This is the title of the web page
This is the title of the web page
Local NewsState NewsVideo News

ರಾಯಚೂರು 220 ಕೆ.ವಿ. ಸ್ಟೇಷನಲ್ಲಿ ಭಾರೀ ಅಗ್ನಿ ಅವಘಡ.. ವೀಡಿಯೋ ಒಳಗೊಂಡಿದೆ


K2kannadanews.in

FIRE ACCIDENT ರಾಯಚೂರು : 220 ಕೆ.ವಿ. ಸ್ಟೇಷನ್ (K V station) ಒಂದರಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ (Short circuit) ಟ್ರಾನ್ಸ್ ಫಾರ್ಮರ್ ಗೆ (Trans famer) ಬೆಂಕಿ ಹತ್ತಿ (Fire Accident) ಸ್ಫೋಟಗೊಂಡ ಘಟನೆ ನಡೆದಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ರಾಯಚೂರು (Raichur) ನಗರದ 220 ಕೆ.ವಿ. ಸ್ಟೇಷನ್ ನಲ್ಲಿ ಶುಕ್ರವಾರ (Friday) ರಾತ್ರಿ ಬೆಂಕಿ ಅವಘಡ (FIRE ACCIDENT) ಸಂಭವಿಸಿದ್ದು, ಶಾರ್ಟ್ ಸರ್ಕ್ಯೂಟ್ ನಿಂದ ಮೂರು ಟ್ರಾನ್ಸ್ ಫಾರ್ಮರ್ ಗೆ ಬೆಂಕಿಹೊತ್ತಿ ಸ್ಫೋಟಗೊಂಡಿವೆ (Blast) ಎನ್ನಲಾಗುತ್ತಿದೆ. ಇದರ ಪರಿಣಾಮ ಬೆಂಕಿ ಹೊತ್ತಿಕೊಂಡು ಉರಿದಿದ್ದು, ಸ್ಟೇಷನ್ ವೈರ್ ಗಳು ಸಹ ಬೆಂಕಿಗೆ ಸುಟ್ಟು ಕರಕಲಾಗಿವೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸಲು ಹರಸಹಾಸ ಪಟ್ಟಿದ್ದಾರೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಜೀವ ಹಾನಿ ಸಂಭವಿಸಿಲ್ಲ ಎಂದು ಮೂಲಗಳು ತಿಳಿಸಿವೆ.


[ays_poll id=3]