
ಮಸ್ಕಿ : ಸತತ ಅಧ್ಯಯನ, ಹಲವು ಕಷ್ಟಗಳ ಮಧ್ಯ ಉತ್ತಮವಾಗಿ ಅಧ್ಯಯನ ಮಾಡಿ, ನೀಟ್ ಪರೀಕ್ಷೆಯಲ್ಲಿ ಉತ್ತಮ ರ‌್ಯಾಂಕ್ ಪಡೆದು, ಮೆಡಿಕಲ್ ಸೀಟ್ ಸಂಪಾದಿಸಿದ ಪೌರಕಾರ್ಮಿಕನ ಮಗ.
ಔದು ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದ ಪೌರ ಕಾರ್ಮಿಕ ಶರಣಪ್ಪ ಕಟ್ಟಿಮನಿ ಅವರ ಮಗ ಅಭಿಷೇಕ ಕಟ್ಟಿಮನಿ ಪ್ರತಿಭಾನಿತ್ವ ವಿದ್ಯಾರ್ಥಿ ಈ ಸಾಧನೆ ಮಾಡಿದ್ದಾರೆ. ಪಟ್ಟಣದ ಜೋಗಿನ್ ರಾಮಣ್ಣ ಸ್ಮಾರಕ ಪ್ರೌಢ ಶಾಲೆಯಲ್ಲಿ ಓದಿ ಎಸ್ಸೆಸ್ಸೆಲ್ಸಿಯಲ್ಲಿ ಶೇ 98.88 ರಷ್ಟು ಫಲಿತಾಂಶ ಪಡೆದಿದ್ದರು. ಗಂಗಾವತಿಯ ವಿದ್ಯಾನಿಕೇತನ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ಪಡೆದು ಪಿಯುಸಿಯಲ್ಲಿ ಶೇ 95.33 ರಷ್ಟು ಫಲಿತಾಂಶ ಪಡೆದುಕೊಂಡಿದ್ದರು. ಇತ್ತೀಚೆಗೆ ನಡೆದ ನೀಟ್ ಪರೀಕ್ಷೆಯಲ್ಲಿ 720ನೇ ರ‍್ಯಾಂಕ್ ಪಡೆಯುವ ಮೂಲಕ ಮೆಡಿಕಲ್ ಸೀಟ್ ಗಿಟ್ಟಿಸಿಕೊಂಡಿದ್ದಾನೆ. ಕೊಪ್ಪಳ ಸರ್ಕಾರಿ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಕಾಲೇಜಿನಲ್ಲಿ ಅಭಿಷೇಕ ಕಟ್ಟಿಮನಿಗೆ ಉಚಿತ ಪ್ರವೇಶ ದೊರಕಿದೆ. ಇದರಿಂದ ಕುಟುಂಬಸ್ಥರಲ್ಲಿ ಸಾಕಷ್ಟು ಸಂತಸ ವ್ಯಕ್ತವಾಗಿದೆ.
![]() |
![]() |
![]() |
![]() |
![]() |
[ays_poll id=3]