This is the title of the web page
This is the title of the web page
Local News

NPS ರದ್ದತಿಗಾಗಿ ಬೆಳಗಾವಿ ಅಧಿವೇಷನದಲ್ಲಿ ಸರಕಾರದ ಮೇಲೆ ಒತ್ತಡ ಹಾಕುವೆ


ರಾಯಚೂರು : ಎನ್ಪಿಎಸ್ ರದ್ದುಗೊಳಿಸಿ ಓ ಪಿ ಎಸ್ ಜಾರಿಗೆ ತರುವಂತೆ ಬೆಳಗಾವಿ ಅಧಿವೇಶನದಲ್ಲಿ ನೌಕರರ ಧ್ವನಿಯಾಗಿ ಸರಕಾರದ ಮೇಲೆ ಒತ್ತಡ ಹೇರುವಂತೆ ರಾಯಚೂರು ನಗರ ಶಾಸಕರಾದ ಡಾ. ಶಿವರಾಜ್ ಪಾಟೀಲ್ ಅವರಿಗೆ ಕರ್ನಾಟಕ ರಾಜ್ಯ ಸರಕಾರಿ ಎನ್‌ಪಿಎಸ್ ನೌಕರರ ಸಂಘ ಜಿಲ್ಲಾ ಘಟಕ ರಾಯಚೂರು ವತಿಯಿಂದ ಮನವಿ ಸಲ್ಲಿಸಿದರು.

ಎನ್ಪಿಎಸ್ ಯೋಜನೆ ಜಾರಿ ಯಾದಗಿನಿಂದ ನೌಕರರು ಸಾಕಷ್ಟು ಸಮಸ್ಯೆಗೆ ಈ ಹಿನ್ನೆಲೆಯಲ್ಲಿ ನೌಕರರ ಪರವಾಗಿ ಧ್ವನಿ ಎತ್ತಬೇಕು ಎಂದು ಮನವಿ ಸಲ್ಲಿಸಿದರು. ಈ ವೇಳೆ ಮನವಿ ಸ್ವೀಕರಿಸಿದ ನಗರ ಶಾಸಕರಾದ ಡಾ ಶಿವರಾಜ ಪಾಟೀಲ ರವರು ಈಗಾಗಲೇ ಈ ವಿಚಾರ ನನ್ನ ಗಮನದಲ್ಲಿದೆ, ಅಲ್ಲದೇ ಮುಪ್ಪಿನ ಭದ್ರತೆ ನೌಕರರರಲ್ಲಿ ಕಾಡುತ್ತಿದೆ ನಿಶ್ಚಿತ ಪಿಂಚಣಿ ನೌಕರರ ಬಾಳಿಗೆ ಆಶಾಕಿರಣ, ಸರಕಾರಿ ನೌಕರರಿಗೆ ಬರುವವರು ಪಿಂಚಣಿ ಇದೆ ಎಂಬ ಕಾರಣಕ್ಕೆ ಬರುತ್ತಾರೆ.

ಇತ್ತೀಚಿನ ಬದಲಾವಣೆಯಿಂದ ನೌಕರರು ಸಂಕಷ್ಟದಲ್ಲಿದ್ದಾರೆ. ಹಾಗಾಗಿ ಡಿಸೆಂಬರ್ 19 ರಿಂದ ನಡೆಯುವ ಬೆಳಗಾವಿ ಅಧಿವೇಶನದಲ್ಲಿ ತಮ್ಮೆಲ್ಲರ ಧ್ವನಿಯಾಗಿ ಸರಕಾರದ ಮೇಲೆ NPS ರದ್ದುಗೊಳಿಸುವಂತೆ ಒತ್ತಡ ಹಾಕುವ ಕೆಲಸ ಮಾಡುವೆ ಎಂದರು.


[ays_poll id=3]