
ರಾಯಚೂರು : 76ನೇ ಸ್ವಾತಂತ್ರ್ಯೋತ್ಸವದ ಹಿನ್ನೆಲೆ ನರೇಂದ್ರ ಮೋದಿಯವರ ಕರೆಯಂತೆ ಮನೆ ಮನೆಗಳಲ್ಲಿ ತಿರಂಗಾ ಹಾರಾಡಲು ತಯಾರಿ ನಡೆಸಿದ್ದ ಜನರ ಮಧ್ಯ. ರಾಯಚೂರಲ್ಲೊಬ್ಬ ಕಾರ್ಮಿಕ ದೇಶ ಪ್ರೇಮ ಮೆರೆಯಲೆಂದು 150 ಮೀಟರ್ RTPS ಉತ್ಪಾದನಾ ಕೇಂದ್ರದ ಟವರ್ ಮೇಲೆ ಹತ್ತಿ ಧ್ವಜ ಹಾರಿಸಿದ್ದಾನೆ.
ರಾಯಚೂರು ತಾಲೂಕಿನ ಶಕ್ತಿನಗರ ಬಳಿಯ ಆರ್ಟಿಪಿಎಸ್ ವಿದ್ಯುತ್ ಉತ್ಪಾದನಾ ಘಟಕದ ಮೇಲೇರಿ ಸುನೀಲ್ ಎಂಬ ಕಾರ್ಮಿಕ ದೇಶಪ್ರೇಮ ಮೆರೆದಿದ್ದಾನೆ. ಸುಮಾರು 150 ಕ್ಕೂ ಹೆಚ್ಚು ಮೀಟರ್ ಎತ್ತರದ ಆರ್ಟಿಪಿಎಸ್ನ ಏಳನೇ ಯುನಿಟ್ ಮೇಲೇರಿ ಕಾರ್ಮಿಕ ಸುನೀಲ್ ಭಾರತದ ಧ್ವಜ ಹಾರಿಸಿದ್ದಾನೆ. ಈ ವಿಚಾರ ತಿಳಿಯುತ್ತಿದ್ದಂತೆ ಆರ್ಟಿಪಿಎಸ್ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ತಲೆ ಬಿಸಿ ಮಾಡಿಕೊಂಡಿದ್ದು ಸುನೀಲನನ್ನು ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ.
ಈ ಹಿಂದೆ ಅಧಿಕಾರಿಗಳ ಕಿರುಕುಳ, ವೇತನ ಸಮಸ್ಯೆ ಅಂತ ಆರೋಪಿಸಿ ಇದೇ ಘಟಕದ ಮೇಲೇರಿ ಸುನೀಲ್ ಆತ್ಮಹತ್ಯೆಗೆ ಯತ್ನಿಸಿದ್ದ. ನಂತರ ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ್ ಬಂದು ಮೇಲೇರಿದ್ದ ಸುನೀಲ್ ಗೆ ಕರೆ ಮಾಡಿ ಸಮಾಧಾನ ಪಡಿಸಿ ಕೆಳಗಿಳಿಸಿದ್ರು. ಇಂದು ಕೂಡ ವಿದ್ಯುತ್ ಉತ್ಪಾದನಾ ಘಟಕ ಮೇಲೇರುವುದನ್ನು ನೋಡಿದ ಅಧಿಕಾರಿಗಳು ಕಂಗಾಲಾಗಿದ್ದರು. ಈ ಬಾರಿ ಕೂಡ ಆತ್ಮಹತ್ಯೆ ಮಾಡಿಕೊಳ್ಳಲು ಮೇಲೇರುತ್ತಿದ್ದಾನೆಂದು ಕೊಂಡು ಅಧಿಕಾರಿಗಳು ಶಕ್ತಿನಗರ ಪೊಲೀಸರನ್ನ ಕರೆಸಿದ್ದಾರೆ. ಸ್ಥಳದಲ್ಲಿ ಕೆಲ ಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಆದರೆ ಈ ಬಾರಿ ಆತ್ಮಹತ್ಯೆಗೆ ಯತ್ನಿಸದೆ ಸುನೀತ್ ದೇಶ ಪ್ರೇಮ ಮೆರೆಯಲು ಸಾಹಸಕ್ಕೆ ಕೈ ಹಾಕಿದ್ದ. ಆರ್ಟಿಪಿಎಸ್ ವಿದ್ಯುತ್ ಉತ್ಪಾದನಾ ಘಟಕದ ಮೇಲೆ ಭಾರತದ ಧ್ವಜವನ್ನ ಹಾರಿಸಿದ್ದಾನೆ. ಸದ್ಯ ಭಾರತ ಧ್ವಜವನ್ನ ಹಾರಿಸಿ ಕಾರ್ಮಿಕ ಸುನೀಲ್ ಕೆಳಗಿಳಿದಿದ್ದು ಪೊಲೀಸರು, ಅಧಿಕಾರಿಗಳು ನಿಟ್ಟುಸಿರುಬಿಟ್ಟಿದ್ದಾರೆ.
![]() |
![]() |
![]() |
![]() |
![]() |
[ays_poll id=3]