
ಲಿಂಗಸುಗೂರು : ಮಧ್ಯರಾತ್ರಿ ಮನೆಯ ಬೀಗ ಹೊಡೆದು ವೃದ್ಧೆಯ ಬಾಯಿಗೆ ಬಟ್ಟೆ ಇಟ್ಟು ಚಾಕು ತೋರಿಸಿ, ಕತ್ತಿನಲ್ಲಿದ್ದ ಬೋರಮಳ ಸರ, ಕಿವಿಯಲ್ಲಿ ಓಲೆ ಕಿತ್ತಿದ ವಿಚಿತ್ರ ಘಟನೆ ಲಿಂಗಸುಗೂರು ಪಟ್ಟಣದ ನಡೆದಿದೆ.
ರಾಯಚೂರು ಜಿಲ್ಲೆಯ ಲಿಂಗಸುಗೂರು ಪಟ್ಟಣದ ಸಂಗಮ ಬಾರ್ ಹಿಂಭಾಗದ ಬಡಾವಣೆಯಲ್ಲಿ ಗುರುವಾರ ಮಧ್ಯರಾತ್ರಿ ನಡೆದ ವಿಚಿತ್ರ ಕಳ್ಳತನ ಪ್ರಕರಣದಿಂದ ನಾಗರಿಕರಲ್ಲಿ ಭಯ ಹುಟ್ಟಿದೆ. ಗುರುವಾರ ಮಧ್ಯರಾತ್ರಿ ವಯೋವೃದ್ದೆ ಪಾರ್ವತೆಮ್ಮ ಲಿಂಗಯ್ಯ ಗುಂತಗೋಳ ಮನೆ ಬಾಗಿಲು ಮುರಿದು ಒಳಹೊಕ್ಕ ಕಳ್ಳರು ಪ್ರತಿರೋಧಿಸಿದ ವಯೋವೃದ್ಧೆ ಬಾಯಿಗೆ ಬಟ್ಟೆ ಇಟ್ಟು ಚಾಕು ತೋರಿಸಿ ಕಿವಿಯಲ್ಲಿ ಓಲೆ ಕಿತ್ತಿದ ವಿಚಿತ್ರ ಘಟನೆ ನಡೆದಿದೆ. ಕೊರಳಲ್ಲಿ ಬೋರಮಳ, ಕಿವಿ ಹರಿದು ಓಲೆ ಕದ್ದ ಇಬ್ಬರು ಯುವಕರು ಹೋಗುತ್ತಿದ್ದಂತೆ ಚೀರಾಡಿದಾಗ ಅಕ್ಕ ಪಕ್ಕದ ಮನೆಯವರು ಆಗಮಿಸಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
![]() |
![]() |
![]() |
![]() |
![]() |
[ays_poll id=3]