This is the title of the web page
This is the title of the web page
Politics NewsVideo News

ರಾ.ಲೋಕಾ ಕ್ಷೇತ್ರದಲ್ಲಿ 64.10% ಮತದಾನ : ಅಭ್ಯರ್ಥಿಗಳ ಭವಿಷ್ಯ ಸ್ಟ್ರಾಂಗ್ ರೂಂನಲ್ಲಿ ಭದ್ರ


K2kannadanews.in

Political News ರಾಯಚೂರು : 2024ರ ಲೊಕಸಭೆ ಚುನಾವಣೆ (Lokasabha election) ಮೋರನೆ ಹಂತದ ಮತದಾನ ಮುಗಿದಿದ್ದು, ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಅಂತಿಮವಾಗಿ ಶೇಕಡಾ 64.10 ರಷ್ಟು ಮತದಾನವಾಗಿದೆ (Voting). ಬಿರು ಬೇಸಿಗೆಯ ತಾಪದ ನಡುವೆಯೂ ಕಳೆದ ಬಾರಿಗಿಂತ ಶೇಕಡಾ 6 ರಷ್ಟು ಮತದಾನ ಪ್ರಮಾಣ ಹೆಚ್ಚಾಗಿದೆ.

ರಾಯಚೂರು (Raichur) ನಗರದ ಎಲ್‌ವಿಡಿ ಕಾಲೇಜು (LVD) ಹಾಗೂ ಎಸ್‌ಆರ್‌ಪಿಯು ಕಾಲೇಜಿನಲ್ಲಿ (SRPS College) ತೆರೆಯಲಾದ, ಸ್ಟ್ರಾಂಗ್ ರೂಂಗಳಲ್ಲಿ (Strong room) ರಾಯಚೂರು, ಯಾದಗಿರಿಯ (Yadgiri) ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳ ಮತ ಪೆಟ್ಟಿಗೆಗಳನ್ನು ಭದ್ರವಾಗಿ ಇಡಲಾಗಿದೆ. ಸ್ಟ್ರಾಂಗ್ ರೂಂ ಸುತ್ತಮುತ್ತ ಬಿಗಿ ಭದ್ರತೆ (Tight sequrety) ಹಾಕಲಾಗಿದೆ. ಬಿಜೆಪಿ (BJP) ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ್ ಹಾಗೂ ಕಾಂಗ್ರೆಸ್ (Congress) ಅಭ್ಯರ್ಥಿ ಜಿ.ಕುಮಾರ್ ನಾಯಕ ನಡುವೆ ತೀವ್ರ ಪೈಪೋಟಿಯಿದ್ದು, ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎಂಟು ಅಭ್ಯರ್ಥಿಗಳ ಭವಿಷ್ಯ ಸ್ಟ್ರಾಂಗ್ ರೂಂ ನಲ್ಲಿ ಭದ್ರವಾಗಿದೆ.


[ays_poll id=3]