This is the title of the web page
This is the title of the web page
Feature ArticleNational NewsVideo News

ಬಾಲರಾಮನ ಹಣೆಗೆ ಸೂರ್ಯ ತಿಲಕ..!


K2kannadanews.in

Ramlalla Suryaabhisheka : ಭಾರತ ದೇಶದ ಕೋಟಿ ಹಿಂದುಗಳ ಕನಸು (dream of crore hindus) ಈ ವರ್ಷ ನನಸಾಗಿದೆ. ಅಯೋಧ್ಯೆಯಲ್ಲಿ (ayodhya) ರಾಮಮಂದಿರ ನಿರ್ಮಾಣ ಪೂರ್ಣಗೊಂಡ ಬಳಿಕ ಪ್ರಧಾನಿ(PM) ನರೇಂದ್ರ ಮೋದಿಯವರ (Narabdra modi) ಕೈಯಿಂದ ಅದ್ಧೂರಿಯಾಗಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ (Prana prthishtapne) ನೆರವೇರಿತು.

ರಾಮ ನವಮಿಯ (Sriramnavami) ದಿನದಂದೇ ಅಯೋಧ್ಯೆಯಲ್ಲಿ ಪವಾಡವೊಂದು ನಡೆದಿದೆ. ಬಾಲರಾಮನ 51 ಇಂಚು ಎತ್ತರದ ಪ್ರತಿಮೆಗೆ ಸೂರ್ಯನ ಕಿರಣಗಳು ತಾಗಿವೆ. ಸೂರ್ಯನ ಕಿರಣಗಳು ನೇರವಾಗಿ ಬಾಲರಾಮನ ಹಣೆಯ ಮೇಲೆ ಬಿದ್ದವು. ಸುಮಾರು 6 ನಿಮಿಷಗಳ ಕಾಲ ಸೂರ್ಯನು ಬಾಲರಾಮನ ಹಣೆಗೆ ಮುತ್ತಿಟ್ಟನು. ಇದರ ಪ್ರತಿಬಿಂಬದಿಂದಾಗಿ ಬಾಲರಾಮನ ವಿಗ್ರಹ ನೀಲಿ ಬಣ್ಣಕ್ಕೆ ತಿರುಗಿತು ಮತ್ತು ಇನ್ನಷ್ಟು ಸುಂದರವಾಗಿ ಕಾಣಿಸಿಕೊಂಡಿತು. ಇದನ್ನು ಕಣ್ಣಾರೆ ಕಂಡ ಭಕ್ತರು ಮತ್ತಷ್ಟು ಭಕ್ತಿಭಾವ ಮೆರೆದಿದ್ದಾರೆ. ಶ್ರೀರಾಮ ನವಮಿಯ ದಿನದಂದು ಮಾತ್ರ ಈ ದೃಶ್ಯ ಕಾಣಸಿಗುತ್ತದೆ. ಇದನ್ನು ಸೂರ್ಯಾಭಿಷೇಕ ಅಥವಾ ಸೂರ್ಯ ತಿಲಕ ಎನ್ನುತ್ತಾರೆ. ಸೂರ್ಯನ ಕಿರಣಗಳು ರಾಮಲಲ್ಲಾ ಅವರ ಹಣೆಗೆ ತಾಗುವಂತೆ ಆಧುನಿಕ ತಂತ್ರಜ್ಞಾನ ಬಳಸಿ ಇದನ್ನು ನಿರ್ಮಿಸಲಾಗಿದೆ.

ಪ್ರತಿ ವರ್ಷ ಶ್ರೀರಾಮ ನವಮಿಯ ದಿನದಂದು ಮಾತ್ರ ಈ ಅದ್ಭುತ ದೃಶ್ಯವನ್ನು ಭಕ್ತರು ಕಣ್ತುಂಬಿಕೊಳ್ಳುತ್ತಾರೆ. ಮಧ್ಯಾಹ್ನ 12 ಗಂಟೆಗೆ ಸೂರ್ಯನು ಗರ್ಭಗುಡಿಯಲ್ಲಿ ರಾಮಲಲ್ಲಾನ ಹಣೆಯ ಮೇಲೆ ಸಿಂಧೂರವಾಗಿ ಪ್ರತಿಬಿಂಬಿಸಿದನು. ವಿಶೇಷ ತಂತ್ರಜ್ಞಾನವನ್ನು ಬಳಸಿಕೊಂಡು ಈ ರೀತಿಯ ರಚಿಸಲಾಗಿದೆ. ಸೂರ್ಯನ ಕಿರಣಗಳು ಭಗವಾನ್ ರಾಮನ ಜನ್ಮ ಸಮಯದಲ್ಲೇ ಹಣೆಯ ಮೇಲೆ ಬೆಳಗುವಂತೆ ಮಾಡಲು ವಿಜ್ಞಾನಿಗಳು ಶ್ರಮಿಸಿದ್ದಾರೆ.

ಅಂದಹಾಗೆ ಶ್ರೀರಾಮನು ಚೈತ್ರಮಾಸದ ಶುಕ್ಲಪಕ್ಷದ 9ನೇ ದಿನದಂದು ಮಧ್ಯಾಹ್ನ 12 ಗಂಟೆಗೆ ಜನಿಸಿದನೆಂದು ನಂಬಲಾಗಿದೆ. ಆ ಸಮಯದಲ್ಲಿ ಸೂರ್ಯ ಅತ್ಯಂತ ಶಕ್ತಿಶಾಲಿ ಎಂದು ನಂಬಲಾಗಿದೆ. ರಾಮಲಲ್ಲಾನ ಹಣೆಯ ಮೇಲೆ ಸೂರ್ಯ ತಿಲಕದ ಈ ಅದ್ಭುತ ದೃಶ್ಯವನ್ನು ಪ್ರಪಂಚದಾದ್ಯಂತ ನೇರ ಪ್ರಸಾರ ಮಾಡಲಾಯಿತು. ಈ ಸುಂದರ ದೃಶ್ಯವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಭಕ್ತರು ಇಂದು ಅಯೋಧ್ಯೆಗೆ ಆಗಮಿಸಿದ್ದರು.


[ays_poll id=3]