This is the title of the web page
This is the title of the web page
Crime NewsNational News

ಸಮೋಸಾದಲ್ಲಿ ಕಾಂಡೋಮ್, ಕಲ್ಲು, ಗುಟ್ಕಾ ತುಂಬಿಸಿ ಪೂರೈಕೆ : ಐವರ ಬಂಧನ..


K2kannadanews.in

Condom in Samosa : ಪಿಂಪ್ರಿ-ಚಿಂಚ್‌ವಾಡ್‌ ನಲ್ಲಿರುವ (Pimpri Chinchwad) ಪ್ರತಿಷ್ಠಿತ ಆಟೋಮೊಬೈಲ್ ಕಂಪನಿಯ ಕ್ಯಾಂಟೀನ್‌ನಲ್ಲಿ ನೀಡಲಾದ ಸಮೋಸಾಗಳಲ್ಲಿ (Samosa) ಕಾಂಡೋಮ್ (Condom), ಕಲ್ಲು (stone), ಗುಟ್ಕಾ(Gutka) ಬಂದಿರುವ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ.

ಮಹಾರಾಷ್ಟ್ರದ ಪುಣೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಆನಂದದಿಂದ ಸಮೋಸಾ  ತಿನ್ನಲೆಂದು ಬಾಯಿ ಹಾಕಿದಾಗ ಅದರೊಳಗೆ ಕಾಂಡೋಮ್‌ , ಗುಟ್ಕಾ  ಅಥವಾ ಕಲ್ಲು ಸಿಕ್ಕಿದರೆ ನಿಮ್ಮ ಪರಿಸ್ಥಿತಿ ಏನಾಗಬೇಡ! ಆದ್ರೆ ಈ ಒಂದು ಘಟನೆ ಕಂಪನಿಯ ಹೆಸರು ಕೇಳಿಸುವ ನಿಟ್ಟಿನಲ್ಲಿ ಮಾಡಿದ ಪಿತೂರಿಯಾಗಿತ್ತು ಎಂಬ ಮಾಹಿತಿಯು ಬಳಕೆಗೆ ಬಂದಿದೆ. ಘಟನೆಗೆ ಸಂಬಂದಿಸಿದಂತೆ ಐದು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದು ಸದ್ಯ ಈ ಸುದ್ದಿ ವೈರಲ್‌ (Viral News) ಆಗಿದೆ.

ಆರೋಪಿಗಳನ್ನು ರಹೀಮ್ ಶೇಖ್, ಅಜರ್ ಶೇಖ್, ಮಝರ್ ಶೇಖ್, ಫಿರೋಜ್ ಶೇಖ್ ಮತ್ತು ವಿಕ್ಕಿ ಶೇಖ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಬಂಧಿತರಲ್ಲಿ ಸಮೋಸಾಗಳನ್ನು ಸರಬರಾಜು ಮಾಡಲು ಒಪ್ಪಂದ ಮಾಡಿಕೊಳ್ಳಲಾದ ಉಪಗುತ್ತಿಗೆ ಸಂಸ್ಥೆಯ ಇಬ್ಬರು ಕಾರ್ಮಿಕರು, ಮತ್ತು ಈ ಹಿಂದೆ ಸಮೋಸಾ ಪೂರೈಸುತ್ತಿದ್ದ ಸಂಸ್ಥೆಯ ಮತ್ತೊಂದು ಸಂಸ್ಥೆಯ ಮೂವರು ಪಾಲುದಾರರೂ ಸೇರಿದ್ದಾರೆ. ಹೊಸ ಸಂಸ್ಥೆಯ ಹೆಸರು ಕೆಡಿಸುವುದಕ್ಕಾಗಿಯೇ ಹೀಗೆ ಮಾಡಲಾಗಿತ್ತು ಎಂದು ತಿಳಿದುಬಂದಿದೆ.

ಇದಕ್ಕೂ ಮುನ್ನ ಸಮೋಸಾ ಒದಗಿಸುವ ಗುತ್ತಿಗೆಯನ್ನು ಪುಣೆ ಮೂಲದ ಎಸ್‌ಆರ್‌ಎ ಎಂಟರ್‌ಪ್ರೈಸಸ್‌ ಹೊಂದಿತ್ತು. ಆದರೆ, ತಿಂಡಿಯಲ್ಲಿ ಕಲಬೆರಕೆ ಮಾಡಿದ್ದಕ್ಕಾಗಿ ಈ ಸಂಸ್ಥೆಯ ಜೊತೆಗಿನ ಒಪ್ಪಂದ ರದ್ದುಪಡಿಸಲಾಗಿತ್ತು. ಇವರು ಒದಗಿಸಿದ ಸಮೋಸಾಗಳನ್ನು ಫಸ್ಟ್‌ ಏಯ್ಡ್‌ ಬ್ಯಾಂಡೇಜ್‌ಗಳು ಕಂಡುಬಂದ ನಂತರ ಒಪ್ಪಂದ ರದ್ದುಪಡಿಸಲಾಗಿತ್ತು. ಇದರಿಂದ ರೊಚ್ಚಿಗೆದ್ದ ಎಸ್‌ಆರ್‌ಎ ಎಂಟರ್‌ಪ್ರೈಸಸ್‌ನ ಮೂವರು ಪಾಲುದಾರರಾದ ರಹೀಮ್ ಶೇಖ್, ಅಜರ್ ಶೇಖ್, ಮಝರ್ ಶೇಖ್ ಎಂಬವರು ಒಳಸಂಚು ಹೂಡಿ, ತನ್ನ ಇಬ್ಬರು ಉದ್ಯೋಗಿಗಳಾದ ಫಿರೋಜ್ ಶೇಖ್ ಮತ್ತು ವಿಕ್ಕಿ ಶೇಖ್ ಎಂಬವರನ್ನು ಮಹೋಹರ್‌ ಎಂಟರ್‌ಪ್ರೈಸ್‌ಗೆ ಕಳಿಸಿದ್ದರು. ಇವರು ಸಮೋಸಾಗಳಲ್ಲಿ ಕಾಂಡೋಮ್, ಗುಟ್ಕಾ ಮತ್ತು ಕಲ್ಲುಗಳನ್ನು ತುಂಬಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.


[ays_poll id=3]