
K2 ನ್ಯೂಸ್ ಡೆಸ್ಕ್ : ಮಂಜೂರಾದ ಸಾಲ ನೀಡಲು ಮೈಕ್ರೋಫೈನಾನ್ಸ್ ಸಿಬ್ಬಂದಿಯೊಬ್ಬ ಮಹಿಳೆಗೆ ಮಂಚಕ್ಕೆ ಬರುವಂತೆ ಕಿರುಕುಳ ನೀಡಿದ ಹಿನ್ನೆಲೆ, ಸಂತ್ರಸ್ತೆ ಚಪ್ಪಲಿ ಸೇವೆ ಮಾಡಿದ ಘಟನೆ ಹಳೆಬಂಡಿ ಹರ್ಲಾಪುರದಲ್ಲಿ ನಡೆದಿದೆ.
ಕೊಪ್ಪಳ ತಾಲೂಕಿನ ಹಳೆಬಂಡಿ ಹರ್ಲಾಪುರದಲ್ಲಿ ಘಟನೆ ನಡೆದಿದ್ದು, ಮೈಕ್ರೋಫೈನಾನ್ಸ್ ಸಿಬ್ಬಂದಿಗೆ ಮಹಿಳೆ ಚಪ್ಪಲಿಯಿಂದ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಗೋದಾವರಿ ಮೈಕ್ರೋಫೈನಾನ್ಸ್ ಮಹಿಳಾ ಗುಂಪಿನ ಸದಸ್ಯರಾಗಿರುವ ನಾಗಮ್ಮಳಿಗೆ ಫೈನಾನ್ಸ್ ಕಂಪೆನೆಯಿಂದ ಸಾಲ ಮಂಜೂರಾಗಿತ್ತು. ಸಿಬ್ಬಂದಿ ಕರೆ ಮಾಡಿ ನಾಗಮಳನ್ನು ತನೊಂದಿಗೆ ಮಲಗುವಂತೆ ಪೀಡಿಸಿದ್ದಾನೆ. ಆಗ ಮಾತ್ರ ಮಂಜೂರಾದ ಸಾಲವನ್ನು ಕೊಡುವುದಾಗಿ ಹೇಳಿದ್ದಾನೆ.
ರಾತ್ರಿ ಹತ್ತು ಗಂಟೆ ವೇಳೆಗೆ ಫೈನಾನ್ಸ್ ಸಿಬ್ಬಂದಿ ಫೋನ್ ಕರೆ ಮಾಡಿ ಒತ್ತಡ ಹಾಕಿದ್ದಾನೆ ಎಂದು ನಾಗಮ್ಮ ಆರೋಪಿಸಿದ್ದಾರೆ. ನಾಗಮ್ಮಳಿಗೆ ನಿತ್ಯ ಫೋನ್ ಕರೆ ಮಾಡಿ ಅಶ್ಲೀಲ ಪದಬಳಕೆ ಮಾಡಿತ್ತಿದ್ದ. ಈ ಕಾರಣಕ್ಕೆ ಸಿಟ್ಟಿಗೆದ್ದಿದ್ದು ನಾಗಮ್ಮ ಮತ್ತು ಕುಟುಂಬಸ್ಥರು ಫೈನಾನ್ಸ್ ಕಂಪೆನಿಯ ಸಿಬ್ಬಂದಿಗೆ ಚಪ್ಪಲಿಯಿಂದ ಹಿಗ್ಗಾಮುಗ್ಗ ಥಳಿಸಿದ್ದಾರೆ. ಸದ್ಯ ಈ ಘಟನೆಯೂ ಮುನಿರಾಬಾದ್ ಪೊಲೀಸರ ಮಧ್ಯಸ್ಥಿಕೆಯಲ್ಲಿ ಸಂದನ ಮಾಡಿ ಪರಿಸ್ಥಿತಿ ತಿಳಿಗೊಳಿಸಲಾಗಿದೆ.
![]() |
![]() |
![]() |
![]() |
![]() |
[ays_poll id=3]