This is the title of the web page
This is the title of the web page
Local News

ಕೃಷಿ ಕಾಯ್ದೆಗಳನ್ನು ಹಿಂಪಡೆಯಲು ಆಗ್ರಹಿಸಿ ಡಿ.5 ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ


ರಾಯಚೂರು : ರಾಜ್ಯ ಸರ್ಕಾರ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಡಿಸೆಂಬರ್ 5 ರಂದು ಜಿಲ್ಲಾಧಿಕಾರಿ ಕಾರ್ಯಾಲಯಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ನರಸಿಂಹ ನಾಯಕ ಹೇಳಿದರು.

ಕೇಂದ್ರ ಸರಕಾರ ವಾಪಸ್ಸು ಪಡೆದ ರೀತಿಯಲ್ಲಿ ರಾಜ್ಯ ಸರಕಾರವು ಕೃಷಿ ಕಾಯ್ದೆಗಳನ್ನು ಕೂಡಲೇ ವಾಪಸ್ಸುಪಡೆಯಬೇಕು.ರೈತರ ಬೆಳೆದಂತ ಎಲ್ಲಾ ಬೆಳೆಗೆ ಕಾನೂನಾತ್ಮಕ ಬೆಳೆ ನಿಧಿಪಡಿಸಬೇಕು. ರೈತರ ಪಂಪ್‌ಸೇಟ್‌ಗಳಿಗೆ ವಿದ್ಯುತ್ ಮೀಟರ್ ಅಳವಡಿಸುವುದನ್ನು ರದ್ದುಪಡಿಸಬೇಕು. ಆಲಮಟ್ಟಿ ಡ್ಯಾಂ ಜಲಾಶಯ 512 ಮೀಟರ್ ನಿಂದ 526 ಮೀಟರ್ ನಿಂದ ಎತ್ತರಿಸಲು ಹೋರಾಟ ಮಾಡಬೇಕು ಎಂದು ಒತ್ತಾಯಿಸಿದರು.

ರಾಜ್ಯದ್ಯಾಂತ ತೀವ್ರ ಮಳೆಯಿಂದ ರೈತರು ಬೆಳೆದ ಬೆಳೆ ಹಾನಿಯಾಗಿದ್ದು,2018- 2022 ರ ವರೆಗೆ ನಮ್ಮ ಸಂಘಟನೆ ಕೇಂದ್ರ ಮಾದರಿಯಲ್ಲಿ ಹೆಕ್ಟರ್‌ಗೆ ರೂ.೩೫ ಸಾವಿರ ಧನ ಸಹಾಯ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಲಾಗಿತ್ತು ಆದರೆ ಸರಕಾರ ರೈತರಿಗೆ ಕೇವಲ ರೂ.13 ಸಾವಿರ – ಧನ ಸಹಾಯ ಪ್ರತಿ ಹೆಕ್ಟರ್‌ಗೆ ಬಿಡುಗಡೆ ಮಾಡಿದೆ ಕೂಡಲೇ ಹೆಚ್ಚಿನ ಪರಿಹಾರ ಬಿಡುಗಡೆ ಮಾಡಬೇಕು.ರೈತರ ಬೆಳೆ ಸಾಲಗಳನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.

ಜಿಲ್ಲೆಯಲ್ಲಿ ಅತಿವೃಷ್ಠಿ ಮಳೆಯಿಂದಾಗಿ ಹತ್ತಿ ಬೆಳೆ ಮತ್ತು ಭತ್ತದ ಬೆಳೆ ಇಳುವರಿ ಕುಂಟಿತಗೊಂಡು ಬೆಳೆ ನಾಶವಾಗಿದ್ದು ನಷ್ಟಪರಿಹಾರ ನೀಡಬೇಕು.ಕೃಷಿ ಹೊಂಡಗಳಿಗೆ ತಂತಿ ಬೇಲಿ ಹಾಕಿಸಿ,ಜೀವ ಹಾನಿಗಳನ್ನು ತಡೆಯಬೇಕು 10. ಬೆಳೆವಿಮೆ ಹಣ ತಕ್ಷಣ ಬಿಡುಗಡೆ ಮಾಡಬೇಕು. ರಾಯಚೂರು ಕೃಷಿ ಮಾರುಕಟ್ಟೆಯಲ್ಲಿ ಮಳೆಗಾಲದಲ್ಲಿ,ಮಳೆ ನೀರಿನಿಂದ ರೈತರ ಮಾಲು ಮಾರುಕಟ್ಟೆಯಲ್ಲಿ ನೀರುನಲ್ಲಿ ಕೊಚ್ಚಿಕೊಂಡು ಚರಂಡಿ ಪಾಲಾಗುವುದನ್ನು ತಡೆಯಬೇಕು ಎಂದು ಒತ್ತಾಯಿಸಿದರು.


[ays_poll id=3]