This is the title of the web page
This is the title of the web page
National News

ರಾಯಚೂರಿನಲ್ಲಿ ಪಟಾಕಿ ಮಾರಾಟಕ್ಕೆ ಸಿದ್ದತೆ : ಪಟಾಕಿ ನಿಷೇಧಿಸಿ ಸುಪ್ರಿಂ ಆದೇಶ..!


K2 ನ್ಯೂಸ್ ಡೆಸ್ಕ್ : ರಾಯಚೂರಿನಲ್ಲಿ ದೀಪಾವಳಿ ಹಬ್ಬಕ್ಕೆ ಪಟಾಕಿ ಮಾರಾಟಕ್ಕಾಗಿ ವ್ಯಾಪಾರಸ್ಥರು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇದರ ಬೆನ್ನಲ್ಲೇ ಸುಪ್ರೀಂ ಕೋರ್ಟ್ ದೆಹಲಿ ಹಾಗೂ ಪಂಜಾಬ್ ಸರ್ಕಾರಕ್ಕೆ ಛೀಮಾರಿ ಹಾಕಿ, ದೀಪಾವಳಿ ಹಬ್ಬಕ್ಕೆ ಕೆಲ ನಿರ್ಬಂಧ ಮುಂದುವರಿಸಿದೆ. ದೆಹಲಿ ಸೇರಿ ದೇಶಾದ್ಯಂತ ಪಟಾಕಿ ನಿಷೇಧ ನಿರ್ಬಂಧ ತೆರವುಗೊಳಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.

ಹೌದು ದೇಶವೇ ದೀಪಾವಳಿ ಆಚರಿಸಲು ಸಿದ್ಧವಾಗಿದೆ. ಆದರೆ ವಾಯು ಮಾಲಿನ್ಯ ಇದೀಗ ದೆಹಲಿಗೆ ಮಾತ್ರ ಸೀಮಿತವಾಗಿಲ್ಲ. ಬಹುತೇಕ ನಗರ ಪ್ರದೇಶದಲ್ಲಿ ಮಾಲಿನ್ಯ ವಿಪರೀತವಾಗುತ್ತಿದೆ. ಪಟಾಕಿ ಸಿಡಿಸುವುದರಿಂದ ವಾಯು ಮಾಲಿನ್ಯ ಪ್ರಮಾಣ ಅತಿಯಾಗಲಿದೆ. ಹೀಗಾಗಿ ಪಟಾಕಿ ನಿಷೇಧವನ್ನು ಇತರ ನಗರಗಳಿಗೂ ವಿಸ್ತರಣೆಯಾಗಲಿದೆ.

ನಿಷೇಧಿತ ರಾಸಾಯನಿಕಗಳು ಮತ್ತು ಬೇರಿಯಂ ಲವಣಗಳಿರುವ ಪಟಾಕಿ ಬಳಸದಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಕಡಿಕೆ ಮಾಲಿನ್ಯಕಾರಣ ಅಥಾವ ಹಸಿರುವ ಪಟಾಕಿ ಬಳಕೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. ಇದು ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಕ್ಕೆ ಅನ್ವಯವಾಗಲಿದೆ. ವಾಯು ಮಾಲಿನ್ಯ ನಿಯಂತ್ರಣ ಕೆಲಸ ಕೋರ್ಟ್ ನದ್ದು ಮಾತ್ರ ಎಂದು ಕೊಳ್ಳಬೇಡಿ. ಪ್ರತಿಯೊಬ್ಬ ನಾಗರೀಕನ ಕರ್ತವ್ಯವಾಗಿದೆ. ವಾಯು ಮಾಲಿನ್ಯ ನಿಯಂತ್ರಣಕ್ಕೆ ನಾಗರೀಕರು ತಮ್ಮ ಕೊಡುಗೆ ಸಲ್ಲಿಸಬೇಕು ಎಂದು ಸೂಚಿಸಿದೆ.


[ays_poll id=3]