
ಸಿಂಧನೂರು : ವಿದ್ಯುತ್ ರಿಪೇರಿ ಕೆಲಸಕ್ಕೆಂದು ಕಂಬ ಏರಿ ವಿದ್ಯಾರ್ಥಿ ಸಾವನ್ನಪ್ಪಿದ ಘಟನೆ ರಾಮರಡ್ಡಿ ಕ್ಯಾಂಪ್ ನಲ್ಲಿ ನಡೆದಿದೆ.
ರಾಯಚೂರು ಜಿಲ್ಲೆಯಲ್ಲಿ ಸಿಂಧನೂರು ತಾಲೂಕಿನ ರಾಮರಡ್ಡಿ ಕ್ಯಾಂಪ್ ನಲ್ಲಿ ಘಟನೆ ನಡೆದಿದ್ದು, ನಗರದ ಅನಿಕೇತನ ಕಾಲೇಜಿನಲ್ಲಿ ಪದವಿ(4ನೇ ಸೆಮ್) ಅಭ್ಯಾಸ ಮಾಡುತ್ತಿದ್ದ ಭಿಮಾಶಂಕರ. 11ಕೆವಿ ಕಂಬದ ಮೇಲೆ ಏರಿದ್ದ ವೇಳೆ ವೈಯರ ತಾಕಿ ನೆಲಕ್ಕೆ ಬಿದ್ದು ತಕ್ಷಣ ಸಾವನ್ನಪ್ಪಿದ್ದಾನೆಂದು ತಿಳಿದುಬಂದಿದೆ.
ಮರಣೋತ್ತರ ಪರಿಕ್ಷೆಗಾಗಿ ಮೃತನನ್ನು ಸಿಂಧನೂರಿನ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆಯು ಸಿಂಧನೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ಪ್ರಕರಣ ದಾಖಲಾಗಿದೆ.
![]() |
![]() |
![]() |
![]() |
![]() |
[ays_poll id=3]