This is the title of the web page
This is the title of the web page
State NewsVideo News

ರಾಯಚೂರು 220 ಕೆ.ವಿ. ಸ್ಟೇಷನಲ್ಲಿ ಮತ್ತೆ ಅಗ್ನಿ ಅವಘಡ..


K2kannadanews.in

fire accident ರಾಯಚೂರು : 220 ಕೆ.ವಿ. ಸ್ಟೇಷನ್ (KV station) ನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಮತ್ತೆ ಹೊತ್ತಿಕೊಂಡ ಘಟನೆ ನಡೆದಿದ್ದು ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ.

ರಾಯಚೂರು ನಗರದ 220 ಕೆ.ವಿ. ಸ್ಟೇಷನ್ ನಲ್ಲಿ ಇತ್ತೀಚೆಗಷ್ಟೇ ರಾತ್ರಿ ಬೆಂಕಿ ಅವಘಡ ಸಂಭವಿಸಿ, ಶಾರ್ಟ್ ಸರ್ಕ್ಯೂಟ್ ನಿಂದ ಮೂರು ಟ್ರಾನ್ಸ್ ಫಾರ್ಮರ್ ಗೆ ಬೆಂಕಿಹೊತ್ತಿ ಸ್ಫೋಟಗೊಂಡ ಘಟನೆ ಮಾಸುವ ಮುನ್ನವೇ ಇಂದು ಮತ್ತೇ ಅದೇ 110 ಕೆ.ವಿ ಕೇಂದ್ರದಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ನಗರ ಪ್ರದೇಶದಲ್ಲಿ ಒಂದು ಗಂಟೆಗು ಹೆಚ್ಚು ಕಾಲ ಪವರ್ ಕಟ್ ಮಾಡಲಾಗಿತ್ತು, ಗ್ರಾಮಾಂತರ ಭಾಗದಲ್ಲಿ ಒಂದಷ್ಟು ಸಮಯ ತೆಗೆದುಕೊಳ್ಳಲಿದೆ.

ಒಟ್ಟಾರೆ ಇದನ್ನು ನೋಡಿದಾಗ ಪದೆ ಪದೆ ಇಂಥಾ ಘಟನೆ ಮರುಕಳಿಸುತ್ತಿರುವುದು ನೋಡಿದರೆ ಜೆಸ್ಕಾಂ ಇಲಾಖೆ ಸಿಬ್ಬಂದಿಗಳ ನಿರ್ವಹಣೆ ಕೊರತೆ ಎದ್ದು ಕಾಣುತ್ತಿದೆ. ಇನ್ನೊಂದು ಕಡೆ ಬಿಸಿಲಿನ ತಾಪಕ್ಕೆ ಇಂಥಾ ಘಟನೆಗಳು ಮರುಕಳಿಸುತ್ತಿವೆಯೋ ಎಂಬ ಅನುಮಾನಗಳು ಕಾಡುತ್ತಿವೆ.


[ays_poll id=3]