This is the title of the web page
This is the title of the web page
Crime NewsState News

ಕಾಮಾಂದ ಅಣ್ಣನಿಂದ ಅತ್ಯಾಚಾರ‌ : 15ರ ಬಾಲಕಿ ಗಂಡು ಮಗುವಿಗೆ ಜನ್ಮ..


K2kannadanews.in

rape by brother : 15 ವರ್ಷದ ಬಾಲಕಿಯೊಬ್ಬಳು (girl) ಗಂಡು ಮಗುವಿಗೆ ಜನ್ಮ (birth to boy child) ನೀಡಿದ ವಿಚಿತ್ರ ಘಟನೆ ನಡೆದಿದ್ದು, ದುರಂತ ಅಂದ್ರೆ ಆ ವಿದ್ಯಾರ್ಥಿನಿ ಪರಿಸ್ಥಿತಿಗೆ, ಆಕೆಯನ್ನು ಅತ್ಯಾಚಾರ ಮಾಡಿ ಹಾಗೆ ಬಳಸಿಕೊಂಡದ್ದು ಬೇರೆ ಯಾರೂ ಅಲ್ಲ, ಅವಳ ಅಣ್ಣನೇ ಆ ಕಾಮುಕ..!

ಹೌದು ಕಲಬುರಗಿ ಜಿಲ್ಲೆಯ (Kalaburagi) ಅಳಂದದಲ್ಲಿ (Aland) ಸಂಭವಿಸಿದೆ. ಯುವತಿ ಗರ್ಭ ಧರಿಸಲು ಆಕೆಯ ಅಣ್ಣನೇ ಕಾರಣ ಎಂದು ಹೇಳಲಾಗಿದ್ದು, ಸದ್ಯ ಆತನನ್ನು ಬಂಧಿಸಲಾಗಿದೆ. ದೊಡ್ಡಪ್ಪನ ಮಗನೇ ಆಕೆಯನ್ನು ಈ ರೀತಿಯಾಗಿ ಅತ್ಯಾಚಾರ ಮಾಡಿ (Physical Abuse) ಆಕೆಯನ್ನು ಬಳಸಿಕೊಂಡು ಗರ್ಭಿಣಿಯಾಗಿ ಮಾಡಿದ್ದಾನೆ. ಈ ವಿದ್ಯಾರ್ಥಿನಿ ಕಲಬುರಗಿ ಜಿಲ್ಲೆಯಲ್ಲಿರುವ ವಸತಿ ಶಾಲೆಯಲ್ಲಿ ವಾಸವಾಗಿದ್ದು ಓದು ಮುಂದುವರಿಸಿದ್ದಳು. ಶಾಲೆಗೆ ರಜೆ ಇದ್ದಾಗ ಮಾತ್ರ ಮನೆಗೆ ಬರುತ್ತಿದ್ದಳು. ಅವರದು ಬಡ ಕುಟುಂಬ, ಆಕೆ ಮನೆಗೆ ಬಂದಾಗಲೆಲ್ಲ ಆಕೆಯ ಅಣ್ಣನ ಮಗ ಆಕೆಯನ್ನು ಬಳಸಿಕೊಳ್ಳುತ್ತಿದ್ದ ಎನ್ನಲಾಗಿದೆ. ರಾತ್ರಿ ಹೊತ್ತು ಮನೆಯಲ್ಲಿ ಎಲ್ಲರೂ ಮಲಗಿದ ಮೇಲೆ ಆಕೆಯನ್ನು ಪುಸಲಾಯಿಸಿ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ. ಕಳೆದ ಏಪ್ರಿಲ್‌ ತಿಂಗಳಲ್ಲಿ ಆಕೆ ರಜೆಯಲ್ಲಿ ಮನೆಗೆ ಬಂದಿದ್ದಾಗ ಹಲವು ಬಾರಿ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದ, ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಹೀಗಾಗಿ ಆಕೆ ಯಾರಿಗೂ ಈ ವಿಚಾರವನ್ನು ಹೇಳಿರಲಿಲ್ಲ.

ಈ ನಡುವೆ ಆಕೆ ಗರ್ಭಿಣಿಯಾಗಿದ್ದಳು. ಆದರೆ ಆಕೆ ಗರ್ಭಿಣಿಯಾಗಿದ್ದು ಯಾರಿಗೂ ಗೊತ್ತಾಗಿರಲಿಲ್ಲ. ಡಿಸೆಂಬರ್‌ 24ರಂದು ಶಾಲೆಯಲ್ಲಿ ಇದ್ದಾಗ ಆಕೆಗೆ ಜೋರಾಗಿ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಹೀಗಾಗಿ ಶಿಕ್ಷಕರಿಗೆ ಹೇಳಿ ಆಕೆ ಸಂಬಂಧಿಕರ ಮನೆಗೆ ತೆರಳಿದ್ದಾಳೆ. ನಂತರ ಸಂಬಂಧಿಕರು‌ ವಿದ್ಯಾರ್ಥಿನಿ ಕುಟಂಬದವರಿಗೆ ಮಾಹಿತಿ ನೀಡಿದ್ದಾರೆ. ಬಳಿಕ‌ ಆಕೆಯನ್ನು ಮಹಾರಾಷ್ಟ್ರದ ಸೊಲ್ಲಾಪುರದ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಲಾಯಿತು. ಚಿಕಿತ್ಸೆಗೆ ದಾಖಲು ಮಾಡುತ್ತಿದ್ದಂತೆಯೇ ಆಕೆ ಗಂಡು ಮಗುವಿಗೆ ಜನ್ಮ ಕೊಟ್ಟಿದ್ದಾಳೆ. ಮಹಾರಾಷ್ಟ್ರ ಪೊಲೀಸರು ನಿಂಬರ್ಗಾ ಪೊಲೀಸರನ್ನು ಸಂಪರ್ಕ ಮಾಡಿ ವಿಷಯವನ್ನು ತಿಳಿಸಿದ್ದು, ನಿಂಬರ್ಗಾ ಪೊಲೀಸರು ವಿದ್ಯಾರ್ಥಿನಿಯ ವಿಚಾರಣೆ ನಡೆಸಿದಾಗ ಅಣ್ಣನಿಂದಲೇ ಆಕೆ ಅತ್ಯಾಚಾರಕ್ಕೆ ಒಳಗಾಗಿದ್ದು ಬಯಲಾಯಿತು.


[ays_poll id=3]