಯ ತಲೆಕೆಡಿಸಿ, ರಾಯಚೂರಿನಿಂದ ಕರೆದುಕೊಂಡು ಹೋಗಿದ್ದಾನೆ ಎಂದು ಭಾರತಿ ಪೋಷಕರು ನಗರದ ಸದಾರ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
![]() |
![]() |
![]() |
![]() |
![]() |
[ays_poll id=3]