This is the title of the web page
This is the title of the web page
Crime NewsNational NewsVideo News

ಗಂಡನೂ ಇರಲಿ, ಪ್ರಿಯತಮನೂ ಇರಲಿ ಎಂದು ವಿದ್ಯುತ್ ಕಂಬ ಏರಿದಳು..!


K2kannadanews.in

Extramarital Affair : ಪತಿ ತನ್ನ ಬೇಡಿಕೆಗೆ ಒಪ್ಪಲಿಲ್ಲ ನೀಡಿಲ್ಲವೆಂದು ಟ್ರಾನ್ಸ್‌ಫಾರ್ಮರ್‌ (Transformer)ಏರಿ ಮಹಿಳೆ (Women) ಆತ್ಮಹತ್ಯೆ ಯತ್ನ(Suicide attempt) ನಡೆಸಿದ್ದಾಳೆ. ಆದ್ರೆ ಮಹಿಳೆಯ ಬೇಡಿಕೆ ಸಣ್ಣಪುಟ್ಟದ್ದಲ್ಲ, 3 ಮಕ್ಕಳ ತಾಯಿಯಾಗಿರುವ ಮಹಿಳೆ ಗಂಡನ ಮುಂದೆ ತನ್ನ ಪ್ರಿಯಕರನೂ ಜೊತೆಗಿರಬೇಕು ಎಂದು ಬೇಡಿಕೆ ಇಟ್ಟಿದ್ದಾಳೆ.

ಪ್ರಿಯತಮ ಹಣಕಾಸು ಸಹಾಯ ಮಾಡುತ್ತಾನೆ. ಹಾಗಾಗಿ ತಮ್ಮ ಮನೆಯಲ್ಲಿಯೇ ಅವನನ್ನು ಇಟ್ಟುಕೊಳ್ಳುವ ಎಂದು ಹಟ ಹಿಡಿದಿದ್ದಾಳೆ. ಆದರೆ ಹೆಂಡತಿಯ ಈ ಮಾತಿಗೆ ಸೊಪ್ಪು ಹಾಕದ ಗಂಡ ವಿರೋಧಿಸಿ ಮನೆಬಿಟ್ಟು ಹೊರ ನಡೆದಿದ್ದಾನೆ. ಪತಿಯ ಮನವೊಲಿಕೆಗಾಗಿ ಹೆಂಡತಿ ಹೈವೋಲ್ಟೇಜ್ ವಿದ್ಯುತ್ ಕಂಬ ಏರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸಖತ್ ಡ್ರಾಮಾ ಮಾಡಿದ್ದಾಳೆ.

ಮೂರು ಮಕ್ಕಳ ತಾಯಿಯಾಗಿರುವ ಸುಮನ್ ದೇವಿ ಸುಮಾರು ಏಳು ವರ್ಷಗಳಿಂದ ಪಕ್ಕದ ಗ್ರಾಮದ ವ್ಯಕ್ತಿಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದಳಂತೆ. ತನ್ನ ಈ ಕಳ್ಳ ಸಂಬಂಧದ ಬಗ್ಗೆ ಪತಿಗೆ ತಿಳಿಯುತ್ತಿದ್ದಂತೆ ಹೈವೋಲ್ಟೇಜ್ ವಿದ್ಯುತ್ ಕಂಬವೇರಿ, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದ ಘಟನೆ ನಡೆದಿದೆ. ಈ ಎಲ್ಲ ನಾಟಕವನ್ನು ವೀಡಿಯೋದಲ್ಲಿ ಸೆರೆಹಿಡಿದು ಆನ್‌ ಲೈನ್‌ನಲ್ಲಿ ಹರಿಬಿಡಲಾಗಿದೆ. ಮಹಿಳೆಯು ವಿದ್ಯುತ್ ಕಂಬವನ್ನು ಏರುತ್ತಿರುವುದು ನೋಡುಗರನ್ನು ದಿಗ್ಭ್ರಮೆಗೊಳಿಸಿದೆ. ಅಲ್ಲಿದ್ದ ಜನ ಆಕೆಯನ್ನು ಕಂಬದಿಂದ ಇಳಿಯಲು ಒತ್ತಾಯಿಸಿದರೂ ಆಕೆ ಅಲ್ಲೇ ಕುಳಿತಿದ್ದನ್ನು ಜನಸಮೂಹವು ಭಯಭೀತರಾಗಿ ವೀಕ್ಷಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಘೊರಕ್ಪೊಪೂರ ನಲ್ಲಿ ಘಟನೆ ನಡೆದಿದ್ದು ಕೊನೆಗೆ ಪೊಲೀಸ್ ಮತ್ತು ವಿದ್ಯುತ್ ‌ಇಲಾಖೆ ಸಿಬ್ಬಂದಿಗಳ ಸಹಾಯದಿಂದ ಕೆಳಗಿಳಿಸಲಾಯಿತು.


[ays_poll id=3]