This is the title of the web page
This is the title of the web page
Crime NewsNational NewsVideo News

ಇದೆಂಥಾ ವೈರತ್ವ : ಶೂಟ್ ಮಾಡಿ ಬರ್ಬರವಾಗಿ ಕೊಲೆ, ಭಯಾನಕ ವೀಡಿಯೋ ಸೆರೆ..!


K2kannadanews.in

Shoot out, News Desk : ಇತ್ತೀಚಿನ ದಿನಗಳಲ್ಲಿ ಮನುಷ್ಯನನ್ನು ಕೊಲ್ಲುವುದು ಇರುವಗಿಂತ ಸಾಮಾನ್ಯವಾಗಿದೆಯೋ ಏನು ಅನ್ನಿಸುತ್ತೆ. ಇಂದು ಅಂಥದ್ದೇ ಒಂದು ಘಟನೆ ನಡೆದಿದ್ದು, ಊಟಕ್ಕೆ ಬಂದ ವ್ಯಕ್ತಿಯನ್ನು ರೆಸ್ಟೋರೆಂಟ್ ನಲ್ಲಿ ಕ್ಷಣಮಾತ್ರದಲ್ಲಿ ಕೊಂದು ಹಾಕಿದ ಭಯಾನಕ ಘಟನೆ ನಡೆದಿದೆ.

ಹೌದು ಪುಣೆಯಲ್ಲಿ ಘಟನೆ ನಡೆದಿದ್ದು, ಹೈವೆ ರೆಸ್ಟೋರೆಂಟ್‌ನಲ್ಲಿ(Highway Restaurant) ಬೆಚ್ಚಿಬೀಳಿಸುವ ಘಟನೆ ನಡೆದಿದ್ದು, ವ್ಯಕ್ತಿಯನ್ನು ಸಾರ್ವಜನಿಕರ ಎದುರೇ ತಲೆಗೆ ಗುಂಡು ಹೊಡೆದು(Head shot) ಹತ್ಯೆಗೈಯಲಾಗಿದೆ. ಮಾರ್ಚ 16 ಈ ದುರ್ಘಟನೆ ನಡೆದಿದ್ದು , ರಿಯಲ್‌ ಎಸ್ಟೇಟ್ ಉದ್ಯಮಿ ಅವಿನಾಶ್ ಬಾಲು ಧನ್ವೆ (34) ಕೊಲೆಯಾದ ದುರ್ದೈವಿ. ಪುಣೆ ಸಿಟಿಯಿಂದ 140 ಕಿ.ಮೀ ದೂರದಲ್ಲಿರುವ ಹೈವೆ ರೆಸ್ಟೋರೆಂಟ್‌ನಲ್ಲಿ ಕೂತಿದ್ದ, ಅವಿನಾಶ್‌ನನ್ನ ಏಕಾಏಕಿ ಒಳಬಂದ ಇಬ್ಬರು ದುಷ್ಕರ್ಮಿಗಳು ತಲೆಗೆ ಗುಂಡು ಹೊಡೆದಿದ್ದಾರೆ.

ಗುಡು ಹೊಡೆದ ನಂತರ 6ಕ್ಕೂ ಅಧಿಕ ದುಷ್ಕರ್ಮಿಗಳು ನುಗ್ಗಿ ಬಂದು ಕುಸಿದುಬಿದ್ದಿದ್ದ ಅವಿನಾಶ್ ಮೇಲೆ ಹಲ್ಲೆ ನಡೆಸಿ, ಆತ ಸಾವನ್ನಪ್ಪಿರುವುದನ್ನು ಖಚಿತಪಡಿಸಿಕೊಂಡು ಓಡಿ ಹೋಗಿದ್ದಾರೆ. ಕೊಲೆಯಾದ ಅವಿನಾಶ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದ್ದವು ಎಂದು ಹೇಳಲಾಗುತ್ತಿದ್ದು, ಯಾವುದೋ ಬ್ಯುಸಿನೆಸ್‌ ದ್ವೇಷಕ್ಕೆ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಗುಂಡು ಹೊಡೆದಿದ್ದು ಮಾತ್ರವಲ್ಲ ಇನ್ನೂ ಈ ಸನ್ನಿವೇಶಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪ್ರಕರಣ ಸಂಬಂಧ ಪುಣೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 


[ays_poll id=3]